ಬೆಂಗಳೂರು

ಶೀಘ್ರವೇ ವಾರ್ಡ್ ಪುನರ್ ವಿಂಗಡಣೆ ವರದಿ ಕೊಡಿ; ಬಿಬಿಎಂಪಿಗೆ ಸುಪ್ರೀಂಕೋರ್ಟ್ ಆದೇಶದ.

ಬೆಂಗಳೂರು ಮೇ 23: ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಬಿಬಿಎಂಪಿ ವಾರ್ಡ್‌ಗಳ ಪುನರ್‌ ವಿಂಗಡಣೆ ಸಮಿತಿಯ ವರದಿಯನ್ನು ಶೀಘ್ರವೇ ಸರಕಾರಕ್ಕೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿಗೆ ಸೂಚಿಸಿದೆ.ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮುಖ್ಯ ಆಯುಕ್ತರ ನೇತೃತ್ವದಲ್ಲಿ ರಚನೆಯಾಗಿರುವ ಪುನರ್‌ ವಿಂಗಡಣೆ ಸಮಿತಿಯು, 2021 ರ ಜನವರಿಯಲ್ಲಿ ಜಾರಿಯಾಗಿರುವ ನೂತನ ಬಿಬಿಎಂಪಿ ಕಾಯಿದೆಯ ಪ್ರಕಾರ ಈಗಿರುವ ವಾರ್ಡ್ ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಿದೆ.ಈ ಕಾರ್ಯಕ್ಕೆ ಸಮಿತಿಯು ಒಂದೂವರೆ ವರ್ಷದಲ್ಲಿ ಮೂರು ಬಾರಿ ದಿನಾಂಕದ ವಿಸ್ತರಣೆ ಕೋರಿತ್ತು.

ಬಿಬಿಎಂಪಿ ಚುನಾವಣೆಗೆ ಮುಹೂರ್ತ ನಿಗದಿ, ಸುಪ್ರೀಂಕೋರ್ಟ್ ಹೇಳಿದ್ದೇನು?ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ದಾಖಲಿಸಿರುವ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್, ವಾರ್ಡ್‌ಗಳ ಪುನರ್‌ ವಿಂಗಡಣೆ ಹಾಗೂ ಮೀಸಲಾತಿ ಪೂರ್ಣಗೊಳಿಸಲು ಎಂಟು ವಾರಗಳ ಕಾಲವಕಾಶ ನೀಡಿದೆ ಎಂದು ನಗರಾಭಿವೃದ್ಧಿ ಇಲಾಖೆಯು ಪುನರ್‌ ವಿಂಗಡಣೆ ಸಮಿತಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಅಲ್ಲದೇ ವಾರ್ಡ್ ಪುನರ್‌ ವಿಂಗಡಣೆ ಕಾರ್ಯವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ, ಇದರಿಂದ ಮತದಾರರ ಪಟ್ಟಿ ಸಿದ್ಧಪಡಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಬರೆದಿದ್ದ ಪತ್ರವನ್ನು ಸಹ ಉಲ್ಲೇಖಿಸಲಾಗಿದೆ.ಬಿಬಿಎಂಪಿ ಸದಸ್ಯರ ಅಧಿಕಾರವಧಿ ಪೂರ್ಣಗೊಂಡ ನಾಲ್ಕು ತಿಂಗಳ ನಂತರ, 2021ರ ಜನವರಿಯಲ್ಲಿ ವಾರ್ಡ್ ಗಳ ಪುನರ್‌ ವಿಂಗಡಣೆ ಸಮಿತಿಯನ್ನು ರಚಿಸಲಾಯಿತು. ಕೊರೊನಾ ಪರಿಸ್ಥಿತಿ ಹಿನ್ನಲೆಯಲ್ಲಿ ಪುನರ್‌ ವಿಂಗಡಣೆ ಕಾರ್ಯಕ್ಕೆ ನಿಗದಿಪಡಿಸಿದ್ದ ಅವಧಿಯನ್ನು ಮೂರು ಬಾರಿ ವಿಸ್ತರಿಸಲಾಗಿತ್ತು.

