Uncategorized

ಶ್ರೀ ಸಿದ್ಧಾರ್ಥ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕಾಲೇಜಿನಲ್ಲಿ ರಕ್ತದಾನ ಮತ್ತು ನೇತ್ರದಾನ ಶಿಬಿರವನ್ನು NS EYE Foundation ಸಹಭಾಗಿತ್ವದಲ್ಲಿ ನಡೆಯಿತು

NCIB ತುಮಕೂರು-ಶ್ರೀ ಸಿದ್ಧಾರ್ಥ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ತುಮಕೂರು ದಿನಾಂಕ: 09-06-2022ರಂದು ರಕ್ತದಾನ ಮತ್ತು ನೇತ್ರದಾನ (Eye Donation Awareness & Blood Camp) ಶಿಬಿರವನ್ನು NS EYE Foundation ಸಹಭಾಗಿತ್ವದಲ್ಲಿ ಬೆಳಿಗ್ಗೆ 10.30 ಗಂಟೆಗೆ SSIMS ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.

ಈ ಶಿಬಿರದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ|| ಬಿ.ಅಜ್ಮತುವುಲ್ಲಾ ಮತ್ತು ಡಾ||.ಶ್ರೀಧರ್ ಮತ್ತು ಶ್ರೀಯುತ. ಕೆಲ್ ವಿನ್ ಹಾಗೂ ತಂಡದವರು ಶಿಬಿರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಶಿಬಿರದಲ್ಲಿ 40ಕ್ಕೂ ಹೆಚ್ಚು ಯುನಿಟ್ ಗಳು ರಕ್ತಸಂಗ್ರಹವಾಯಿತು. 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೇತ್ರದಾನ ಮಾಡಿ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ.

ಈ ಶಿಬಿರವನ್ನು SSIMS ಪ್ರಥಮ MBA ವಿದ್ಯಾರ್ಥಿಗಳಾದ ಪುನೀತ್ ಮತ್ತು ತಂಡದವರು ಆಯೋಜಿಸಿದ್ದರು ಹಾಗೂ ಈ ಶಿಬಿರವನ್ನು ಕರ್ನಾಟಕದ ರಾಜಕುಮಾರ ಡಾ||.ಪುನೀತ್ ರಾಜ್ ಕುಮಾರ್ ರವರಿಗೆ.ಅರ್ಪಿಸಲಾಗಿದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button