ವ್ಯಕ್ತಿಯೊಬ್ಬನ ಮೇಲೆ ಉಕ್ಕಿ ಹರಿದ ಹಾವಿನ ಪ್ರೀತಿ, ಎರಡೇ ವಾರಗಳಲ್ಲಿ 8 ಬಾರಿ ಹೆಡೆ ಹೊಡೆದ ಹಾವು

ಹಾವಿನ ದ್ವೇಷ 12 ವರುಷ’ ಎಂಬ ಹಾಡು ನಿಮಗೆ ಗೊತ್ತೇ ಇರಬೇಕು. ಅಷ್ಟೇ ಅಲ್ಲ ಹಾವು ತನ್ನ ಸೇಡು ತೀರಿಸಿಕೊಳ್ಳುತ್ತದೆ ಎಂಬ ಸಂಗತಿಯನ್ನು ನೀವು ಯಾವುದಾದರೊಂದ ಚಲನಚಿತ್ರ ಅಥವಾ ದಾರಾವಾಹಿಗಳಲ್ಲಿ ನೋಡಿರಬಹುದು.
ಆದರೆ, ನಿಜ ಜೀವನದಲ್ಲಿ ಇಂತಹ ಯಾವುದೇ ಒಂದು ಘಟನೆ ನಡೆದಿದೆ ಎಂಬುದನ್ನು ಎಲ್ಲಾದರೂ ಕೇಳಿದ್ದೀರಾ? ಹೌದು, ಇಂತಹ ಒಂದು ಶಾಕಿಂಗ್ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ಇರುವ ಗ್ರಾಮವೊಂದರಲ್ಲಿ ಸಂಭವಿಸಿದೆ.
ಈ ಗ್ರಾಮದ ನಿವಾಸಿಯಾಗಿರುವ 20 ವರ್ಷದ ಯುವಕನ ಜೊತೆಗೆ ಇಂತಹ ಘಟನೆ ಸಂಭವಿಸಿದೆ. ಯುವಕನನ್ನು ರಜತ್ ಚಾಹರ್ ಎಂದು ಗುರುತಿಸಲಾಗಿದೆ.
ಯುವಕನ ಮೇಲೆ 8 ಬಾರಿ ದಾಳಿಯಿಟ್ಟ ಹಾವುರಜತ್ ಹೇಳುವ ಪ್ರಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಹಾವೊಂದು ಆತನ ಮೇಲೆ ಹಲವು ಬಾರಿ ದಾಳಿ ನಡೆಸಿದೆ ಎನ್ನಲಾಗಿದೆ. ಒಂಟಿಯಾಗಿ ರಜತ್ ಎಲ್ಲೇ ಕಂಡರೂ ಕೂಡ ಹಾವು ಆತನ ಮೇಲೆ ಕ್ರೂರವಾಗಿ ದಾಳಿ ನಡೆಸುತ್ತದೆ ಎನ್ನಲಾಗಿದೆ.
ಹಾವು ಕಪ್ಪು ಬಣ್ಣದ್ದಾಗಿದೆ ಎಂದು ರಜತ್ ಹೇಳಿದ್ದಾನೆ. ಹಲವು ಬಾರಿ ದಾಳಿ ಇಟ್ಟ ಕಾರಣ ರಜತ್ ನಿಧಾನಕ್ಕೆ ತನ್ನ ದೃಷ್ಟಿಯನ್ನು ಕಳೆದುಕೊಳ್ಳಲಾರಂಭಿಸಿದ್ದಾನೆ ಎನ್ನಲಾಗಿದೆ.
ಗ್ರಾಮಸ್ಥರಲ್ಲಿ ಭಾರಿ ನಡುಕವರದಿಯ ಪ್ರಕಾರ, ಕಳೆದ 15 ದಿನಗಳಲ್ಲಿ ಕಪ್ಪು ಬಣ್ಣದ ಹಾವೊಂದು ಬಾಲಕನ ಮೇಲೆ 8 ಬಾರಿ ದಾಳಿ ನಡೆಸಿದೆ. ಒಮ್ಮೆ ರಜತ್ ಮಲಗಿದ್ದಾಗ ಹಾವು ಕಚ್ಚಿತ್ತು. ಬಾಲಕ ನೋವಿನಿಂದ ಕೂಗಿಕೊಂಡ ತಕ್ಷಣ ಮನೆಯವರೆಲ್ಲರೂ ಸೇರಿ ಚಿಕಿತ್ಸೆ ಕೊಡಿಸಿದ್ದಾರೆ.
ಬಳಿಕ ಮನೆಯ ಸದಸ್ಯರು ಹಾವಾಡಿಗನನ್ನು ಸಂಪರ್ಕಿಸಿದ್ದಾರೆ, ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯಿಂದ ಇಡೀ ಗ್ರಾಮದ ಜನರೇ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.
ವಿಚಿತ್ರ ಈ ಕಥೆಇಲ್ಲಿ ವಿಚಿತ್ರ ಸಂಗತಿ ಎಂದರೆ ಆ ಹಾವು ಇದುವರೆಗೂ ಕೂಡ ಯಾರ ಕೈಗೂ ಸಿಕ್ಕಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದರೂ, ಯಾವುದೇ ಅಧಿಕಾರಿಗಳು ತನಿಖೆಗೆ ಮುಂದಾಗಿಲ್ಲ ಎನ್ನುತ್ತಾರೆ ಕುಟುಂಬಸ್ಥರು. ಈ ಕಥೆಯ ಬಗ್ಗೆ ತಿಳಿದ ಅನೇಕರು ದಿಗ್ಭ್ರಮೆಗೊಂಡಿದ್ದಾರೆ.