ಸತ್ಯೇಂದರ್ ಜೈನ್ ವಿರುದ್ಧದ ಪ್ರಕರಣ ನಕಲಿ : ಕೇಜ್ರಿವಾಲ್

ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಂಪುಟದ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಳಯ ಬಂಧಿಸಿರುವುದರ ವಿರುದ್ಧ ಕಿಡಿಕಾರಿದ್ದು, ಈ ಪ್ರಕರಣ ಸಂಪೂರ್ಣವಾಗಿ ಸುಳ್ಳು ಮತ್ತು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.
ಎಎಪಿ ಪ್ರಾಮಾಣಿಕ ರಾಜಕೀಯ ಪಕ್ಷವಾಗಿದ್ದು, ಪ್ರಕರಣದಲ್ಲಿ ಶೇಕಡಾ ಒಂದಾದರೂ ಸತ್ಯಾಂಶವಿದ್ದರೆ ಜೈನ್ ವಿರುದ್ಧ ತಾವೇ ಕ್ರಮ ಕೈಗೊಳ್ಳುತ್ತಿದ್ದದ್ದಾಗಿ ಎಂದು ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ.ನಾನು ಜೈನ್ ವಿರುದ್ಧದ ಪ್ರಕರಣವನ್ನು ಅಧ್ಯಯನ ಮಾಡಿದ್ದೇನೆ.
ಇದು ಸಂಪೂರ್ಣವಾಗಿ ನಕಲಿ ಮತ್ತು ರಾಜಕೀಯ ಪ್ರೇರೇಪಿತವಾಗಿದೆ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ.
ಜೈನ್ ಸತ್ಯದ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಮತ್ತು ಅವರು ನಿರ್ದೋಷಿಯಾಗಿ ಹೊರಬರುತ್ತಾರೆ ಎಂದು ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ವೇಳೆ ತಿಳಿಸಿದರು.
ಪಂಜಾಬ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಜನವರಿಯಲ್ಲೇ ಜೈನ್ ಅವರನ್ನು ಇಡಿ ಬಂಧಿಸಬಹುದು ಎಂದು ಮೂಲಗಳಿಂದ ತಮಗೆ ಮಾಹಿತಿ ಇತ್ತು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಆರೋಗ್ಯ ಸಚಿವರ ಜೈನ್ ಅವರನ್ನು ಇಡಿ ಸೋಮವಾರ ಬಂಸಿದೆ.