ಆರೋಗ್ಯ

ವಾರದಲ್ಲೆಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ ಒಳಿತು?

ಮಡಿವಂತಿಕೆ ವಿಷಯವೆಂದೇ ಭಾವಿಸಿರುವ ಲೈಂಗಿಕ ಶಿಕ್ಷಣದ ಬಗ್ಗೆ ಭಾರತದಲ್ಲಿ ಮುಕ್ತವಾಗಿ ಮಾತನಾಡುವುದೇ ಇಲ್ಲ. ಆದರೆ, ಪುರಾಣ ಶಾಸ್ತ್ರಗಳಲ್ಲಿಯೂ ಉಲ್ಲೇಖಿಸಿರುವ ಈ ಕ್ರಿಯೆಗೆ ತನ್ನದೇ ಆದ ಮೌಲ್ಯವಿದೆ.

ವ್ಯಕ್ತಿಯ ಆರೋಗ್ಯಕ್ಕೂ ಅಗತ್ಯವೆಂಬುವುದು ಸಾಬೀತಾಗಿದೆ. ಅಷ್ಟಕ್ಕೂ ವಾರದಲ್ಲೆಷ್ಟು ದಿನ ಲೈಂಗಿಕ ಕ್ರಿಯೆ ನಡೆಸಿದರೆ ಓಕೆ?ಲೈಂಗಿಕ್ರ ಕ್ರಿಯೆ ಬಗ್ಗೆ ಮಾತನಾಡಲು ಭಾರತದಲ್ಲಿ ಮಡಿವಂತಿಕೆ ಜಾಸ್ತಿ. ಆದರೆ, ಸಂತಾನೋತ್ಪತ್ತಿಗೆ ಅನಿವಾರ್ಯವಾದ, ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ಈ ಕ್ರಿಯೆ ಪ್ರತಿಯೊಬ್ಬರಿಗೂ ಅಗತ್ಯವೆಂಬುವುದೂ ಎಲ್ಲರಿಗೂ ಗೊತ್ತು. ಈ ಬಗ್ಗೆ ಮಡಿವಂತಿಕೆ ಏನೇ ಇದ್ದರೂ, ಅರಿವಿನ ಅಗತ್ಯವೂ ಇದೆ. ಲೈಂಗಿಕ ಆರೋಗ್ಯ ಪ್ರತಿಯೊಬ್ಬರಿಗೂ ಅತ್ಯಗತ್ಯ. ‘ಸೆಕ್ಸ್‌ನಲ್ಲಿ ಸಕ್ರಿಯವಾಗಿ, ನಿಯಮಿತವಾಗಿ, ಒಳ್ಳೆ ಮನಸ್ಸಿನಿಂದ ಭಾಗಿಯಾದರೆ ಹೃದ್ರೋಗವೇ ಬರುವುದಿಲ್ಲ,’ ಎಂದು ಸಂಶೋಧನೆಯೊಂದು ದೃಢಪಡಿಸಿದೆ.ಅದರಲ್ಲಿಯೂ ಈಗಿನ ಒತ್ತಡದ ಬದುಕಿನಲ್ಲಿ ಖಿನ್ನತೆ ಎಲ್ಲರನ್ನೂ ಕಾಡುತ್ತದೆ. ಆದರೆ, ಆಗಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಾರ್ಮೋನ್‌ಗಳು ಸೂಕ್ತ ಪ್ರಮಾಣದಲ್ಲಿ ಉತ್ಪತ್ತಿಯಾಗಿ, ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲೂ ನೆರವಾಗುತ್ತದೆ.ಸದಾ ಕೆಲಸ ಮಾಡುವವರಿಗೆ ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲಾಗದಷ್ಟು ಬಿಡುವಿರುವುದಿಲ್ಲ ಇದರಿಂದ ಹೆಚ್ಚಾಗಿ ಜಗಳ ಮತ್ತು ಮನಸ್ತಾಪ ಉಂಟಾಗುತ್ತದೆ.

ಸಂಶೋಧನೆಯ ಪ್ರಕಾರ ಸುಖವಾದ ಜೀವನ ನಡೆಸುತ್ತಿರುವ ದಂಪತಿ ವರ್ಷಕ್ಕೆ 54 ಸಲವಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುತ್ತಾರಂತೆ! ವಾರಕ್ಕೆಷ್ಟು ಸಲ ಸೆಕ್ಸ್ ಓಕೆ?ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ ವಾರಕ್ಕೊಂದು ಸಲ ಸೆಕ್ಸ್ ಮಾಡುವುದರಿಂದ ನೆಮ್ಮದಿ ಮತ್ತು ತೃಪ್ತಿ ಇರುತ್ತದೆ. ಆದರೆ ವಾರಕ್ಕೆ ಒಂದಕ್ಕಿಂತ ಹೆಚ್ಚಿಗೆ ಲೈಂಗಿಕ ಕ್ರಿಯೆ ನಡೆಸಿದರೂ ಆಯಾಸಕ ಕಾಡಬಹುದು. ಆದರೆ, ಲೈಂಗಿಕ ಕ್ರಿಯೆಗೆ ಸಮಾನವಾದಿ ಇತರೆ ಚಟುವಟಿಕೆಗಳಲ್ಲಿ ದಂಪತಿ ಭಾಗಿಯಾಗುವುದು ಅತ್ಯುತ್ತಮವೆಂದು ಈ ಸಂಶೋಧನೆಯಿಂದ ಸಾಬೀತಾಗಿದೆ.

ಆದರೆ, ದಾಂಪತ್ಯದಲ್ಲಿ ಹೊಂದಾಣಿಕೆ, ಪ್ರೀತಿ ಹೆಚ್ಚಲು ಆಗಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಅಗತ್ಯವಿದೆ ಎನ್ನುವುದನ್ನು ಮಾತ್ರ ಈ ಸಂಶೋಧನೆ ಸ್ಪಷ್ಟಪಡಿಸಿದೆ.

Related Articles

Leave a Reply

Your email address will not be published. Required fields are marked *

Back to top button