ಶ್ರೀ ಅಹಲ್ಯಾಬಾಯಿ ಹೋಳ್ಕರ್ ರವರ 296 ನೇ ಜಯಂತಿ ಹಾಗೂ ಪಪೂ ಶ್ರೀ ಶ್ರೀ ಡಾ. ಶಿವಾನಂದಪುರಿ ಮಹಾಸ್ವಾಮೀಜಿರವರ 61ನೇ ಹುಟ್ಟುಹಬ್ಬವೂ ಅರ್ಥಪೂರ್ಣವಾಗಿ ಜರುಗಿತು.

ಅರಸೀಕೆರೆ ತಾಲೂಕಿನ ಬಾಣಾವರದ ಕನಕ ಭವನದಲ್ಲಿ ನಡೆದ ಶ್ರೀ ಅಹಲ್ಯಾಬಾಯಿ ಹೋಳ್ಕರ್ ರವರ 296 ನೇ ಜಯಂತಿ ಹಾಗೂ ಪಪೂ ಶ್ರೀ ಶ್ರೀ ಡಾ. ಶಿವಾನಂದಪುರಿ ಮಹಾಸ್ವಾಮೀಜಿರವರ 61ನೇ ಹುಟ್ಟುಹಬ್ಬವೂ ಅರ್ಥಪೂರ್ಣವಾಗಿ ಜರುಗಿತು. ಪೂಜ್ಯ ಶ್ರೀಗಳ ಆತ್ಮೀಯ ಒಡನಾಟ ಇರುವ ಉಭಯ ಶ್ರೀಗಳಿಂದ ವೇದಿಕೆಯು ಅಲಂಕೃತವಾಗಿತ್ತು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಶ್ರೀ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವು ಮಹತ್ವಪೂರ್ಣ ಆಚರಣೆಗೆ ಸಾಕ್ಷಿಯಾಗಿತ್ತು.
ಪೂಜ್ಯಶ್ರೀಗಳ ಹುಟ್ಟು ಹಬ್ಬದ ವಿಶೇಷ ಅಂಕಣವನ್ನು ಪಬ್ಲಿಕ್ ಸ್ಟಾರ್ ದಿನಪತ್ರಿಕೆ ಬಿಡುಗಡೆ ಮಾಡುವ ಮೂಲಕ ಸ್ವಾಮೀಜಿಗಳು ಹಾಗೂ ಮುಖಂಡರುಗಳು ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಾಸನದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ ಪೂ ಶ್ರೀ ಶ್ರೀ ಶಂಭುನಾಥ ಮಹಾಸ್ವಾಮೀಜಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಪೂಜ್ಯ ಶ್ರೀ ಶ್ರೀ ಡಾ ಶಿವಾನಂದಪುರಿ ಮಹಾಸ್ವಾಮೀಜಿಯವರು ಪರಮ ಪೂಜ್ಯ ಜಗದ್ಗುರು ಪದ್ಮಭೂಷಣ ಡಾ.ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಅಚ್ಚು ಮೆಚ್ಚಿನ ಶಿಷ್ಯರು, ಅದ್ವೈತ ವೇದಾಂತವನ್ನು ಸುಮಾರು 13 ವರ್ಷ ವ್ಯಾಸಂಗ ಮಾಡಿ ತದನಂತರದಲ್ಲಿ ಎಚ್.ವಿಶ್ವನಾಥ್ ರ ಆಹ್ವಾನದ ಮೇರೆಗೆ ಪೂಜ್ಯರು ಕಾಗಿನೆಲೆ ಕನಕ ಗುರುಪೀಠ ಮೈಸೂರು ವಿಭಾಗ ಕೆ.ಆರ್ ನಗರದಲ್ಲಿ ಮಠ ಸ್ಥಾಪನೆಯಾದಾಗ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡರು, ಜ್ಯೋತಿ ತನ್ನನ್ನು ತಾನುಸುಟ್ಟುಕೊಂಡು ಲೋಕಕ್ಕೆ ಬೆಳಕು ಕೊಡುವಂತೆ ಪೂಜ್ಯರು ಶ್ರೀಮಠದ ಸೇವೆಯಲ್ಲಿ ಹಾಗೂ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ಬಂದಿರುವುದು ಶ್ಲಾಘನೀಯವಾಗಿದೆ. ಪೂಜ್ಯರು ಮೈಸೂರು ಸೀಮೆಯ ಸುತ್ತಮುತ್ತಲು ವಿದ್ಯಾರ್ಥಿಗಳಿಗೆ ವಸತಿ ನಿಲಯ, ಶಾಲಾ ಕಾಲೇಜು ಹಾಗೂ ಸಮುದಾಯ ಭವನಗಳನ್ನು ಅತಿ ಕಡಿಮೆ ಸಮಯದಲ್ಲಿ ವೇಗವಾಗಿ ಮಾಡಿದ್ದಾರೆ, ಇಂತಹ ಶ್ರೀಗಳು ಕನಕ ಪೀಠದಲ್ಲಿ ಇರುವುದು ಸಮಾಜಕ್ಕೆ ಕಿರೀಟವಿದ್ದಂತೆ ಎಂದು ಆಶೀರ್ವಚನ ನೀಡಿದರು.
