ಶಿವಣ್ಣ ಅಭಿನಯದ 123ನೇ ಚಿತ್ರ ‘ಬೈರಾಗಿ’ ರಿಲೀಸ್ ಡೇಟ್ ಫಿಕ್ಸ್

ಹಾಡು ಮತ್ತು ಲುಕ್ ಮೂಲಕ ಭಾರೀ ಸದ್ದು ಮಾಡುತ್ತಿರುವ ಡಾಲಿ ಧನಂಜಯ್ ಮತ್ತು ಶಿವಣ್ಣ ಅಭಿನಯದ ಬೈರಾಗಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಇದರ ಬೆನ್ನಲ್ಲೇ ಚಿತ್ರತಂಡ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ.ಟಗರು’ ಸಿನಿಮಾದ ಬಳಿಕ ಸೆಂಚೂರಿ ಸ್ಟಾರ್ ಶಿವರಾಜ್‌ಕುಮಾರ್ ಮತ್ತು ನಟ ಡಾಲಿ ಧನಂಜಯ ಇಬ್ಬರೂ ‘ಬೈರಾಗಿ’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಈ ಸಿನಿಮಾವು ರಿಲೀಸ್‌ಗೆ ರೆಡಿ ಆಗಿದ್ದು, ಬಿಡುಗಡೆ ದಿನಾಂಕವನ್ನು ಘೋಷಿಸಿದೆ.ಬೈರಾಗಿ ಸಿನಿಮಾಗೆ ವಿಜಯ್ ಮಿಲ್ಟನ್ ನಿರ್ದೇಶನವಿದ್ದು, ಅವರೇ ಕಥೆ, ಚಿತ್ರಕಥೆ ಬರೆದು ಛಾಯಾಗ್ರಹಣವನ್ನೂ ಮಾಡಿದ್ದಾರೆ.
ಗುರು ಕಶ್ಯಪ್ ಅವರ ಸಂಭಾಷಣೆ ಈ ಸಿನಿಮಾಗಿದ್ದೂ, ರಾಜ್ಯಾದ್ಯಂತ ಜಗದೀಶ್ ಗೌಡ ವಿತರಣೆ ಮಾಡಲಿದ್ದಾರೆ. ಬೈರಾಗಿ ಸಿನಿಮಾಗೆ ಅನೂಪ್ ಸಿಳೀನ್ ಸಂಗೀತ ನೀಡಿದ್ದು, ಕೃಷ್ಣ ಸಾರ್ಥಕ್ ನಿರ್ಮಾಣ ಮಾಡಿದ್ದಾರೆ.ಶಿವಣ್ಣನಿಗೆ ಎರಡು ವಾರ ಮೊದಲೇ ಹುಟ್ಟುಹಬ್ಬದ ಗಿಫ್ಟ್ ನೀಡಲು ಚಿತ್ರತಂಡ ನಿರ್ಧರಿಸಿದೆ.
ಜುಲೈ 12ರಂದು ಶಿವರಾಜ್‌ಕುಮಾರ್ 60 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ದಿನ ಚಿತ್ರ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ ಅದಕ್ಕೂ ಮೊದಲೇ ಚಿತ್ರ ಬಿಡುಗಡೆ ಮಾಡುತ್ತಿರುವುದು ವಿಶೇಷ. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್, ಧನಂಜಯ್ ಜೊತೆ ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ ಶಿವಕುಮಾರ್ ಸೇರಿದಂತೆ ಅನೇಕ ಟಾಲೆಂಟಡ್ ತಾರಾ ಬಳಗವಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 123ನೇ ಸಿನಿಮಾ ಬೈರಾಗಿ ಜುಲೈ 1 ರಂದು ಬೆಳ್ಳಿ ತೆರೆಗೆ ಬರಲಿದೆ.
ಈ ಮೂಲಕ ಶಿವಣ್ಣ ಅಭಿಮಾನಿಗಳ ಕುತೂಹಲಕ್ಕೆ ಚಿತ್ರತಂಎ ತೆರೆ ಎಳೆದಿದೆ.