ವಿಜಯೇಂದ್ರಗೆ ವಿಧಾನ ಪರಿಷತ್ ಟಿಕೇಟ್ ಕೈ ತಪ್ಪಿದ್ದು ನನಗೆ ಖುಷಿ ತಂದಿದೆ : ಶಾಸಕ ಹರ್ಷವರ್ಧನ್

ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ್ದು ಒಂದು ಕಡೆ ಅಸಮಾಧಾನ ಇನ್ನೊಂದೆಡೆ ಖುಷಿಯಾಗಿದೆ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಹೇಳಿದ್ದಾರೆ.
ಹೌದು, ನಂಜನಗೂಡಿನಲ್ಲಿ ದರ್ಶನ ಪದವೀಧರ ಕ್ಷೇತ್ರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಜಯೇಂದ್ರ ಭವಿಷ್ಯದ ನಾಯಕರು.
ವರುಣಾಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಬೇಡಿಕೆ ಇದೆ.ವಿಧಾನಸಭೆ ಪ್ರವೇಶಿಸಬೇಕೆನ್ನುವುದು ಅಲ್ಲಿನ ಜನರ ಆಕಾಂಕ್ಷೆ. ವರಣಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆನ್ನುವುದೂ ಸಹ ನಮ್ಮ ಅಭಿಪ್ರಾಯ.ಈ ಹಿನ್ನಲೆ ಎಂಎಲ್ಸಿ ಸ್ಥಾನ ಕೈ ತಪ್ಪಿದ್ದು ಒಂದು ಕಡೆ ಖುಷಿಯೇ ಆಗಿದೆ ಎಂದಿದ್ದಾರೆ.
ಆಯ್ಕೆ ನಿರ್ಧಾರದಿಂದ ನಮಗೆ ಇಂದು ಹಿನ್ನಡೆ ಆಗಿರಬಹುದು. ಆದ್ರೆ ವಿಜಯೇಂದ್ರ ಶಕ್ತಿ ಬಗ್ಗೆ ಎಲ್ಲರಿಗೂ ತಿಳಿದಿದೆ ಮುಂದೆ ಅವರಿಗೆ ಉತ್ತಮ ಭವಿಷ್ಯವಿದೆ. ಯುವ ನಾಯಕರಾಗಿರುವ ಅವರ ಬೆಂಬಲಕ್ಕೆ ನಾವಿದ್ದೇವೆ ಎಂದರು .
ಉಪಚುನಾವಣೆಯಲ್ಲಿ ಅವರ ಪಾತ್ರ ಹೇಗಿತ್ತು ಅಂತ ಎಲ್ಲರಿಗೂ ಗೊತ್ತಿದೆ.ರಾಜ್ಯದಲ್ಲಿ ಸರ್ಕಾರ ಇದೆ ಅಂದ್ರೆ ಅದು ವಿಜಯೇಂದ್ರ ರಿಂದಲೇ.ಆದ್ರಿಂದ ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಸ್ಪರ್ಧಿಸಿದ್ರೆ ಬಹಳ ಸಂತೋಷ ಎಂದು ಎಂಎಲ್ಸಿ ಸ್ಥಾನ ಕೈ ತಪ್ಪಿದ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