ರಾಜ್ಯ

ಸರ್ಕಾರಿ ಗೌರವದೊಂದಿಗೆ ಮಾಮನಿ ಅಂತ್ಯಕ್ರಿಯೆ

ಅನಾರೋಗ್ಯದಿಂದ ನಿನ್ನೆ ರಾತ್ರಿ ನಿಧನರಾದ ವಿಧಾನಸಭೆಯ ಉಪಾಧ್ಯಕ್ಷ ಆನಂದ ಮಾಮನಿಯವರ ಅಂತ್ಯಕ್ರಿಯೆ ಇಂದು ಸಂಜೆ ಅವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸಚಿವರುಗಳು ಅಂತ್ಯಕ್ರಿಯೆಲಲ್ಲಿ ಭಾಗಿಯಾಗುವರು.ಕಳೆದ ಒಂದೂವರೆ ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆನಂದ ಮಾಮನಿ ಅವರು ನಿನ್ನೆ ಮಧ್ಯರಾತ್ರಿ ೧೨ರ ಸುಮಾರಿಗೆ ಕೊನೆಯುಸಿರೆಳೆದಿದ್ದರು.

ಬೆಳಗಾವಿಯ ಸವದತ್ತಿ ಯಲ್ಲಮ್ಮ ಮತಕ್ಷೇತ್ರದಿಂದ ಸತತ ೩ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಆನಂದ ಮಾಮನಿ ಅವರು ಅಜಾತಶತ್ರು ಆಗಿದ್ದರು. ತಮ್ಮ ಮೃಧು ಸ್ವಭಾವದಿಂದಾಗಿ ಜನಾನುರಾಗಿಯೂ ಆಗಿದ್ದರು.

ಆನಂದ ಮಾಮನಿಯವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.ತಂದೆ ಹಾದಿ ಹಿಡಿದ ಮಗಆನಂದ್ ಮಾಮನಿ ಅವರ ತಂದೆ ದಿ. ಚಂದ್ರಶೇಖರ ಎಂ ಮಾಮನಿ ಅವರು ೧೯೯೫-೯೯ ಅವಧಿಯಲ್ಲಿ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದರು.

ಆ ಸ್ಥಾನವನ್ನೇ ಆನಂದ ಮಾಮನಿ ಕೂಡ ಈಗ ಅಲಂಕರಿಸಿದ್ದರು.ಚಂದ್ರಶೇಖರ ಮಾಮನಿ ಅವರೂ ಸಹ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದಾಗಲೇ ಇಹಲೋಕ ತ್ಯಜಿಸಿದ್ದರು. ಕಾಕತಾಳೀಯವೆಂಬಂತೆ ಮಗ ಅನಂದ ಮಾಮನಿ ಸಹ ಸಾವಿನಲ್ಲೂ ತಂದೆಂiiನ್ನೇ ಅನುಸರಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಮಾಮನಿ ಅವರ ಕುರಿತು ತಿಂಗಳ ಹಿಂದೆ ಹಲವು ವದಂತಿಗಳು ಹರಿದಾಡಿದ್ದವು. ಆಗ ಆಸ್ಪತ್ರೆಯಿಂದಲೇ ವೀಡಿಯೋ ಮೂಲಕ ಮಾಮನಿಯವರು ನಾನು ಆರೋಗ್ಯವಾಗಿದ್ದೇನೆ. ಜೀವನದಲ್ಲಿ ಕಷ್ಟ, ರೋಗ ಸಹಜ, ಅದನ್ನು ಜಯಿಸಿ ಮತ್ತೆ ಬಂದು ನಿಮ್ಮ ಸೇವೆ ಮಾಡುತ್ತೇನೆ ಎಂದಿದ್ದರು.

ದಸರೆಯ ಸಂದರ್ಭದಲ್ಲೂ ಜನತೆಗೆ ಶುಭಾಶಯ ತಿಳಿಸಿದ್ದರು. ಅವರು ಆರೋಗ್ಯವಾಗಿ ಮರಳಲಿ ಎಂದು ಕಾರ್ಯಕರ್ತರು, ಅಭಿಮಾನಿಗಳು ಕ್ಷೇತ್ರದ ವಿವಿಧ ಕ್ಷೇತ್ರಗಳಲ್ಲಿ ಪೂಜೆ, ಪಾದಯಾತ್ರೆ, ಉರುಳು ಸೇವೆ ಮಾಡಿದ್ದರು. ಆದರೂ ಅವರ ಪ್ರಾರ್ಥನೆ ಫಲಿಸಲಿಲ್ಲ.

ರಾಜಕೀಯ ಕುಟುಂಬರಾಜಕೀಯ ಕುಟುಂಬದ ಹಿನ್ನೆಲೆಯಲ್ಲಿ ಬಂದ ಮಾಮನಿ, ೧೯೬೬ರ ಜ. ೧೮ ರಂದು ಸವದತ್ತಿಯಲ್ಲಿ ಚಂದ್ರಶೇಖರ ಮಾಮನಿ ಮತ್ತು ಗಂಗಮ್ಮ ಅವರ ಉದರದಲ್ಲಿ ಜನಿಸಿದ್ದರು. ಬಿಕಾಂ ಪದವೀಧರರಾಗಿದ್ದರು, ತಂದೆ ಚಂದ್ರಶೇಖರ ಮಾಮನಿ ೨ ಬಾರಿ ಶಾಸಕರಾಗಿ ಒಮ್ಮೆ ಉಪಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಇವರ ದೊಡ್ಡಪ್ಪನ ಮಗ ವಿಶ್ವನಾಥ್ ಮಾಮನಿ ಸಹ ಒಂದು ಬಾರಿ ಶಾಸಕರಾಗಿದ್ದರು. ಆನಂದ ಮಾಮನಿ ೨೦೦೮ರಲ್ಲಿ ಬಿಜೆಪಿಯಿಂದ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದ ಇವರು, ನಂತರ ೨೦೧೩, ೨೦೧೮ರ ಚುನಾವಣೆಯಲ್ಲೂ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ಸವದತ್ತಿಯಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ್ದ ಮಾಮನಿ ಅವರ ಅಭಿಮಾನಿ ಬಳಗದವರು ಸವದತ್ತಿ ಮೋದಿ, ಸೋಲಿಲ್ಲದ ಸರದಾರ, ಸವದತ್ತಿ ಸಾಹುಕಾರ ಎಂಬೆಲ್ಲ ಪ್ರೀತಿಯಿಂದ ಕರೆಯುತ್ತಿದ್ದರು.

ಶೋಕವಿಧಾನಸಭೆಯ ಉಪಾಧ್ಯಕ್ಷರಾಗಿದ್ದ ಆನಂದ್ ಮಾಮನಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರು, ಶಾಸಕರುಗಳು ಶೋಕ ವ್ಯಕ್ತಪಡಿಸಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button