ರಾಜ್ಯ

ವಾರ್ಡ್​ ಮೀಸಲಾತಿ ಕರಡು ಆದೇಶಕ್ಕೆ ಆಕ್ಷೇಪ, ಸಾವಿರಾರು ಅರ್ಜಿ ಸಲ್ಲಿಕೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ವಾರ್ಡ್​ ಮೀಸಲಾತಿ ಪಟ್ಟಿಯ ಕರಡು ಪ್ರತಿಯ ಸಂಬಂಧ ಸಾವಿರಾರು ಆಕ್ಷೇಪಣೆಗಳು ಹರಿದು ಬರುತ್ತಿವೆ.

ಕಾಂಗ್ರೆಸ್​ ಜನಪ್ರತಿನಿಧಿಗಳು ಇರುವ ಕ್ಷೇತ್ರಗಳಲ್ಲೇ ಹೆಚ್ಚು ಆಕ್ಷೇಪಣೆ ಅರ್ಜಿ ಸಲ್ಲಿಕೆಯಾಗಿವೆ ಎಂದು ತಿಳಿದು ಬಂದಿದೆ.ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ 2000ಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿಗಳು ಬಂದಿವೆ.

ವಾರದ ಕೆಳಗೆ 243 ವಾರ್ಡ್​ಗಳಿಗೆ ಮೀಸಲು ನಿಗದಿ ಮಾಡಿದ್ದ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಇಂದು ಕೊನೆಯ ದಿನ ಎಂದು ಹೇಳಿತ್ತು ಹೀಗಾಗಿ ಅರ್ಜಿಗಳ ಸಂಖ್ಯೆ ದುಪ್ಪಟ್ಟಾಗಿವೆ.ಕಾಂಗ್ರೆಸ್​, ಜೆಡಿಎಸ್ ಕ್ಷೇತ್ರಗಳಲ್ಲಿ ಹೆಚ್ಚು ಮಹಿಳಾ ಮೀಸಲು ನಿಗದಿಯಾಗಿದ್ದು, ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ 7 ರಿಂದ 9 ವಾರ್ಡ್ ಗಳು ಎಂದು ವಿಂಗಡನೆ ಮಾಡಲಾಗಿದೆ.

ಇದಕ್ಕೆಲ್ಲಾ ಬಿಜೆಪಿ ದುರುದ್ದೇಶದಿಂದ ಮೀಸಲು ವಿಚಾರದಲ್ಲಿ ಅನ್ಯಾಯ ಮಾಡಿದೆ ಎಂದು ಆರೋಪಗಳ ಸರ ಮಾಲೆ ಹೆಚ್ಚಾಗ್ತಿದೆ.ಪುಲಿಕೇಶಿನಗರದಲ್ಲಿ ಒಂದೇ ಒಂದು ವಾರ್ಡ್​ಗೆ ಸಾಮಾನ್ಯ ಮೀಸಲು, ಪುಲಕೇಶಿ ನಗರದಲ್ಲಿ ಎರಡು ವಾರ್ಡ್ ರೊಟೇಷನ್ ಮಾಡಿಲ್ಲ.

ಮರು ಪರಿಷ್ಕರಣೆ ಮಾಡುವಂತೆ ಇಲಾಖೆಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇದು 2020ರ ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ನಾಯಕರುಗಳು ಆರೋಪಿಸುತ್ತಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button