ರಾಜಕೀಯರಾಜ್ಯ

ಸಂಕ್ರಾಂತಿ ಬಳಿಕ ತಮ್ಮ ಪಕ್ಷದ ಪ್ರಣಾಳಿಕೆ ಪ್ರಕಟಿಸಲು ಗಾಲಿ ಜನಾರ್ದನ ರೆಡ್ಡಿ ನಿರ್ಧಾರ

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಂದ ಸಿಗುತ್ತಿರುವ ಸ್ಪಂದನೆಯನ್ನು ನೋಡಿದರೆ, ನಮ್ಮ ಪಕ್ಷ ಬಲವನ್ನು ಹೆಚ್ಚಿಸಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು. ಈ ಮೂಲಕ ಪ್ರಾದೇಶಿಕ ಪಕ್ಷ ಕಟ್ಟಿದವರ ಸ್ಥಿತಿ ಇತಿಹಾಸವೇ ಹೇಳುತ್ತೆ ಎಂಬ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಹೇಳಿಗೆ ತಿರುಗೇಟು ನೀಡಿದರು. ರೆಡ್ಡಿ ಮತ್ತು ಅವರ ಪತ್ನಿ ಅರುಣಾ ಲಕ್ಷ್ಮಿ ಅವರು ಪಕ್ಷವನ್ನು ಪ್ರಾರಂಭಿಸಿದ ತಕ್ಷಣ ಗಂಗಾವತಿಯಿಂದ ಬಳ್ಳಾರಿ ವಿಧಾನಸಭಾ ಕ್ಷೇತ್ರಗಳಿಗೆ ಮುಸ್ಲಿಂ ಮತ್ತು ಕುರುಬ ಸಮುದಾಯಗಳನ್ನು ಓಲೈಸಲು ಯತ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್ನ ಸಾಂಪ್ರದಾಯಿಕ ಮತ ಬ್ಯಾಂಕ್ ಅನ್ನು ಗುರಿಯಾಗಿಸಿಕೊಂಡು ಕಲ್ಯಾಣ ಕರ್ನಾಟಕ ಭಾಗದ ಎರಡನೇ ಹಂತದ ನಾಯಕರೊಂದಿಗೆ ರೆಡ್ಡಿ ಅವರು ಸ್ನೇಹ ಬೆಳೆಸಿದ್ದು, ಜನವರಿ 11 ರಂದು ಗಂಗಾವತಿಯಲ್ಲಿ ನಡೆಯಲಿರುವ ಅವರ ಜನ್ಮದಿನವು ಅವರಿಗೆ ಪ್ರಗತಿಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕೆಆರ್ಪಿಪಿ ಬಿಜೆಪಿಗೆ ಯಾವುದೇ ದಕ್ಕೆ ತಂದೊಡ್ಡುವುದಿಲ್ಲ ಎಂದು ರೆಡ್ಡಿ ಅವರ ಮಾಜಿ ಸಹಾಯಕ ಮತ್ತು ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಹೇಳಿದ್ದಾರೆ. ಬಿಜೆಪಿಯ ಹಿರಿಯ ನಾಯಕರು ಕೂಡ ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಕೆಆರ್ಪಿಪಿ ಬಿಜೆಪಿಗೆ ಧಕ್ಕೆಯನ್ನು ತರುವುದಿಲ್ಲ. ಬದಲಿಗೆ ಕಾಂಗ್ರೆಸ್ ಮತಗಳಿದೆ ಸಮಸ್ಯೆಯನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ

Related Articles

Leave a Reply

Your email address will not be published. Required fields are marked *

Back to top button