Uncategorized

ವಿಶ್ವದ ಏಕಾಂಗಿ ವ್ಯಕ್ತಿ’ ಎಂದೇ ಕರೆಯಲಾಗುತ್ತಿದ್ದ ಜಗತ್ತಿನ ಅತ್ಯಂತ ದಟ್ಟು ಕಾಡು ಅಮೇಜಾನ್ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರೆಸಿಲಿಯಾ: ‘ವಿಶ್ವದ ಏಕಾಂಗಿ ವ್ಯಕ್ತಿ’ ಎಂದೇ ಕರೆಯಲಾಗುತ್ತಿದ್ದ ಜಗತ್ತಿನ ಅತ್ಯಂತ ದಟ್ಟು ಕಾಡು ಅಮೇಜಾನ್ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೌದು.. ಬ್ರೆಜಿಲ್‌ನ ಅಮೆಜಾನ್ ಕಾಡುಗಳಲ್ಲಿ ಸಂಪೂರ್ಣವಾಗಿ ಏಕಾಂಗಿಯಾಗಿ ವಾಸಿಸುತ್ತಿದ್ದ ಕಾರಣ “ವಿಶ್ವದ ಏಕಾಂಗಿ ವ್ಯಕ್ತಿ” ಎಂದೇ ಕರೆಯಲ್ಪಡುತ್ತಿದ್ದ ಸ್ಥಳೀಯ ಬುಡಕಟ್ಟು ಸದಸ್ಯ ಶವವಾಗಿ ಪತ್ತೆಯಾಗಿದ್ದಾನೆ. ವಯೋಸಹಜ ಆರೋಗ್ಯ ಸಮಸ್ಯೆ ಮತ್ತು ನೈಸರ್ಗಿಕ ಸಮಸ್ಯೆಗಳಿಂದ ಈ ವ್ಯಕ್ತಿ ಸಾವನ್ನಪ್ಪಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ. ಪ್ರಾಣಿಗಳನ್ನು ಬೇಟೆಯಾಡಲು ಮತ್ತು ಅಡಗಿಕೊಳ್ಳಲು ತನ್ನದೇ ವಿಶೇಷ ಶೈಲಿಯಲ್ಲಿ ಕಂದಕಗಳನ್ನು ಅಗೆದಿದ್ದ “ಇಂಡಿಯನ್ ಆಫ್ ದಿ ಹೋಲ್” ಖ್ಯಾತಿಯ ಅಜ್ಞಾತ ಬುಡಕಟ್ಟಿನ ಕೊನೆಯ ವ್ಯಕ್ತಿ ಇದೀಗ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ.

ಸರ್ಕಾರದ ಸ್ಥಳೀಯ ಸಂಸ್ಥೆಯಾದ ಫುನೈ ಪ್ರಕಾರ, ಅವರು ಆಗಸ್ಟ್ 24 ರಂದು ಅವರ ಗುಡಿಸಲಿನಲ್ಲಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಮೂಲತಃ ಬ್ರೆಜಿಲಿಯನ್ ಆಗಿರುವ ಈ ವ್ಯಕ್ತಿಯ ಹೆಸರು ಮತ್ತು ಅವರು ಮಾತನಾಡುವ ಭಾಷೆ ಎಂದಿಗೂ ಯಾರಿಗೂ ತಿಳಿದಿಲ್ಲ, ಫುನೈ ಮೇಲ್ವಿಚಾರಣೆಯ ಕಾಡಿನಲ್ಲಿ ಸ್ವಯಂಪ್ರೇರಿತವಾಗಿ ಪ್ರತ್ಯೇಕವಾಗಿ ಅವರು ವಾಸಿಸುತ್ತಿದ್ದರು.

