Uncategorized

ವಾಹನ ಸಂಚಾರ ನಿಯಮದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ (Bengaluru News) ಎಲ್ಲಾ ಸಂಚಾರಿ ಠಾಣಾ ಇನ್ಸ್ಪೆಕ್ಟರ್ ಗಳಿಗೆ ಕೆಲವು ಮಹತ್ವದ ಸೂಚನೆ ನೀಡಲಾಗಿದೆ

ಬೆಂಗಳೂರು: ವಾಹನ ಸಂಚಾರ ನಿಯಮದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ (Bengaluru News) ಎಲ್ಲಾ ಸಂಚಾರಿ ಠಾಣಾ ಇನ್ಸ್ಪೆಕ್ಟರ್ ಗಳಿಗೆ ಕೆಲವು ಮಹತ್ವದ ಸೂಚನೆ ನೀಡಲಾಗಿದೆ. ಪಿಸಿ, ಎಎಸ್‌ಐ ಹಾಗೂ ಸಬ್ ಇನ್ಸ್ಪೆಕ್ಟರ್​ಗಳ ಜೊತೆ ಇನ್ಸ್ಪೆಕ್ಟರ್​​ ಸಭೆ ನಡೆಸಿ ವಿವಿಧ ಸೂಚನೆಗಳನ್ನು ನೀಡಿದ್ದಾರೆ.

ಠಾಣೆಯಲ್ಲಿ ಇರೋ ಸಿಬ್ಬಂದಿಗಳ ಜೊತೆ ನಡೆಸಿದ ಸಭೆಯಲ್ಲಿ ಡಿಜಿ ಐಜಿಪಿ ಆದೇಶವನ್ನು ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಆದೇಶ ಪಾಲನೆ ಮಾಡಿಲ್ಲ ಅಂದ್ರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ವಿಧಿಸಲಾಗಿದೆ. ಹಾಗಾದ್ರೆ ಸಭೆಯಲ್ಲಿ ಟ್ರಾಫಿಕ್ ಪೊಲೀಸರಿಗೆ (Bengaluru Traffic Police) ನೀಡಲಾದ ಸೂಚನೆಗಳೇನು? ದಂಡ ಹಾಕೋ ಸಂಚಾರ ಪೊಲೀಸರು (Traffic Fine) ಏನು ಮಾಡಬೇಕು? ಏನು ಮಾಡಬಾರದು? ಎಲ್ಲ ವಿವರ ಇಲ್ಲಿದೆ.

ಈ ಸಂದರ್ಭಗಳಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ದಂಡ ವಿಧಿಸಬಹುದು ಅಥವಾ ವಾಹನ ಸವಾರರನ್ನು ತಡೆಯಬಹುದು ಎಂದು ಹೇಳಲಾಗಿದೆ.

ಇಲ್ಲಿದೆ ನಿಯಮಗಳ ಪಟ್ಟಿ

1) ಹೆಲ್ಮೇಟ್ ಹಾಕದೆ ಬಂದ್ರೆ ಅಂತವರನ್ನು ಹಿಡಿದು ದಾಖಲೆ ಪರಿಶೀಲನೆ ಮಾಡಬೇಕು.

2) 3 ಜನ ಒಂದೇ ವಾಹನದಲ್ಲಿ ಬಂದ್ರೆ ಅಂತ ವಾಹನವನ್ನ ಹಿಡಿಯಬಹುದು.

3) ಹೆಲ್ಮೇಟ್ ಹಾಕಿದ್ದು,ಮೊಬೈಲ್ ಫೋನ್ ಕಿವಿಯಲ್ಲಿ ಇಟ್ಟುಕೊಂಡು ಬಂದ್ರೆ ಅಂತಹ ವಾಹನ ನಿಲ್ಲಿಸಿ ದಂಡ ಹಾಕಬೇಕು.

4) ಕಣ್ಣ ಮುಂದೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ವಾಹನ ತಡೆಯಬಹುದು ದಾಖಲೆ ಪರಿಶೀಲನೆ ಮಾಡಬಹುದು.

5) ಪ್ರತಿಯೊಬ್ಬ ಸಿಬ್ಬಂದಿಯೂ ಬಾಡಿ ವೋರ್ನ್ ಕ್ಯಾಮರಾ ಕಡ್ಡಾಯವಾಗಿ ಹಾಕಬೇಕು.

6) ANPR ಕ್ಯಾಮರಾದಲ್ಲಿ ಹಳೇ ದಂಡ ಇರೋರು ಬಂದ್ರೆ ನಿಲ್ಲಿಸಬಹುದು.

