ಸಂಪೂರ್ಣ ಬೆತ್ತಲಾದ ರಣವೀರ್ ಸಿಂಗ್; ದೀಪಿಕಾ ಪಡುಕೋಣೆ ಪತಿಯ ಹಲವು ಫೋಟೋ ವೈರಲ್

ಇಷ್ಟು ದಿನಗಳ ಕಾಲ ನಟ ರಣವೀರ್ ಸಿಂಗ್ (Ranveer Singh) ಅವರು ಬಟ್ಟೆಗಳ ವಿಚಾರದಲ್ಲಿ ಗಮನ ಸೆಳೆಯುತ್ತಿದ್ದರು. ಆದರೆ ಈಗ ಅವರು ಬಟ್ಟೆಗಳೇ ಇಲ್ಲದೇ ಸುದ್ದಿ ಆಗಿದ್ದಾರೆ. ಅಂದರೆ, ಕಿಂಚಿತ್ತೂ ಬಟ್ಟೆ ಧರಿಸದೇ ಕಾಣಿಸಿಕೊಂಡಿದ್ದಾರೆ! ಹೌದು, ಸಂಪೂರ್ಣ ಬೆತ್ತಲಾಗಿ ಅವರು ಪೋಸ್ ನೀಡಿದ್ದಾರೆ. ಅವರ ಅನೇಕ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸ್ಟಾರ್ ನಟನ ಈ ನಡೆಯನ್ನು ಅನೇಕರು ಖಂಡಿಸಿದ್ದಾರೆ. ಕಮೆಂಟ್ ಬಾಕ್ಸ್ನಲ್ಲಿ ದೀಪಿಕಾ ಪಡುಕೋಣೆ (Deepika Padukone) ಅವರ ಗಮನ ಸೆಳೆಯಲು ನೆಟ್ಟಿಗರು ಪ್ರಯತ್ನಿಸಿದ್ದಾರೆ. ಅಂದಹಾಗೆ, ರಣವೀರ್ ಸಿಂಗ್ ಅವರು ಈ ರೀತಿ ಬೆತ್ತಲಾಗಿ ಪೋಸ್ ನೀಡಿರುವುದು ‘ಪೇಪರ್’ ಮ್ಯಾಗಜಿನ್ (Paper magazine) ಮುಖಪುಟಕ್ಕಾಗಿ. ಇದರ ಹೊಸ ಸಂಚಿಕೆಯಲ್ಲಿ ನಗ್ನ ಫೋಟೋಗಳ ಜೊತೆಗೆ ರಣವೀರ್ ಸಿಂಗ್ ಅವರ ಸಂದರ್ಶನ ಕೂಡ ಪ್ರಕಟ ಆಗಿದೆ.
ರಣವೀರ್ ಸಿಂಗ್ ಅವರು ನೇರ ನಡೆ-ನುಡಿಯ ಕಾರಣದಿಂದ ಫೇಮಸ್ ಆಗಿದ್ದಾರೆ. ತಮಗೆ ಇಷ್ಟಬಂದ ರೀತಿಯಲ್ಲಿ ಅವರು ಬಟ್ಟೆ ಧರಿಸುತ್ತಾರೆ. ಎಷ್ಟೇ ಟ್ರೋಲ್ ಆದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಈ ಬಾರಿ ಅವರು ಬಟ್ಟೆಯನ್ನೇ ಧರಿಸಿಲ್ಲ. ಹೀಗೆ ಸಂಪೂರ್ಣ ಬೆತ್ತಲಾಗಿ ಅವರು ಪೋಸ್ ನೀಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಉಂಟುಮಾಡಿದೆ.
‘ನಟಿಸುವಾಗ ಬೆತ್ತಲಾಗುವುದು ನನಗೆ ತುಂಬ ಸುಲಭ. ಸಾವಿರಾರು ಜನರ ಎದುರಿನಲ್ಲಿ ನಾನು ನಗ್ನವಾಗಬಲ್ಲೆ. ಆದರೆ ಅವರಿಗೆ ಮುಜುಗರ ಆಗುತ್ತದೆ ಅಷ್ಟೇ’ ಎಂದು ರಣವೀರ್ ಸಿಂಗ್ ಹೇಳಿದ್ದಾರೆ. ಹಲವಾರು ಟ್ರೋಲ್ ಪೇಜ್ಗಳಲ್ಲಿ ಈ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ. ಅನೇಕರು ನೆಗೆಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ‘ದೀಪಿಕಾ ಪಡುಕೋಣೆ ಅವರೇ.. ಈ ಕಡೆ ಸ್ವಲ್ಪ ನೋಡಿ’ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.