ವಿಜಯೇಂದ್ರಗೆ ತಪ್ಪಿದ ಟಿಕೆಟ್; ಬಿಜೆಪಿಯ ಟಿಕೆಟ್ ಸಿಕ್ಕಿದ್ದು ಯಾರಿಗೆ?

ವಿಧಾನ ಪರಿಷತ್ ಚುನಾವಣೆಗೆ (Vidhana Parishat Election) ಬಿಜೆಪಿ ಅಭ್ಯರ್ಥಿಗಳ (BJP Candidates) ಹೆಸರನ್ನು ಘೋಷಣೆ ಮಾಡಿದೆ. ಕುಟುಂಬ ರಾಜಕಾರಣಕ್ಕೆ ಹೈಕಮಾಂಡ್ (BJP high Command) ನೋ ಅಂದಿದ್ದು, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರಿಗೆ ಟಿಕೆಟ್ ತಪ್ಪಿದೆ. ಒಕ್ಕಲಿಗ, ದಲಿತ, ಲಿಂಗಾಯತ ಮತ್ತು ಒಬಿಸಿ ಜಾತಿ ಸಮೀಕರಣದಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ಮಾಡಿದೆ. ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ನಿನ್ನೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿತ್ತು. ಆದ್ರೆ ಜೆಡಿಎಸ್ (JDS) ಇದುವರೆಗೂ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ.
ಲಿಂಗರಾಜು ಪಾಟೀಲ್- ಪ್ರಹ್ಲಾದ್ ಜೋಷಿ ಬೆಂಬಲ
ಮಂಜುಳ- ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬೆಂಬಲ
ಕೇಶವಪ್ರಸಾದ್- ಬಿ ಎಲ್ ಸಂತೋಷ್ ಬೆಂಬಲ
ಚಲುವಾದಿ ನಾರಾಯಣಸ್ವಾಮಿ- ರಾಜ್ಯ ಬಿಜೆಪಿ ಘಟಕ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರಗೆ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು. ಹಾಗಾಗಿ ವಿಜಯೇಂದ್ರ ಅವರಿಗೆ ಸ್ಥಾನ ನೀಡಬೇಕೇ ಅಥವಾ ಬೇಡವಾ ಎಂಬುದರ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದವು. ಕೊನೆಗೆ ಅಳೆದು ತೂಗಿ ಬಿಜೆಪಿ ನಾಲ್ವರಿಗೆ ಟಿಕೆಟ್ ನೀಡಿದೆ.