ಈ ಬುಡಕಟ್ಟು ವ್ಯಕ್ತಿ ಸ್ವಂತವಾಗಿ ಅಮೇಜಾನ್ ಕಾಡಿನಲ್ಲಿ ಅಜ್ಞಾತವಾಗಿ ವಾಸಿಸುತ್ತಿದ್ದರು. ಕಾಡಿನ ತುಂಬೆಲ್ಲಾ ನಿರಂತರವಾಗಿ ಓಡುತ್ತಿದ್ದರು. ಈ ಸ್ಥಳೀಯ ವ್ಯಕ್ತಿ 26 ವರ್ಷಗಳ ಹಿಂದೆ ಬೊಲಿವಿಯಾದ ಗಡಿಯ ಸಮೀಪವಿರುವ ರೊಂಡೋನಿಯಾ ರಾಜ್ಯದ ಕಾಡಿನಲ್ಲಿ ನೆಲೆಸಿದ್ದ ಎಂದು ಲಾ ಪ್ರೆನ್ಸಾ ವರದಿ ಮಾಡಿದೆ. ಅಂತೆಯೇ ಈತನ ಗುಡಿಸಲಿನ ಬಳಿ ಇತರ ಜನರ ಉಪಸ್ಥಿತಿಯನ್ನು ಸೂಚಿಸುವ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂದು ಸಂಸ್ಥೆ ಹೇಳಿದೆ. ಅವರು ಬಳಸಿದ ಪಾತ್ರೆಗಳು ತಮ್ಮ ಎಂದಿನ ಸ್ಥಳಗಳಲ್ಲಿದ್ದರಿಂದ ಯಾವುದೇ ಹಿಂಸಾಚಾರ ಅಥವಾ ಹೋರಾಟದ ಲಕ್ಷಣಗಳು ಕಂಡುಬಂದಿಲ್ಲ. ಹೀಗಾಗಿ ಅವರದ್ದು ಸಹಜ ಸಾವು ಎನ್ನಲಾಗಿದೆ. ಆದಾಗ್ಯೂ ವಿಧಿವಿಜ್ಞಾನ ತಜ್ಞರು ಅವರ ಸಾವಿನ ಕಾರಣವನ್ನು ಗುರುತಿಸಲು ಶವಪರೀಕ್ಷೆಗೆ ಮೃತದೇಹ ರವಾನಿಸಿದ್ದಾರೆ.

ಬ್ರೆಜಿಲಿಯನ್ ಕಾಡಿನಲ್ಲಿ, ನಾಡಿನ ನೇರ ಸಂಪರ್ಕವನ್ನು ತಪ್ಪಿಸುವ ಮೂಲಕ ಪ್ರತ್ಯೇಕವಾಗಿ ವಾಸಿಸುವ ಕನಿಷ್ಠ 114 ಸ್ಥಳೀಯ ಜನರನ್ನು ಗುರುತಿಸಲಾಗಿದೆ. ಸ್ಥಳೀಯ ಹಕ್ಕುಗಳ ಗುಂಪು ಸರ್ವೈವಲ್ ಇಂಟರ್‌ನ್ಯಾಶನಲ್ ವರದಿ ಮಾಡಿರುವಂತೆ 2009ರ ಕೊನೆಯಲ್ಲಿ ಈ ವ್ಯಕ್ತಿಯನ್ನು “ಬಂದೂಕುಧಾರಿಗಳಿಂದ ಕೆಟ್ಟದಾಗಿ ನಡೆಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಅವನ ಬುಡಕಟ್ಟಿನ ಬಹುಪಾಲು ಜನರು 1970 ಮತ್ತು 80 ರ ದಶಕದಲ್ಲಿ ಹತ್ತಿರದ ರಸ್ತೆಯನ್ನು ನಿರ್ಮಿಸಿದ ನಂತರ ಕೊಲ್ಲಲ್ಪಟ್ಟರು ಎಂದು ನಂಬಲಾಗಿದೆ. ವ್ಯಾಪಾರ ಉದ್ದೇಶಗಳಿಂದಾಗಿ ಇಲ್ಲಿನ ಭೂಮಿಗೆ ಬೇಡಿಕೆ ಹೆಚ್ಚಾಯಿತು. ಬ್ರೆಜಿಲ್‌ನಲ್ಲಿರುವ ಅಮೆಜಾನ್ ಮಳೆಕಾಡು ಪ್ರಪಂಚದ ಎಲ್ಲಕ್ಕಿಂತ ಹೆಚ್ಚು ಸಂಪರ್ಕವಿಲ್ಲದ ಬುಡಕಟ್ಟು ಜನಾಂಗಗಳ ನೆಲೆಯಾಗಿದೆ ಎಂದು ಸರ್ವೈವಲ್ ಇಂಟರ್‌ನ್ಯಾಶನಲ್ ಹೇಳಿದೆ.

ಹಿಂದೆ, ರೊಂಡೋನಿಯಾದಲ್ಲಿ ಸಂಪರ್ಕವಿಲ್ಲದ ಬುಡಕಟ್ಟು ನಿವಾಸಿಯನ್ನು ಕೊಲ್ಲಲು ಅನೇಕ ರಾಂಚರ್‌ಗಳು (ಸ್ಥಳೀಯ ಜಮೀನ್ದಾರರು) ಬಂದೂಕುಧಾರಿಗಳನ್ನು ಬಳಸಿದ್ದಾರೆ ಎನ್ನಲಾಗಿದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button