ವಿದ್ಯಾರ್ಥಿಗಳ ಶಿಕ್ಷಣ ಸಾಲ ಕೇಂದ್ರ ತಾಕೀತು

ಸಾರ್ವಜನಿಕ ವಲಯದ ಬ್ಯಾಂಕ್‌ಗಳು ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಶಿಕ್ಷಣ ಸಾಲ ನೀಡುವಂತೆ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ ತಾಕೀತು ಮಾಡಿದೆ.ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡುತ್ತಿಲ್ಲ ಎನ್ನುವ ಅನೇಕ ದೂರು ಬಂದಿವೆ.
ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ಮಾಡಿಕೊಡದಿರಿ ಎಂದು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.ಹಣಕಾಸು ಸೇವೆಗಳ ಇಲಾಖೆ ನಡೆಸಿದ ಸಭೆಯಲ್ಲಿ ಮತ್ತು ಎಲ್ಲಾ ೧೨ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪ್ರತಿನಿಧಿಗಳಿಗ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಹಣಕಾಸು ಸೇವೆಗಳ ಇಲಾಖೆಂ ಈ ಸೂಚನೆ ನೀಡಿದೆ.ಶಿಕ್ಷಣ ಸಾಲದ ಮಂಜೂರಾತಿ ವಿಳಂಬ ಮತ್ತು ನಿರಾಕರಣೆ ಕುರಿತು ವಿವಿಧ ಭಾಗಗಳಿಂದ ಬಂದ ಹಲವಾರು ದೂರುಗಳನ್ನು ಉಲ್ಲೇಖಿಸಿ, ವಿತರಣೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
೧೫-೩೦ ದಿನಗಳ ನಿಗದಿತ ಸಮಯದೊಳಗೆ ಶಿಕ್ಷಣ ಸಾಲಗಳನ್ನು ವಿತರಿಸಲು ಬ್ಯಾಂಕುಗಳಿಗೆ ತಿಳಿಸಲಾಗಿದೆ, ಸಹ-ಸಾಲಗಾರನ ಸಿಐಬಿಐಎಲ್ ಸ್ಕೋರ್ ಮತ್ತು ಕೋರ್ಸ್‌ಗಳ ಅರ್ಹತೆಯಿಲ್ಲದಂತಹ “ಕ್ಷುಲ್ಲಕ ಆಧಾರದ ಮೇಲೆ” ಸಾಲ ನಿರಾಕರಿಸಬಾರದು ಎಂದು ಹೇಳಿದೆ.ಶಿಕ್ಷಣ ಸಾಲ ನೀಡುವ ಸಮಯದಲ್ಲಿ ಭದ್ರತೆ ಪಡೆಯಬಾರದು.
ಅಂತಹ ಸಾಲಗಳು ೭.೫ ಲಕ್ಷ ರೂ ಮತ್ತು ೪.೫ ಲಕ್ಷ ರೂ.ವರೆಗಿನ ಕುಟುಂಬದ ವಾರ್ಷಿಕ ಆದಾಯ ಹೊಂದಿರುವ ವಿದ್ಯಾರ್ಥಿಗಳಿಗೆ ಕೇಂದ್ರ ವಲಯದ ಬಡ್ಡಿ ಸಬ್ಸಿಡಿ ಯೋಜನೆಯಲ್ಲಿ ಶಿಕ್ಷಣ ಸಾಲ ಪಡೆಯುವವರಿಗೆ ಮಾರ್ಗದರ್ಶನ ನೀಡುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.