ರಾಜ್ಯ
ವಾಯುಸೇನೆ ತರಬೇತಿ : ವಿದ್ಯಾರ್ಥಿ ಆತ್ಮಹತ್ಯೆ

ವಾಯುಸೇನೆ ತರಬೇತಿಗೆ ಬಂದಿದ್ದ ದೆಹಲಿ ಮೂಲದ ಯುವಕ ನೇಣು ಬಿಗಿದುಕೊಂಡು ಶಂಕಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಂಗಮ್ಮನಗುಡಿಯ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದಿದೆ.
ದೆಹಲಿ ಮೂಲದ ಅಂಕಿತ್ ಕುಮಾರ್ (೨೭) ಮೃತ ವಿದ್ಯಾರ್ಥಿಯಾಗಿದ್ದು,ಮೃತರ ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.ಕೆಲ ವರ್ಷಗಳ ಹಿಂದೆ ವಾಯು ಸೇನೆ ತರಬೇತಿ ಪಡೆಯಲು ನಗರಕ್ಕೆ ಬಂದಿದ್ದ ಅಂಕಿತ್, ಜಾಲಹಳ್ಳಿಯ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ.
ಕಾರಣಾಂತರದಿಂದ ಅಂಕಿತ್‌ನನ್ನು ತರಬೇತಿಯಿಂದ ಅಧಿಕಾರಿಗಳು ಅಮಾನತು ಮಾಡಿದ್ದರು ಎನ್ನಲಾಗಿದೆ.ಇದರಿಂದ ನೊಂದ ಯುವಕ, ಕಳೆದ ಸೆ. ೨೧ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಎಎಫ್‌ಟಿಸಿ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ. ಇದರ ಅನ್ವಯ ಗಂಗಮ್ಮನಗುಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.