
ಶೋಕಿ ಮಾಡುವ ಸಲುವಾಗಿ ಪ್ರತಿದಿನ ಒಂದೊಂದು ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ತಾವರೆಕೆರೆ ಠಾಣೆ ಪೊಲೀಸರು ಬಂಧಿಸಿ ಮಿನಿ ಬಸ್, ಆಟೋ ಸೇರಿದಂತೆ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬನ್ನೇರುಘಟ್ಟ, ಸಂಪಿಗೆಹಳ್ಳಿ, 2ನೇ ಕ್ರಾಸ್ ನಿವಾಸಿ ಭರತ್ ಅಲಿಯಾಸ್ ಅಕೀರಾ(20) ಬಂಧಿತ ಆರೋಪಿ.
ಆರೋಪಿ ಭರತ್ ಇತರೆ ಆರೋಪಿಗಳಾದ ಪ್ರಜ್ವಲ್ ಮನೋಜ್, ಮುರುಳಿ ಅಲಿಯಾಸ್ ಕಲ್ಕಿ ಜೊತೆ ಪ್ರತಿದಿನ ಒಂದೊಂದು ಮೋಟಾರ್ ಸೈಕಲ್‍ಗಳನ್ನು ಕಳ್ಳತನ ಮಾಡಿ ಓಡಾಡಿಕೊಂಡು ಶೋಕಿ ಮಾಡುತ್ತಿದ್ದ. ಅಲ್ಲದೆ ಹಣ ಸಂಪಾದನೆ ಮಾಡಲು ಕಳ್ಳತನ ಮಾಡಿದ ವಾಹನಗಳನ್ನು ಮಾರಾಟ ಮಾಡುತ್ತಿದ್ದರು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.
ಮೇ 27ರಂದು ರಾತ್ರಿ 9.45ರ ಸುಮಾರಿನಲ್ಲಿ ತಾವರೆಕೆರೆ ದೊಡ್ಡ ಆಲದ ಮರದ ರಸ್ತೆಯಲ್ಲಿ ಚಂದ್ರ ಶೇಖರ್ ಮತ್ತು ನರಸಿಂಹಯ್ಯ ಎಂಬುವರು ಮಿನಿಬಸ್‍ನಲ್ಲಿ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಆಟೋದಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ದರೋಡೆಕೋರರು ಬಸ್‍ನ್ನು ಅಡ್ಡ ಹಾಕಿ ಬಸ್ಸಿನಲ್ಲಿದ್ದವರಿಗೆ ಚಾಕು ತೋರಿಸಿ ಬೆದರಿಸಿ ಬಲಹಂತವಾಗಿ ಬಸ್ ತೆಗೆದುಕೊಂಡು ಹೋಗಿದ್ದ ಬಗ್ಗೆ ಚಂದ್ರಶೇಖರ್ ಅವರು ತಾವರೆಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಸ್ ಮತ್ತು ಸುಲಿಗೆಕೋರರ ಪತ್ತೆಗಾಗಿ ಪೊಲೀಸ್ ಅೀಕ್ಷಕ ಸಂತೋಷ್ ಬಾಬು ಮತ್ತು ಮಾಗಡಿ ಉಪವಿಭಾಗದ ಪೊಲೀಸ್ ಉಪಾೀಕ್ಷಕರಾದ ಓಂಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಜಗದೀಶ್ ಅವರ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ತಂಡ ರಚನೆ ಮಾಡಲಾಗಿತ್ತು.
ಈ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಯೊಬ್ಬನನ್ನು ಬಂಧಿಸಿ ತಾವರೆಕೆರೆಯಲ್ಲಿ ಕಳವು ಮಾಡಿದ್ದ ಮಿನಿ ಬಸ್, ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಆಟೋ, ಬಿಡದಿ ಠಾಣೆಯ 2 ಬೈಕ್ ಕಳ್ಳತನ ಪ್ರಕರಣ, ಚನ್ನಮ್ಮನ ಕೆರೆಯ 2 ಪ್ರಕರಣ ಕುಂಬಳಗೋಡು, ಚನ್ನಮ್ಮನಕೆರೆ ಅಚ್ಚುಕಟ್ಟು, ಮಾದನಾಯಕನಹಳ್ಳಿ, ಕೆಂಪೇಗೌಡನಗರ, ಕೋಣನಕುಂಟೆ, ಬ್ಯಾಟರಾಯನಪುರ,ಕುಮಾರಸ್ವಾಮಿ ಲೇಔಟ್, ಜಿಗಣಿ ಮತ್ತು ಹೆಬ್ಬಗೋಡಿ ಠಾಣೆಯ ತಲಾ ಒಂದೊಂದು ಬೈಕ್ ಕಳ್ಳತನ ಪ್ರಕರಣಗಳನ್ನು ಬೇಧಿಸಿ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದೆ.
ಘಟನಾ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ವೇಳೆ ಸಾರ್ವಜನಿಕರು ಓಡಾಡಲು ಆತಂಕ ಮೂಡಿಸಿದ್ದ ಸುಲಿಗೆ ಪ್ರಕರಣವನ್ನು ಪೊಲೀಸರು ಬೇಸಿದ್ದಾರೆ. ಸಿಬ್ಬಂದಿಯ ಕಾರ್ಯ ವೈಖರಿ ಯನ್ನು ಶ್ಲಾಘಿಸಿದ್ದಾರೆ.