7) ಒಂದು ವೇಳೆ ಕದ್ದ ವಾಹನ ಅಂತ ಕ್ಯಾಮರಾದಲ್ಲಿ ಗೊತ್ತಾದ್ರೆ ಕೂಡಲೇ ಅದನ್ನ ವಶಕ್ಕೆ ಪಡೆಯಬಹುದು.

ಈ ಸಂದರ್ಭಗಳಲ್ಲಿ ತಡೆಯುವಂತಿಲ್ಲ, ದಂಡ ವಿಧಿಸುವಂತಿಲ್ಲ
ಹಾಗಾದ್ರೆ ಸಂಚಾರಿ ಪೊಲೀಸರು ಇನ್ಮುಂದೆ ದಂಡ ಹಾಕುವಾಗ ಏನು ಮಾಡಬಾರದು. ಸಾರ್ವಜನಿಕರು, ವಾಹ ಸವಾರರು ಸಹ ಈ ಸೂಚನೆಗಳನ್ನು ಅರಿತಿದ್ದರೆ ಒಳ್ಳೆಯದು.

1) ಹೆಲ್ಮೇಟ್ ಹಾಕ್ಕೊಂಡು, ಸಂಚಾರ ನಿಯಮ ಪಾಲನೆ ಮಾಡುತ್ತಾ ಬರುವ ವಾಹನವನ್ನು ಅನಾವಶ್ಯಕವಾಗಿ ತಡೆಯಬಾರದು.

2) ವಾಹನಗಳನ್ನು ಪರಿಶೀಲನೆ ಮಾಡೋ ಸಲುವಾಗಿ ವಾಹನ ತಡೆಯಬಾರದು

3) ಹೆಲ್ಮೇಟ್ ಧರಿಸದೆ ಹೋಗೋದು, ಅತಿಯಾದ ವೇಗ, ಕಾರಿನಲ್ಲಿ ಜಾಸ್ತಿ ಮ್ಯೂಸಿಕ್ ಹಾಕ್ಕೊಂಡು ಹೋಗೋದು, ವಾಹನದ ರಚನೆಯಲ್ಲಿ ಬದಲಾವಣೆ, ಇಂತಹ ವಾಹನಗಳನ್ನು ಹಿಡಿಯಬಹುದು. ಆದರೆ ಇಂತಹ ಕೃತ್ಯ ಮಾಡಿರುವ ವಿಡಿಯೋ ದಾಖಲೆ ಇರಬೇಕು. ಬಾಡಿ ವಾರ್ನ್ ಕ್ಯಾಮರಾದಲ್ಲಿ ಇದೆಲ್ಲಾ ರೆಕಾರ್ಡ್ ಆಗಬೇಕು.

4) ರಾತ್ರಿ ವೇಳೆ ಕುಡಿದು ವಾಹನ ಚಾಲನೆ ಮಾಡೋರನ್ನು ತಪಾಸಣೆ ಮಾಡಬಹುದು. ಈ ವೇಳೆ ತಪಾಸಣೆಯ ಸಂಪೂರ್ಣ ವಿಡಿಯೋ ಮಾಡಬೇಕು

5) ಜೊತೆಗೆ ದಾಖಲೆಗಳನ್ನ ಪರಿಶೀಲನೆ ಮಾಡೋ ನೆಪದಲ್ಲಿ ನಿಲ್ಲಿಸಬಾರದು.

6) ಅಂತರಾಜ್ಯ ವಾಹನ ಆದ್ರೂ ಸಹ ಉಲ್ಲಂಘನೆ ಕಣ್ಣು ಮುಂದೆ ಮಾಡಿದ್ರೆ ಮಾತ್ರ ತಡೆಯಬೇಕು.

7) ಕ್ಯಾಮರಾದಲ್ಲಿ ಸಂಚಾರಿ ಉಲ್ಲಂಘನೆ ಆಗಿರೋದು, ಹಳೇ ಕೇಸ್ ಇದ್ರೆ ಅಂತಹ ವಾಹನವನ್ನು ನಿಲ್ಲಿಸಬಹುದು, ದಾಖಲೆ ಪರಿಶೀಲನೆ ಮಾಡಬಹುದು.

ಈ ಸೂಚನೆಗಳನ್ನೂ ನೀಡಲಾಗಿದೆ

1) ಕೆಲಸ ಜೊತೆಗೆ ಪೊಲೀಸ್ ಸಿಬ್ಬಂದಿಯ ಸುರಕ್ಷತೆ ಕೂಡ ಮುಖ್ಯ

2) ಡಿಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಬಾಡಿ ವೋರ್ನ್ ಕ್ಯಾಮರಾ ಕಡ್ಡಾಯ.

3) ನಡುರಸ್ತೆಯಲ್ಲಿ ವಾಹನ ತಡೆದು ಪರಿಶೀಲನೆ ಮಾಡಬಾರದು.

