ವ್ಯಾಪಾರಿಯಿಂದ 2 ಲಕ್ಷ ಹಣ ಪಡೆದಿದ್ದ ಕಾನ್ಸ್‌ಟೇಬಲ್ ಬಂಧನ

ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿ ತಮ್ಮ ಬಳಿ ಇರುವುದು ಹವಾಲ ಹಣವೆಂದು ಬೆದರಿಸಿ 2 ಲಕ್ಷ ಹಣವನ್ನು ತಮ್ಮ ಸ್ನೇಹಿತನ ಅಕೌಂಟ್‍ಗೆ ಹಾಕಿಸಿಕೊಂಡಿದ್ದ ಕಾನ್ಸ್‍ಸ್ಟೇಬಲ್‍ನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋವಿಂದರಾಜ ನಗರ ಠಾಣೆಯ ಕಾನ್ಸ್‍ಸ್ಟೇಬಲ್ ಬಂಧಿತ. ಕಳೆದ ಶನಿವಾರ ವ್ಯಾಪಾರಿಯೊಬ್ಬರು ಹಣ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಕಾನ್ಸ್‍ಸ್ಟೇಬಲ್‍ಗೆ ಮಾಹಿತಿ ಬಂದಿದೆ. ತಕ್ಷಣ ಕಾನ್ಸ್‍ಸ್ಟೇಬಲ್ ವ್ಯಾಪಾರಿ ಇದ್ದ ಜಾಗಕ್ಕೆ ಹೋಗಿ ತಮ್ಮ ಬಳಿ ಇರುವುದು ಹವಾಲ ಹಣ ಎಂದು ಹೇಳಿ ಈ ಬಗ್ಗೆ ದೂರು ದಾಖಲಿಸುವುದಾಗಿ ಹೆದರಿಸಿ ಹಣಕ್ಕಾಗಿ ಒತ್ತಾಯಿಸಿದ್ದಾರೆ.
ನಂತರ 2 ಲಕ್ಷ ಹಣವನ್ನು ವ್ಯಾಪಾರಿಯಿಂದಲೇ ತನ್ನ ಸ್ನೇಹಿತನ ಅಕೌಂಟ್‍ಗೆ ಹಾಕಿಸಿಕೊಂಡಿದ್ದರು. ಈ ಬಗ್ಗೆ ವ್ಯಾಪಾರಿ ಹಲಸೂರು ಗೇಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಈ ಪ್ರಕರಣದಲ್ಲಿ ಕಾನ್ಸ್‍ಸ್ಟೇಬಲ್ ಭಾಗಿಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.