
ಅಕ್ಷರ ದಾಸೋಹದ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರಿಗೆ ಮಾಸಿಕ ಗೌರವ ಸಂಭಾವನೆಯನ್ನು ಒಂದು ಸಾವಿರ ರೂ.ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಸಂಭಾವನೆ ಹೆಚ್ಚಳ ಮಾಡಿದ್ದು, ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ಮುಖ್ಯ ಅಡುಗೆಯವರಿಗೆ ಮಾಸಿಕ ಸಂಭಾವನೆ 3700ರೂ.ಗೆ ಏರಿಕೆಯಾದರೆ, ಸಹಾಯ ಅಡುಗೆಯವರ ಮಾಸಿಕ ಸಂಭಾವನೆ 3600ರೂ.ಗೆ ಹೆಚ್ಚಳ ಮಾಡಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.ಕಳೆದ 2018ರ ಜನವರಿಯಿಂದ ಜಾರಿಗೆ ಬರುವಂತೆ ತಲಾ 500 ರೂ. ಗೌರವ ಸಂಭಾವನೆಯನ್ನು ಹೆಚ್ಚಳ ಮಾಡಲಾಗಿತ್ತು. ರಾಜ್ಯದಲ್ಲಿ 47,250 ಮುಖ್ಯ ಅಡುಗೆಯವರು, 71,336 ಸಹಾಯಕ ಅಡುಗೆಯವರಿದ್ದಾರೆ. ಹೆಚ್ಚಳ ಮಾಡಿರುವ ಮಾಸಿಕ ಸಂಭಾವನೆಯಿಂದಾಗಿ 118.58 ಕೋಟಿ ರೂ. ವೆಚ್ಚ ಭರಿಸಬೇಕಾಗಿದೆ.ಉಪಹಾರ ಯೋಜನೆಯ ಆಹಾರ ಸೂಚನಾ ಪಟ್ಟಿಯಂತೆ ಪೌಷ್ಠಿಕ ಆಹಾರ ತಯಾರಿಸುವ ವಿ ವಿಧಾನಗಳನ್ನು ಅಡುಗೆ ಸಿಬ್ಬಂದಿಗೆ ಕಡ್ಡಾಯವಾಗಿ ಕಲಿಸಿ ಮಕ್ಕಳ ಪೌಷ್ಠಿಕತೆ, ಅಭಿವೃದ್ಧಿಗೊಳಿಸಲು ಕ್ರಮ ವಹಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.