ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಿಶೇಷ ಧನ್ಯವಾದಗಳು

ವಿಶೇಷ ಧನ್ಯವಾದಗಳು ದಿನಾಂಕ05-08-22 & 15-05-22 ಲಾಲ್ಬಾಗ್ನಲ್ಲಿ ಪುಷ್ಪ ಪ್ರದರ್ಶನ ಅಪ್ಪು…ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಪುಟ್ಟ ಪುನೀತ್ ರಾಜ್ಕುಮಾರ್ ನನ್ನ ಹರಿ ಎಲ್ಲೆಲ್ಲೂ ಇರುವನು ಅಂದಂತೆ ಲಾಲ್ಬಾಗ್ನಲ್ಲಿ ಈಗ ಎಲ್ಲೆಲ್ಲೂ ಅಪ್ಪು! ಹೌದು ಬೆಂಗಳೂರಿನ ಲಾಲ್ಬಾಗ್ನಲ್ಲಿ ನಡೆಯುತ್ತಿರೊ ಫಲಪುಷ್ಪ ಪ್ರದರ್ಶನದಲ್ಲಿ 500 ಕ್ಕೂ ಹೆಚ್ಚು ಹೂಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅರಳಿ ನಗುತ್ತಿದ್ದಾರೆ.75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಫಲ ಪುಷ್ಪಪ್ರದರ್ಶನ ಮಾಡಲಾಗ್ತಿದೆ. ಈ ಬಾರಿ ಅಪ್ಪು ಮತ್ತು ಡಾ.ರಾಜ್ಕುಮಾರ್ ಥೀಮ್ನಲ್ಲಿ ಫಲಪುಷ್ಪ ಪ್ರದರ್ಶನ ಮಾಡಲಾಗ್ತಿದೆ. ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣಾ ಅಧಿಕಾರಿಗಳಾದ ಶ್ರೀಮತಿ ಶೋಭಾ ರವರು ಮತ್ತುಸಿಬ್ಬಂದಿಗಳು ಲಾಲ್ ಬಾಗ್ ಸುತ್ತಮುತ್ತ ಪ್ರದೇಶ ಸಂಚಾರಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಸಿದ್ದಾರೆ. Ncib ಟೈಮ್ಸ್ ಮೀಡಿಯಾ ವತಿಯಿಂದ ವಿಶೇಷ ಧನ್ಯವಾದಗಳು ವರದಿ ಪಿ ಲೋಕೇಶ್