ಸತತ 11 ದಿನ, 13,560 ಕಿ.ಮೀ. ಹಾರಿ ಗಿನ್ನೆಸ್ ವಿಶ್ವದಾಖಲೆ ಬರೆದ ಪಕ್ಷಿ!

ಆಲಾಸ್ಕದಿಂದ ಆಸ್ಟ್ರೇಲಿಯಾದ ತಾಸ್ಮೇನಿಯಾವರೆಗಿನ 8435 ಮೈಲು ಅಂದರೆ 13,560 ಕಿ.ಮೀ. ದೂರದವರೆಗೆ ಪಕ್ಷಿಯೊಂದು ಎಲ್ಲೂ ವಿರಮಿಸದೇ ಗುರಿ ತಲುಪುವ ಮೂಲಕ ಗಿನ್ನೆಸ್ ವಿಶ್ವದಾಖಲೆ ಬರೆದಿದೆ.
ಗಾಡ್ ವಿಟ್ ಹೆಸರಿನ ಈ ಪಕ್ಷಿ (Limosa lapponica) 234684 ಸಂಖ್ಯೆ ಹೊಂದಿದ್ದು, ಈ ಪಕ್ಷಿ ಆಹಾರಕ್ಕಾಗಿ ಅಥವಾ ವಿಶ್ರಾಂತಿಗಾಗಿ ಎಲ್ಲೂ ಕೆಳಗಿಳಿದು ವಿಶ್ರಮಿಸದೇ 13,560 ಕಿ.ಮೀ. ದೂರದವರೆಗೆ ಸತತವಾಗಿ ಹಾರಿ ವಿಶ್ವದಾಖಲೆ ಬರೆದಿದೆ.ವಲಸೆ ಪಕ್ಷಿಯೊಂದು ಇಷ್ಟು ದೂರ ಹಾರಿರುವುದು ದಾಖಲೆಯಾಗಿದೆ.
ಆಲಾಸ್ಕದಿಂದ ತಾಸ್ಮೇನಿಯಾದವರೆಗಿನ ದೂರ ಲಂಡನ್ ನಿಂದ ನ್ಯೂಯಾರ್ಕ್ ನಡುವಿನ ಎರಡು ಪಟ್ಟು ದೂರಕ್ಕೆ ಸಮವಾಗಿದೆ. ಅಂದರೆ ಭೂಮಿಯ ಮುಕ್ಕಾಲು ಸುತ್ತು ಸುತ್ತುವುದಕ್ಕೆ ಸಮವಾಗಿದೆ.
5ಜಿ ನೆಟ್ ವರ್ಕ್ ಮೂಲಕ ಪಕ್ಷಿ ಹಾರಾಟವನ್ನು ಗಮನಿಸಲಾಗಿದ್ದು, 2022 ಅಕ್ಟೋಬರ್ 13ರಂದು ಈ ಪಕ್ಷಿ ಪ್ರಯಾಣ ಆರಂಭಿಸಿದ್ದು, ಸತತ 11 ದಿನ 1 ಗಂಟೆ ಕಾಲ ಎಲ್ಲೂ ನಿಲ್ಲದೇ ಈ ಪಕ್ಷಿ ಒಂದೇ ಸಮ ಹಾರಾಟ ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಗಾಡ್ವಿಟ್ ಪಕ್ಷಿ 2020ರಲ್ಲಿ 217 ಮೈಲು ಹಾರಾಟ ನಡೆಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ ಈ ಬಾರಿ ಅದರ ನೂರು ಪಟ್ಟು ಹೆಚ್ಚು ದೂರ ಕ್ರಮಿಸಿ ಗಿನ್ನೆಸ್ ದಾಖಲೆ ಬರೆದಿದೆ.