4) ವಾಹನವನ್ನು ಸೈಡ್ ಗೆ ಹಾಕಿಸಿ ತಪಾಸಣೆ ಮಾಡಬೇಕು.

5) ಪೊಲೀಸರ ಜೊತೆ ಯಾವಾಗಲೂ ವಾಗ್ವಾದ ಮಾಡೋರ ಮೇಲೆ ಕ್ರಮಕ್ಕೆ ಸೂಚನೆ ನೀಡಲಾಗಿದೆ.

6) ವಾಹನ ಸವಾರರ ಬಳಿ ವಾಗ್ವಾದ ಮಾಡದೇ ಬಳಿ ಕ್ಯಾಮರಾ ಇರೋರೆ ಮಾತನಾಡಬೇಕು. ನಂತರ ಆ ವಿಡಿಯೋ ಇಟ್ಟುಕೊಂಡು ಕೇಸ್ ಹಾಕಬಹುದು.

7) ಶಾಲಾ ವಾಹನಗಳ ಬಗ್ಗೆ ಮಾಹಿತಿ ಕಲೆಹಾಕಬೇಕು. ಕೋವಿಡ್ ಬಳಿಕ ಶಾಲಾ ಬಸ್ ಗಳು ಕಡಿಮೆ ಆಗಿದೆ. ಪೋಷಕರೇ ಹೆಚ್ಚಾಗಿ ಕರ್ಕೊಂಡು ಬರ್ತಾ ಇದ್ದಾರೆ, ಇದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಶಾಲಾ ಕಾಲೇಜುಗಳ ಬಳಿ ಮಾಹಿತಿ ಸಂಗ್ರಹ ಮಾಡಬೇಕು. ಪಾರ್ಕಿಂಗ್ ವ್ಯವಸ್ಥೆ ಇದೆಯಾ ಇಲ್ವಾ ಚೆಕ್ ಮಾಡಬೇಕು.

ಇನ್ಮುಂದೆ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದ ದಾಖಲೆ ಪರಿಶೀಲನೆ ಮಾಡುವಂತಿಲ್ಲ ಎಂದು ಡಿಜಿ & ಐಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.

ದಾಖಲೆ ಪರಿಶೀಲನೆ ನೆಪದಲ್ಲಿ ವಾಹನ ತಡೆಯುವಂತಿಲ್ಲ
ಬೆಂಗಳೂರು ನಗರದಲ್ಲಿ ದಾಖಲೆ ಪರಿಶೀಲನೆ ನೆಪದಲ್ಲಿ ವಾಹನಗಳನ್ನು ತಡೆಯುವಂತಿಲ್ಲ. ಕೇವಲ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದವರ ವಾಹನಗಳನ್ನ ತಡೆಯಲು ಪ್ರವೀಣ್ ಸೂದ್ ಹೇಳಿದ್ದಾರೆ.

ಇನ್ನೂ ಈ ಬಗ್ಗೆ ಪ್ರವೀಣ್ ಸೂದ್ ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದ್ದಾರೆ. ಎಲ್ಲೆಂದರಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಡೆದು ದಾಖಲೆ ಪರಿಶೀಲನೆ ಮಾಡ್ತಾರೆ ಎಂದು ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆ ಈ ಆದೇಶ ಹೊರಡಿಸಿದ್ದಾರೆ. ಕಣ್ಣಿಗೆ ಕಾಣುವಂತೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ತಡೆಯಬಹುದಾಗಿದೆ. ಇದರ ಜೊತೆಗೆ ಡ್ರಿಂಕ್ ಆಂಡ್ ಡ್ರೈವ್ ಮಾಡುವ ವಾಹನಗಳನ್ನು ತಪಾಸಣೆ ನಡೆಸಬಹುದಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರವೀಣ್ ಸೂದ್, ನಗರದ ಪೊಲೀಸ್ ಕಮೀಷನರ್ ಹಾಗೂ ಟ್ರಾಫಿಕ್ ಜಂಟಿ ಆಯುಕ್ತರ ಟ್ವಿಟರ್ ಖಾತೆಗಳಿಗೂ ಟ್ಯಾಗ್ ಮಾಡಿದ್ದಾರೆ.

ಬೆಂಗಳೂರಿನ ಪೊಲೀಸರಿಂದಲೇ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ದಂಡದ ಸಂಗ್ರಹಕ್ಕಾಗಿ ರಸ್ತೆಯಲ್ಲಿಯೇ ವಾಹನಗಳನ್ನು ತಡೆಯುತ್ತಾರೆ. ಇದರಿಂದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದವು.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button