ಜೀವನಶೈಲಿಬೆಂಗಳೂರು

ಲಾಲ್ ಬಾಗ್ ಫ್ಲವರ್ ಷೋ ಪ್ರಯುಕ್ತ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ನಮ್ಮ ಮೆಟ್ರೋ

ಬೆಂಗಳೂರು: ಲಾಲ್‌ಬಾಗ್‌ಗೆ ಬರುವ ಸಾರ್ವಜನಿಕರಿಗೆ 3 ದಿನಗಳ ಕಾಲ ನಮ್ಮ ಮೆಟ್ರೋದಲ್ಲಿ ಬಂಪರ್ ಆಫರ್ ದೊರೆಯಲಿದೆ. ಗಾರ್ಡನ್ ಸಿಟಿ ಬೆಂಗಳೂರಿನ ಲಾಲ್‌ಬಾಗ್ ನಲ್ಲಿ ನಡೆಯುತ್ತಿರೋ ಫಲಪುಷ್ಪ ಪ್ರದರ್ಶನಕ್ಕೆ ಬರೋ ಸಾರ್ವಜನಿಕರಿಗೆ ನಮ್ಮ ಮೆಟ್ರೋ ಇದೇ ಆಗಸ್ಟ್ 13ರಿಂದ ಆಗಸ್ಟ್ 15ರವರೆಗೆ ಒಟ್ಟು 3 ದಿನಗಳ ಕಾಲ ರಿಟರ್ನ್ ಜರ್ನಿಗಾಗಿ ಪೇಪರ್ ಟಿಕೆಟ್ ನೀಡುವ ವ್ಯವಸ್ಥೆ ಮಾಡಲಾಗಿದೆ.

ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಲಾಲ್ಬಾಗ್ ಮೆಟ್ರೋ ನಿಲ್ದಾಣ ದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟೆಕೆಟ್ ದರವನ್ನು 30 ರೂಪಾಯಿಗೆ ನಿಗದಿಪಡಿಸಲಾಗಿದೆ.

ಪೇಪರ್ ಟಿಕೆಟ್ ಆ ದಿನದ ಒಂದು ಪ್ರಯಾಣಕ್ಕೆ ಲಾಲ್ಬಾಗ್ ನಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಮಾನ್ಯತೆ ಹೊಂದಿದೆ. ಸ್ಮಾರ್ಟ್ ಕಾರ್ಡ್ ಪ್ರಯಾಣಕ್ಕೆ ಚಾಲ್ತಿಯಲ್ಲಿರುವ ರಿಯಾಯಿತಿ ದರವು ಅನ್ವಯವಾಗುತ್ತದೆ ಎಂದು ನಮ್ಮ ಮೆಟ್ರೋ ನಿಗಮ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button