ಕಬೀರಾನಂದಾಶ್ರಮದ ಪೂಜ್ಯ ಶಿವಲಿಂಗಾನಂದ ಸ್ವಾಮೀಜಿಯವರು ಮಾತನಾಡಿ ಲಿಂಗೈಕ್ಯ ಜಗದ್ಗುರುಗಳಾದ ಪೂಜ್ಯ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾ ಪೀಠಾಧ್ಯಕ್ಷರಾದ ನಂತರ ಮೊದಲು ಶಿಷ್ಯರಾಗಿದ್ದು ಪೂಜೆ ಶಿವಾನಂದಪುರಿ ಸ್ವಾಮೀಜಿಯವರು, ಸದಾ ಕ್ರಿಯಾಶೀಲತೆ ಪರಿಶ್ರಮದಿಂದಲೇ ಮಠದಲ್ಲಿ ಬೆಳೆದು ಬಂದಿರುವುದು ನಮ್ಮ ಕಣ್ಣಮುಂದಿದೆ, ಪೂಜ್ಯರು 61ನೇ ಹುಟ್ಟುಹಬ್ಬದ ಜೊತೆಗೆ ಶತಮಾನೋತ್ಸವ ಆಚರಿಸಲಿ ಎಂದು ಹಾರೈಸಿದರು.
ಜಿ ಪಂ ಸದಸ್ಯರು, ಜಿ ಕುರುಬ ಸಂಘದ ಅಧ್ಯಕ್ಷರಾದ ಶ್ರೀ ಪಟೇಲ್ ಶಿವಪ್ಪನವರು, ಜಿ ಪಂ ಸದಸ್ಯರಾದ ಶ್ರೀ ಬೆಳಿಚೌಡಯ್ಯನವರು, ಜಿ.ಪಂ ಮಾಜಿ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ನಿಂಗಪ್ಪನವರು ತಾ ಕು ಸಂ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿರವರು ಸಭೆಯನ್ನು ಉದ್ದೇಶಿಸಿ ಪೂಜ್ಯರಿಗೆ ಶುಭಕಾಮನೆಗಳನ್ನು ತಿಳಿಸಿದರು.
ಸಮಾರಂಭದಲ್ಲಿ ಶೃಂಗೇರಿಯ ಪೂಜ್ಯ ಶ್ರೀ ಶ್ರೀ ಗುಣನಾಥ ಮಹಾಸ್ವಾಮೀಜಿರವರ, ಯಳನಾಡು ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ಶ್ರೀ ಜ್ಞಾನಪ್ರಭು ಸಿದ್ದರಾಮೇಶ್ವರ ಮಹಾಸ್ವಾಮೀಜಿರವರ, ಕಬ್ಬಳ್ಳಿ ಕ್ಷೇತ್ರದ ಪೂಜ್ಯ ಶ್ರೀ ಶ್ರೀ ಶಿವಪುತ್ರನಾಥ ಮಹಾಸ್ವಾಮೀಜಿರವರು, ದಸರಿಘಟ್ಟದ ಪೂಜ್ಯ ಶ್ರೀ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿರವರು,ಜಾವಗಲ್ ಶೂನ್ಯ ಫೌಂಡೇಶನ್ ನ ಪೂಜ್ಯ ಶ್ರೀ ಹರಿಜೀರವರು, ಕನಕಗುರುಪೀಠದ ಕಿರಿಯ ಶ್ರೀಗಳಾದ
ಪೂಜ್ಯ ಶ್ರೀ ನವೀನ್ ಸಾಯಿ ಸ್ವಾಮೀಜಿರವರು,
ಜಿ ಪಂ ಮಾ ಸದಸ್ಯರಾದ ಶ್ರೀ ಅಶೋಕ್, ತಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀ ಅನಂತ್ ಕುಮಾರ್, ಜಿ ಪಂ ಮಾ ಸದಸ್ಯರಾದ ಶ್ರೀ ಜಯಣ್ಣ, ಗ್ರಾ ಪಂ ಮಾಜಿ ಅಧ್ಯಕ್ಷರಾದ ಜಯಣ್ಣ, ಕರವೇ ಶ್ರೀ ಲಕ್ಷ್ಮೀಶ್, ಅರಸೀಕೆರೆ ಮಂಜಣ್ಣ,
ಅಹಲ್ಯಬಾಯಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಮಾ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು ಹಾಗೂ ಭಕ್ತಾದಿಗಳು ಹಾಜರಿದ್ದರು.