
ಭಾರತೀಯ ಸಂಸ್ಕೃತಿ, ಆರಾಧನೆ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಶೂ ಧರಿಸಿ ದೈವದ ಬಳಿ ದೀವಟಿಗೆ ಹಿಡಿದು ನಿಂತಿರುವ ಫೋಟೋ ವಿವಾವದ ಕಿಡಿಹಬ್ಬಿಸಿದೆ.
ತೇಜಸ್ವಿ ಸೂರ್ಯ ದೈವರಾಧಾನೆಗೆ ಅಪಮಾನ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಈ ಬಗ್ಗೆ ತೇಜಸ್ವಿ ಸೂರ್ಯ ಯಾವುದೇ ಹೇಳಿಕೆ ನೀಡಿಲ್ಲ.
ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೈವರಾಧನೆ ವೇಳೆ ಶೂ ಧರಿಸಿ ತೇಜಸ್ವಿ ಸೂರ್ಯ ದೈವದ ದೀವಟಿಗೆ ನಿಂತ ಫೋಟೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ವೈರಲ್ ಆಗಿದೆ.
ಫೋಟೋ ವೈರಲ್ ಬೆನ್ನಲ್ಲೇ ದೈವಾರಾಧನೆಗೆ ತೇಜಸ್ವಿ ಅವಮಾನ ಮಾಡಿದ್ದಾರೆ ಅಂತಾ ಆಕ್ರೋಶ ಹೊರಬಿದ್ದಿದೆ. ಸದ್ಯ ಈ ಫೋಟೊವನ್ನು ಸಾಮಾಜಿಕ ಜಾಲತಾಣದಿಂದ ಸಂಸದರು ಡಿಲೀಟ್ ಮಾಡಿದ್ದಾರೆ.