
ದೇಶದ ಪರಿಸರ ಮತ್ತು ಮಾನವನ ಆರೋಗ್ಯವನ್ನು ಕಾಡುತ್ತಿರುವ ಮಾಲಿನ್ಯಗಳಲ್ಲಿ ಶಬ್ಧ ಮಾಲಿನ್ಯವು ಒಂದು. ದೇಶದ ಅತ್ಯಂತ ಶಬ್ದಮಾಲಿನ್ಯಕಾರಕ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ ಎನ್ನೋದು ಆತಂಕದ ವಿಚಾರ.
ಶಬ್ದ ಮಾಲಿನ್ಯಕ್ಕೆ ಕಾರಣವಾಗೋ ಸಂಗತಿಗಳಲ್ಲಿ ಪ್ರಮುಖವಾಗಿರುವ ವಾಹನಗಳ ಕರ್ಕಶ ಸದ್ದಿಗೆ ಬ್ರೇಕ್ ಹಾಕೋ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ. ಹಾಗಂತ ಎಚ್ಚರಿಸೋ ಪ್ರಯತ್ನಗಳೂ ನಿಂತಿಲ್ಲ.
ಇದರ ಭಾಗವಾಗೇ ರಾಜಧಾನಿ ಬೆಂಗಳೂರು ಹೊರವಲಯ ಸಾದಳ್ಳಿ ಗೇಟ್ ಬಳಿ ಹಾರ್ನ್ ಮಾಡಿ.ಮ ಮಾಲಿನ್ಯಕ್ಕೆ ಕಾರಣವಾಗಬೇಡಿ ಎಂಬ ಶೀರ್ಷಿಕೆ ಅಡಿಯಲ್ಲಿ ಅಭಿಯಾನ ನಡೀತು.
ನಗರದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸೋ ಸಾದಳ್ಳಿ ಟೋಲ್ ಸದಾ ವಾಹನದಟ್ಟಣೆಯಿಂದ ಕೂಡಿರೋ ರಸ್ತೆ. ದಾರಿ ಕೊಡಿ ಎಂದು ಕೇಳೊಕ್ಕೆ ವಾಹನ ಚಾಲಕರು ವಿಪರೀತ ಸದ್ದಿನ ಹಾರ್ನ್ ಹೊಡೆದು ಮಾಲಿನ್ಯಕ್ಕೆ ಕಾರಣವಾಗ್ತಿದಾರೆ.
ಕಿವಿ ತಮಟೆ ಡ್ಯಾಮೇಜ್ ಆಗೋ ಮಟ್ಟದಲ್ಲಿ ಕೇಳಿಸೋ ಹಾರ್ನ್ ಅನಗತ್ಯವಾಗಿ ಹೊಡೀಬೇಡಿ ಎಂದು ವಿದ್ಯಾರ್ಥಿಗಳು, ಎನ್ ಸಿಸಿ ಕೆಡೆಟ್ ಗಳು ಕೈಯಲ್ಲಿ ಪ್ಲಕಾರ್ಡ್ ಗಳನ್ನು ಹಿಡಿದು, ವಾಹನ ಚಾಲಕರಿಗೆ ಗುಲಾಬಿ ಹೂವನ್ನು ಕೊಟ್ಟು ಮನವಿ ಮಾಡಿದ್ದಾರೆ.
‘ಕರ್ಕಷ ಹಾರ್ನ್ ಗಳ ವಿರುದ್ಧ ಕಾನೂನು ಬಲವಾಗಬೇಕು’ಅವಶ್ಯಕತೆ ಇದ್ದರಷ್ಟೆ ಹಾರ್ನ್ ಮಾಡಿ,ಇಲ್ಲದಿದ್ದರೆ ಸುಮ್ಮನಿದ್ದು ಪರಿಸರ ಕಾಪಾಡಿ, ಇತರ ವಾಹನ ಚಾಲಕರ ಕಾಳಜಿ ಮಾಡಿ ಎನ್ನುವ ಮಾರ್ಮಿಕವಾದ ಸಂದೇಶ ವನ್ನು ವಿದ್ಯಾರ್ಥಿಗಳು ಅಭಿಯಾನ ಮಾಡಿದರು.
ಇಂತದ್ದೊಂದು ಅಭಿಯಾನಕ್ಕೆ ಅವಕಾಶ ಮಾಡಿಕೊಟ್ಟ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಟಿಎಸ್ ಪಿ ಕನ್ಸಲ್ಟೆನ್ಸಿ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದ್ರು.
ಮಾಲಿನ್ಯದಿಂದ ವಾಹನ ಚಾಲಕರು ದಿನನಿತ್ಯ ಹಾರ್ನ್ ನಿಂದ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಇನ್ನಷ್ಟು ಜಾಗೃತಿ ನಡೀಬೇಕು. ನೋ ಹಾಂಕ್ ಡೇ ಎನ್ನೋದಿದ್ರೂ ವಾಹನ ಸವಾರರು ಅದಕ್ಕೆ ತಲೆಕೆಡಿಸಿಕೊಳ್ತಿಲ್ಲ.
ಇದಕ್ಕೆಂದೇ ಇರುವ ಕಾನೂನು ಬಲವಾಗಬೇಕೆಂಬುದು ವಾಹನ ಸವಾರರ ಅಭಿಪ್ರಾಯ. ಹಾಗೂ ಜನಸಂಖ್ಯೆಗೆ ಸವಾಲೆಸೆಯುವ ಪ್ರಮಾಣದಲ್ಲಿ ರಸ್ತೆಗಿಳಿಯುತ್ತಿರುವ ವಾಹನಗಳಿಂದ ಹೆಚ್ಚುತ್ತಿರುವ ಶಬ್ಧ ಮಾಲಿನ್ಯ ತಡೆಯಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಹೆಚ್ಚಾಗಿದೆ.