ಅಪರಾಧರಾಷ್ಟ್ರಿಯ

ಸರ್ಕಾರಿ ಉದ್ಯೋಗಕ್ಕಾಗಿ ಹೆಬ್ಬೆರಳ ಚರ್ಮವನ್ನೇ ತೆಗೆದು ಬೇರೆಯವರಿಗೆ ಅಂಟಿಸಿದ ಭೂಪ..!

ಸರ್ಕಾರಿ ಉದ್ಯೋಗ ಪಡೆಯಲು ನಾನಾ ಕಸರತ್ತು ನಡೆಸುತ್ತಾರೆ. ಆದರೆ ಇಲ್ಲಿನ ಮಹಾಶಯನೊಬ್ಬ ತನ್ನ ಹೆಬ್ಬೆರಳಿನ ಚರ್ಮವನ್ನೇ ತೆಗೆದು ಮತ್ತೊಬ್ಬನಿಗೆ ನೀಡಿ ರೈಲ್ವೆ ಉದ್ಯೋಗ ಗಿಟ್ಟಿಸಲು ನಡೆಸಿದ ಅಕ್ರಮವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೆಂಬ ಹಂಬಲದೊಂದಿಗೆ ಹಲವು ಬಾರಿ ಪರೀಕ್ಷೆ ಬರೆದಿದ್ದ. ಆದರೆ ಉತ್ತೀರ್ಣನಾಗಿರಲಿಲ್ಲ.

ತನ್ನ ಸ್ನೇಹಿತನ ಜಾಣ್ಮೆ ಹಾಗೂ ಪ್ರತಿಭಾನ್ವಿತೆಯನ್ನು ಅರಿತಿದ್ದ ಆತ ತನ್ನ ಹೆಬ್ಬೆರಳನ್ನು ಬಿಸಿ ನೀರಿನಲ್ಲಿ ಅದ್ದಿ ಚರ್ಮವನ್ನು ತೆಗೆದು ಆತನ ಹೆಬ್ಬೆರಳಿಗೆ ಅಂಟಿಸಿ ಪರೀಕ್ಷೆ ಬರೆಸಿದ್ದ ವಿಚಿತ್ರ ಘಟನೆ ಬಹಿರಂಗಗೊಂಡಿದೆ.ಘಟನೆ ವಿವರ:

ಕಳೆದ ಆ. 22ರಂದು ಗುಜರಾತ್‍ನ ವಡೋದರರಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆಗೆ ಮೊದಲು ಬಯೋಮ್ಯಾಟ್ರಿಕ್ ಮೂಲಕಪರಿಶೀಲನೆ ಕಾರ್ಯ ನಡೆದಿತ್ತು. ಮನೀಶ್ ಕುಮಾರ್ ಇದರಲ್ಲಿ ಪಾಲ್ಗೊಳ್ಳಬೇಕಾಯಿತು.

ಆದರೆ ತನ್ನ ಅದೃಷ್ಟ ಸರಿಯಿಲ್ಲ ಎಂದು ಹೇಳಿ ತನ್ನ ಸ್ನೇಹಿತ ರಾಜಗುರುಗುಪ್ತನ ಬಳಿ ತನ್ನ ಅಳಲು ತೋಡಿಕೊಂಡು ಆತನ ಮನವೊಲಿಸಿ ಹೆಬ್ಬೆರಳಿನ ಚರ್ಮವನ್ನೇ ಅಂಟಿಸಿದ್ದ. ಯಾರಿಗೂ ಅನುಮಾನ ಬರದ ರೀತಿಯಲ್ಲಿ ಅದನ್ನು ಸ್ವಚ್ಛಗೊಳಿಸಿದ್ದ.

ರಾಜಗುರುಗುಪ್ತ ಒಲ್ಲದ ಮನಸ್ಸಿನಿಂದ ಪರೀಕ್ಷಾ ಕೇಂದ್ರದತ್ತ ಬಂದು ಬಯೋಮ್ಯಾಟ್ರಿಕ್ಸ್ ಗೆ ಹೆಬ್ಬೆರಳನ್ನು ಒತ್ತುವ ಮುನ್ನ ಕೋವಿಡ್ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೈಗೆ ಸ್ಯಾನಿಟೈಸರ್ ಹಚ್ಚುವಂತೆ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.ಅದರಂತೆ ಆತ ಕೈ ವರಿಸಿಕೊಂಡಾಗ ಅಂಟಿಕೊಂಡಿದ್ದ ಚರ್ಮ ಸ್ವಲ್ಪ ಬಿಚ್ಚಿಕೊಂಡಿದೆ.

ಬಯೋಮ್ಯಾಟ್ರಿಕ್ಸ್‍ಗೆ ಹೆಬ್ಬೆರಳನ್ನು ಚರ್ಮ ಉದುರಿಹೋಗಿದೆ. ಇದನ್ನು ಕಂಡ ಅಧಿಕಾರಿಗಳು ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಇಡೀ ನಾಟಕ ಬಹಿರಂಗ ಗೊಂಡಿದೆ.

ಇಬ್ಬರು 12ನೇ ತರಗತಿವರೆಗೂ ಒಟ್ಟಿಗೆ ವ್ಯಾಸಂಗ ಮಾಡಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲಕ್ಷ್ಮೀಪುರ ಪ್ರದೇಶದಲ್ಲಿ ರೈಲ್ವೆ ಇಲಾಖೆಯ ಡಿ ಗ್ರೂಪ್ ಹುದ್ದೆಗಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಇವರು ಹುದ್ದೆಗಿಡಿಸಲು ಈ ಅಕ್ರಮ ನಡೆಸಿದ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಎಂ. ವರೋಟಾರಿಯಾ ತಿಳಿಸಿದ್ದಾರೆ.

ಅಕ್ರಮಗಳನ್ನು ತಡೆಯಲು ಇಲ್ಲಿ ಬಯೋಮ್ಯಾಟ್ರಿಕ್ಸ್ ಬಳಸಲಾಗುತ್ತಿದ್ದು, ನಂತರ ಅವರ ಆಧಾರವನ್ನು ಕೂಡ ಲಿಂಕ್ ಮಾಡಲಾಗುತ್ತಿದೆ ಮತ್ತು ಹಲವು ಶಿಸ್ತು ಕ್ರಮಗಳನ್ನು ಕೂಡ ನಡೆಸುತ್ತಿದ್ದಾರೆ.

ಇತ್ತೀಚೆಗೆ ಬ್ಲೂಟೂತ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮಗಳು ದೇಶದಲ್ಲಿ ಬಹಿರಂಗಗೊಳ್ಳುತ್ತಿತ್ತು. ಈ ಮಹಾಶಯ ಇವೆಲ್ಲವನ್ನು ಮೀರಿ ಹೊಸ ತಂತ್ರ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button