ರಾಜ್ಯ

ಶತ್ರು ದಮನಕ್ಕೆ ತಂತ್ರಜ್ಞಾನ ಬಳಸಿ

ಗಡಿಯಾಚೆ ಅಪರಾಧಿಗಳು ತಂತ್ರಜ್ಞಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು ಜೊತೆಯಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.ಕಾನೂನು ಮತ್ತು ಸುವ್ಯವಸ್ಥೆ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಅಪರಾಧ ಅಂತರರಾಜ್ಯ ಮತ್ತು ಅಂತರಾಷ್ಟ್ರೀಯವಾಗಿ ಬದಲಾಗುತ್ತಿದೆ.

ತಂತ್ರಜ್ಞಾನದೊಂದಿಗೆ, ಅಪರಾಧಿಗಳು ಈಗ ರಾಜ್ಯ ಹೊರ ರಾಜ್ಯಗಳಲ್ಲಿ ಅಪರಾಧಗಳನ್ನು ಮಾಡುವ ಶಕ್ತಿ ಹೊಂದಿದ್ದಾರೆ. ಅದನ್ನು ಪತ್ತೆ ಹಚ್ಚಿ ಮಟ್ಟ ಹಾಕಲು ಸಂಘಟಿತ ಪ್ರಯತ್ನ ಅಗತ್ಯ ಎಂದು ತಿಳಿಸಿದ್ದಾರೆ.

ಹರಿಯಾಣದ ಸೂರಜ್‌ಕುಂಡ್‌ನಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯಗಳ ಗೃಹಸಚಿವರ ಚಿಂತನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಸೈಬರ್ ಅಪರಾಧ, ಶಸ್ತ್ರಾಸ್ತ್ರಗಳು ಅಥವಾ ಮಾದಕ ವಸ್ತು ಕಳ್ಳಸಾಗಣೆಗೆ ಡ್ರೋನ್ ತಂತ್ರಜ್ಞಾನದ ಬಳಕೆಯಾಗಿರಲಿ ಈ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ರಾಜ್ಯಗಳಿಗೆ ಕಟ್ಟುಕಟ್ಟಿನ ಸೂಚನೆ ನೀಡಿದ್ದಾರೆ.ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಒಟ್ಟಾಗಿ ಕೆಲಸ ಮಾಡಬೇಕಾಗಿದೆ.

ವಿವಿಧ ಸವಾಲುಗಳ ನಡುವೆ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ಜವಾಬ್ದಾರಿಯಾಗಿದೆ, ಈ ಶಿಬಿರ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದಿದ್ದಾರೆ.ಮುಂದಿನ ೨೫ ವರ್ಷಗಳನ್ನು ಗಮನದಲ್ಲಿಟ್ಟುಕೊಂಡು “ಅಮೃತ ಪೀಠಿ” ಸೃಷ್ಟಿಗೆ ಒತ್ತು ನೀಡಲಾಗಿದೆ.

ಈ ಅಮೃತ ಪೀಠಿ, ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣ, ಎಲ್ಲಾ ವಸಾಹತುಶಾಹಿ ಮನಸ್ಥಿತಿಯಿಂದ ಸ್ವಾತಂತ್ರ್ಯ, ಪರಂಪರೆಯಲ್ಲಿ ಹೆಮ್ಮೆ, ಏಕತೆ ಮತ್ತು ಮುಖ್ಯವಾಗಿ ನಾಗರಿಕರ ಕರ್ತವ್ಯದ ‘ಪಂಚ ಪ್ರಾಣ’ದ ನಿರ್ಣಯ ಹೊಂದಿದೆ ಎಂದು ಹೇಳಿದ್ದಾರೆ.ಕೋವಿಡ್ ಸಮಯದಲ್ಲಿ ಪೊ?ಲೀಸರ ವರ್ಚಸ್ಸು ಮತ್ತಷ್ಟು ಸುಧಾರಿಸಿದೆ.

ಸಂಕಷ್ಟದ ಸಮಯದಲ್ಲಿ ನಿರ್ಗತಿಕರಿಗೆ ಸಹಾಯ ಮಾಡುವ ಜೊತೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದ್ದರು, ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದರು. ಅವರು ಕರ್ತವ್ಯನಿಷ್ಠೆಯಲ್ಲಿ ಮೆರೆದಿದ್ದರು ಎಂದು ಗುಣಗಾನ ಮಾಡಿದ್ದಾರೆ.ಪೊಲೀಸರು ಉತ್ತಮ ಗ್ರಹಿಕೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ.

ಇದಕ್ಕಾಗಿ, ಪೊಲೀಸ್ ಪಡೆಗೆ ಸ್ಫೂರ್ತಿ ನೀಡುವುದು, ಅದಕ್ಕಾಗಿ ಯೋಜನೆ ಮತ್ತು ಅವರಿಗೆ ಮಾರ್ಗದರ್ಶನ ನೀಡುವುದು ಮುಂದುವರಿಯಬೇಕು ಎಂದು ಹೇಳಿದ್ದಾರೆ.ಶಿಬಿರದ ಮೂಲಕ ರಾಜ್ಯಗಳು ಪರಸ್ಪರ ಕಲಿತು ತಮ್ಮ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲು, ಪರಸ್ಪರ ಸ್ಫೂರ್ತಿ ಪಡೆಯಲು ಮತ್ತು ದೇಶದ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಹಾಗು ಸಂವಿಧಾನದ ಭಾವನೆ ಮತ್ತು ನಾಗರಿಕರಿಗೆ ಕರ್ತವ್ಯ ನೆನಪಿಸುವಂತಹುದು ಎಂದು ತಿಳಿಸಿದ್ದಾರೆ.

ಎರಡು ದಿನಗಳ ಗೃಹ ಸಚಿವರ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೇಂದ್ರಾಡಳಿತ ಪ್ರದೇಶಗಳ ಲೆಪ್ಟಿನೆಂಟ್ ಗವರ್ನರ್‌ಗಳು, ರಾಜ್ಯಗಳ ಗೃಹ ಸಚಿವರು ಪಾಳ್ಗೊಂಡಿದ್ದರು.ತಂತ್ರಜ್ಞಾನದ ಮೇಲೆ ಎಚ್ಚರವಿರಲಿತಂತ್ರಜ್ಞಾನ ಬೆಳವಣಿಗೆ ಪೂರಕವಾದರೂ ಅದನ್ನು ದುರುಪಯೋಗಪಡಿಸಿಕೊಳ್ಳುವರ ಸಂಖ್ಯೆ ಹೆಚ್ಚಿದೆ.

ಈ ಬಗ್ಗೆ ಎಚ್ಚರವಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.೫ಜಿ ಯುಗವನ್ನು ಪ್ರವೇಶಿಸಿದ್ದೇವೆ. ೫ಜಿ ಹಲವಾರು ಪ್ರಯೋಜನ ಹೊಂದಿದೆ ಮತ್ತು ಅದಕ್ಕಾಗಿ ಅರಿವು ಕೂಡ ಅಗತ್ಯವಿದೆ.

೫ಜಿ ಯೊಂದಿಗೆ, ಮುಖ ಗುರುತಿಸುವಿಕೆ ತಂತ್ರಜ್ಞಾನ, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ತಂತ್ರಜ್ಞಾನ, ಡ್ರೋನ್ ಮತ್ತು ಸಿಸಿಟಿವಿ ತಂತ್ರಜ್ಞಾನದಲ್ಲಿ ಹಲವಾರು ಸುಧಾರಣೆಗಳಿವೆ ಎಂದಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button