ವರುಣಾರ್ಭಟಕ್ಕೆ ಯುವಕ ಬಲಿ ೧೭ ಸೇತುವೆಗಳು ಮುಳುಗಡೆ

ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಯುವಕ ಮೃತಪಟ್ಟಿದ್ದು, ಕೆರೆಕಟ್ಟೆ ತುಂಬಿಹರಿದು ಬೆಳೆದು ನಿಂತಿದ್ದ ರೈತರ ಬೆಳೆ ನೀರುಪಾಲಾಗಿ ರೈತರು ಚಿಂತಾಕ್ರಾಂತರಾಗುವಂತಾಗಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಮಳೆಗೆ ಸಿದ್ದಾಪುರ ತಾಲ್ಲೂಕಿನ ಕ್ಯಾದಗಿ ಗ್ರಾಮದ ಚಂದ್ರಶೇಖರ್ (೨೪) ಮೃತಪಟ್ಟಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಆರ್ಭಟಕ್ಕೆ ಸಣ್ಣಪುಟ್ಟ ನದಿಗಳು ಉಕ್ಕಿಹರಿದು ೧೭ ಸೇತುವೆಗಳು ಬೆಳಗಾವಿ ಜಿಲ್ಲೆಯಲ್ಲಿ ಮುಳುಗಡೆಯಾಗಿವೆ.ಕ್ಷಣಕ್ಷಣಕ್ಕೂ ನೀರಿನ ಹರಿವು ಹೆಚ್ಚಾಗುತ್ತಿರುವುದರಿಂದ ಉಂಟಾಗಬಹುದಾದ ಪ್ರವಾಹ ಭೀತಿಗೆ ಜನ ಅಂಗೈಯಲ್ಲಿ ಜೀವ ಹಿಡಿದು ಬದುಕುವಂತಾಗಿದೆ.
ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಬೆಳಗಾವಿ ಜಿಲ್ಲೆಯಾದ್ಯಂತ ಪ್ರವಾಹ ಭೀತಿ ಎದುರಾಗಿದೆ.ಮೃತ ಯುವಕನನ್ನು ೨೩ ವರ್ಷದ ಚಂದ್ರಶೇಖರ ನಾರಾಯಣ ಎಂದು ಗುರುತಿಸಲಾಗಿದೆ. ಭಾರೀ ಮಳೆಯಿಂದಾಗಿ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಚಂದ್ರಶೇಖರ ಮಣ್ಣಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು.
ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.ಜಿಲ್ಲೆಯಾದ್ಯಂತ ನಿನ್ನೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ದಾಂಡೇಲಿ ಭಾಗಗಳಲ್ಲಿ ಭಾರೀ ವರ್ಷಧಾರೆಗೆ ಜನರು ಕಂಗೆಟ್ಟಿದ್ದಾರೆ. ನದಿ ಹಳ್ಳಗಳು ತುಂಬಿ ಹರಿಯುತ್ತಿವೆ.ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ದಾಂಡೇಲಿ ಭಾಗಗಳಲ್ಲಿ ಭಾರೀ ವರ್ಷಧಾರೆಗೆ ಜನರು ಕಂಗೆಟ್ಟಿದ್ದಾರೆ.
ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.೧೭ ಸೇತುವೆ ಮುಳುಗಡೆಬೆಳಗಾವಿ ಜಿಲ್ಲೆಯಲ್ಲಿ ೧೭ ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಗೊಕಾಕ್-ಸಿಂಗಾಪುರ, ಗೊಕಾಕ್ -ಚಿಗಡೊಳ್ಳಿ, ಮುಡಲಗಿ-ಸುಣದೊಳ್ಳಿ, ಸುಣದೊಳ್ಳಿ-ಪಟಗುಂಡಿ, ಮೂಡಲಗಿ ಕಮಲದಿನ್ನಿ, ಕಮಲದಿನಿ-ಹುಣಶಾಡ, ಕುಲಗೊಡ-ಔರಾದಿ, ಔರಾದಿ-ಮಹಾಲಿಂಗಪುರ, ಕುಲಗೊಡ-ಸಣಡೊಳ್ಳಿ ಸಣದೊಳ್ಳಿ-ಮೂಡಳ್ಳಿ, ಕುಳಗೋಡ-ಡವಳೇಶ್ವರ, ದವಳೇಶ್ವರ ಮಾಹಾಲಿಂಗಪುರ ಸೇತುವೆಗಳು ಜಲಾವೃತಗೊಂಡಿವೆ.
