Uncategorized

‘ವೋಟರ್ ಐಡಿ’ಗೆ ‘ಆಧಾರ್ ಸಂಖ್ಯೆ’ ಲಿಂಕ್ ಮಾಡೋದು ಹೇಗೆ ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ | Voter ID Aadhaar link

ಕೇಂದ್ರ ಸರ್ಕಾರದಿಂದ ಮತದಾರರ ಗುರುತಿನ ಚೀಟಿಗೆ ( Voter ID ) ಆಧಾರ್ ಸಂಖ್ಯೆ ( Aadhar Card Number ) ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಈ ಪ್ರಕ್ರಿಯೆ ಆರಂಭಗೊಂಡಿದ್ದು, ನೀವು ವೋಟರ್ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಲ್ಲ ಅಂದ್ರೇ..

ಹೇಗೆ ಲಿಂಕ್ ಮಾಡೋದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ಓದಿ..

ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಜೋಡಣೆ

ಎಲ್ಲಾ ಮತದಾರರು ತಮ್ಮ ಕುಟುಂಬದ ಎಲ್ಲ ಮತದಾರರ ಗುರುತಿನ ಚೀಟಿಗೆ ಈ ಕೆಳಗಿನ App ಮುಖಾಂತರ ಮನೆಯಲ್ಲಿ ಕುಳಿತುಕೊಂಡು ಮತದಾರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಬಹುದು.

ಈ ಕೆಳಗಿನ ವಿಧಾನ ಅನುಸರಿಸಿ, ಆಧಾರ್ ಸಂಖ್ಯೆ ವೋಟರ್ ಐಡಿಗೆ ಲಿಂಕ್ ಮಾಡಿ

1) Play Store ಗೆ ಹೋಗಿ Voter Helpline App ನ್ನು Install ಮಾಡಿಕೊಳ್ಳಬೇಕು .
2) App ನನ್ನು install ಮಾಡುವಾಗ
Permission ಎಲ್ಲವು Allow ಅಂತಾ ಮಾಡಬೇಕು.
3) App install ಮಾಡಿಕೊಂಡು, App ತೆಳಗಡೆ , ಎಡಬದಿಯಲ್ಲಿ ಇರುವ EXPLORE option ಮೇಲೆ , click ಮಾಡಬೇಕು.

4) Electroral Authentication Form- 6B Select ಮಾಡಿಕೊಳ್ಳಬೇಕು.
5) Mobile number ಹಾಕಬೇಕು.
6) ನಿಮ್ಮ ಮೊಬೈಲ್ ನಂಬರ್ ಗೆ ಒಂದು OTP ಬರುವುದು. ಬಂದು OTP ನಮೂದಿಸಬೇಕು. Verify ಅಂತಾ ಮಾಡಬೇಕು.
7) ನಿಮ್ಮ Epic ನಂಬರ್ ನಮೂದಿಸಬೇಕು (ಚುನಾವಣಾ ಗುರುತಿನ ಚೀಟಿ ನಂಬರ್) ಮತ್ತು ನಿಮ್ಮ State Select ಮಾಡಿ.
8) ನಿಮ್ಮ ಆಧಾರ್ ನಂಬರ್ ನಮೂದಿಸಬೇಕು.
9) ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.
10) Email ID ಇದ್ದರೆ, ನಮೂದಿಸಿ, ಇರದಿದ್ದರೆ, ಹಾಗೆ ಖಾಲಿ ಬೀಡಿ.
11) ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ.
12) Proceed Option ಒತ್ತಿ
13) Confirm button ಒತ್ತಿ.
14) Successfully ಅಂತಾ ಒಂದು ref number ಬರುತ್ತದೆ.

ಈ ರೀತಿ ಮನೆಯಲ್ಲೇ ಕುಳಿತು ತಮ್ಮ ಕುಟುಂಬದ ಮತ್ತು ತಮ್ಮ ಸಂಬಂಧಿಕರ ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಲಿಂಕ್ ಮಾಡಬಹುದು.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button