ಬೆಂಗಳೂರು ಭೀಕರ ಮಳೆ: ಬಿಬಿಎಂಪಿ ಕ್ರಮಗಳೇನು?ಆಕ್ಷೇಪಣೆ ಸಲ್ಲಿಸಲು ಅನುವಾಗುವಂತೆ ಈ ಪುನರ್‌ ವಿಂಗಡಣೆ ವರದಿಯನ್ನು ಸರಕಾರವು ಸಾರ್ವಜನಿಕರ ಅವಗಾಹನೆಗೆ ತರುವ ನಿರೀಕ್ಷೆ ಇದೆ. ಪುನರ್ ವಿಂಗಡನೆಯ ಕರಡು ಪ್ರತಿ ಸಿದ್ಧವಾಗಿದೆ ಎಂದು ಕಳೆದ ವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ತಿಳಿಸಿದ್ದರು.ಇತ್ತೀಚೆಗೆ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಸಂದರ್ಭದಲ್ಲಿ, ಬಿಬಿಎಂಪಿ ವಾರ್ಡ್‌ಗಳ ಪುನರ್‌ ವಿಂಗಡಣೆ ಸಮಿತಿಯು ಎಂಟು ವಾರಗಳಲ್ಲಿ ಪುನರ್‌ ವಿಂಗಡಣೆ ಹಾಗೂ ಮೀಸಲಾತಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ರಾಜ್ಯ ಸರಕಾರ ಹೇಳಿತ್ತು.ವಾರ್ಡ್ ಗಳ ಪುನರ್‌ ವಿಂಗಡಣೆಯ ಮುಖ್ಯ ಅಂಶಗಳು:* 2011ರ ಜನಗಣತಿ ಆಧಾರದಲ್ಲಿ ವಾರ್ಡ್ ಗಳ ಪುನರ್‌ ವಿಂಗಡಣೆ.* ಪ್ರತಿ ವಾರ್ಡ್ ಜನಸಂಖ್ಯೆ ಪ್ರಾಯೋಗಿಕವಾಗಿ ಬೆಂಗಳೂರಿನಾದ್ಯಂತ ಒಂದೇ ರೀತಿ ಇರುವಂತೆ ನೋಡಿಕೊಳ್ಳುವುದು.* ಶಾಸಕರ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ಡ್ ಗಳನ್ನು ವಿಭಜಿಸುವುದು.

ಯಾವುದೇ ವಾರ್ಡ್ ಎರಡು ಕ್ಷೇತ್ರಗಳಲ್ಲಿ ವ್ಯಾಪಿಸಬಾರದು.* ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಮತ್ತು ಗರಿಷ್ಠ ವಾರ್ಡ್ ಗಳ ನಡುವಿನ ವ್ಯತ್ಯಾಸವು ಗಣನೀಯವಾಗಿರಬೇಕು ಎಂದು ನಿರೀಕ್ಷಿಸಲಾಗಿದೆ (ಕನಿಷ್ಠ 5 ರಿಂದ ಗರಿಷ್ಠ 16 ವಾರ್ಡ್ ಗಳು).* ಕೆಲವು ವಿಧಾನಸಭಾ ಕ್ಷೇತ್ರಗಳು ಹೆಚ್ಚು ವಾರ್ಡ್ ಗಳನ್ನು ಪಡೆಯುವ ನಿರೀಕ್ಷೆಯಿದೆ. ನಗರದ ಮಧ್ಯ ಭಾಗದಲ್ಲಿರುವ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳು ಹಾಲಿ ಇರುವ ವಾರ್ಡ್ ಗಳ ಸಂಖ್ಯೆಯನ್ನೇ ಉಳಿಸಿಕೊಳ್ಳಬಹುದು.

Related Articles

Leave a Reply

Your email address will not be published. Required fields are marked *

Back to top button