ಸಿಂಗಳಾಪುರ-ಹುಕ್ಕೇರಿ, ಹುಕ್ಕೇರಿ ನೋಗಿನಾಳ, ನೋಗಿನಾಳ-ಗೋಡಗೇರಿ, ಹುಕ್ಕೇರಿ ಅರ್ಜುನವಾಡ, ಅರ್ಜುನವಾಡ-ಕುರಣಿ,ಸಂಕೇಶ್ವರ-,ಯಲ್ಮರಡಿ-ಕುರಣಿ, ಕುರಣಿ-ಕೋಚರಿ, ಯಲಮರಡಿ-ಯರ್ನಾಳ, ಯರ್ನಾಳ ಹುಕ್ಕೇರಿ, ಯಲಮರಡಿ-ಬೋಡಗೇರಿ, ಬೋಡಗೇರಿ ನೋಗಿನಾಳ, ಸದಲಗಾ-ಬಜವಾಡಿ, ಬಜವಾಡಿ ನಿಪ್ಪಾಣಿ, ಸದಲಗಾ-ಬೋಜ, ಬೋಜ-ಕಾರಜಗ, ಸಿದ್ದಾಳ-ಅಕ್ಕೋಳ, ಭೀವಶಿಯಿಂದ -ಜತ್ರಾಟಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ.ರಾಜ್ಯದಲ್ಲಿ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಕೆಲವೆಡೆ ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಕೇಂದ್ರ ಎಚ್ಚರಿಕೆ ನೀಡಿದೆ.
ಎರಡು ದಿನಗಳಿಂದ ರಾಜಧಾನಿಯಲ್ಲಿ ಮಳೆಯ ಪ್ರಮಾಣ ಭಾಗಶಃ ಕಡಿಮೆಯಾಗಿದ್ದು, ಮೋಡಕವಿದ ವಾತಾವರಣವಿದ್ದು ಚದುರಿದ ರೀತಿಯಲ್ಲಿ ಮಳೆಯ ಸಿಂಚನ ಇದೆ. ಇತ್ತ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾರೆ. ಕಲಬುರಗಿ, ಬೀದರ್, ಗದಗ, ಕೊಪ್ಪಳ, ಯಾದಗಿರಿ ಭಾಗಗಳಲ್ಲಿ ದಾಖಲೆಯ ಮಳೆಗೆ ಜನರು ತತ್ತರಿಸಿದ್ದಾರೆ.ಬೆಳಗಾವಿ ಜಿಲ್ಲೆಗೆ ಭಾರಿ ಮಳೆಯಿಂದ ಆರೆಂಜ್‌ಅಲರ್ಟ್‌ನೀಡಲಾಗಿದೆ.
ಉಳಿದಂತೆ ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್‌ಘೋಷಿಸಲಾಗಿದೆ.ಭಾನುವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡ ೨೪ ಗಂಟೆ ಅವಧಿಯಲ್ಲಿ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮುಂಗಾರು ಸಕ್ರಿಯವಾಗಿತ್ತು. ದಕ್ಷಿಣ ಒಳನಾಡಿನ ಹಲವು ಕಡೆ ಮಳೆಯಾಗಿದೆ.
ಕೊಟ್ಟಿಗೆಹಾರ ೧೧ ಸೆಂ.ಮೀ, ಭಾಗಮಂಡಲ, ಜಯಪುರ, ಕಾಸಲ್‌ರಾಕ್‌ತಲಾ ೭, ಮಂಚಿಕೆರೆ ೬, ಬೆಳ್ತಂಗಡಿ, ಉಡುಪಿ, ಕೊಲ್ಲೂರು, ಉಡುಪಿ, ನಿಪ್ಪಾಣಿ, ಬೀದರ್, ಜಾಲಹಳ್ಳಿ, ಮಡಿಕೇರಿಯಲ್ಲಿ ತಲಾ ೫ ಸೆಂ.ಮೀ. ಮಳೆಯಾಗಿದೆ.ನಾಲ್ಕೈದು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್ ಜಿಲ್ಲೆಯಲ್ಲಿ ಮನೆಗಳು ಕುಸಿದಿದ್ದು ಜನರನ್ನ ಬೀದಿಪಾಲು ಮಾಡಿದೆ.
ಇನ್ನೂ ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್ ತಾಲೂಕಿನ ಚಿಕ್ಕಪೇಟ್ ಗ್ರಾಮದಲ್ಲಿನ ಐದಾರು ಮನೆಗಳಿಗೆ ನೀರು ನುಗ್ಗಿದೆ. ಇದರ ಪರಿಣಾಮವಾಗಿ ಕುಟುಂಬಸ್ಥರು ಬೀದಿಗೆ ಬಿದ್ದಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯಗಳು ನೀರಿನಿಂದ ಹಾಳಾಗಿದ್ದು ಬದುಕು ಬೀದಿಗೆ ಬಿದ್ದಿದ್ದು ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಪ್ರವಾಹ ಸಂತ್ರಸ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ, ಒಡಿಶಾ, ಆಂಧ್ರ ಪ್ರದೇಶ ಗುಜರಾತ್, ಉತ್ತರಖಂಡ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವೆಡೆ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಚಳಿಗಾಲದ ನಡುವೆಯೂ ಮಳೆಯ ಆರ್ಭಟ ಹೆಚ್ಚಾಗಿದ್ದು, ಇನ್ನು ಸೆ.೧೫ರ ವರೆಗೆ ಮಳೆ ಮುಂದುವರೆಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.