ರಾಜ್ಯ

ಲಾಲೂಗೆ ಪುತ್ರಿಗೆ ಆದರ್ಶ ಪುತ್ರಿ ಎಂದು ಕೊಂಡಾಡಿದ ರಾಜಕೀಯ ವಿರೋಧಿಗಳು

ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಕಿಡ್ಡಿ ದಾನ ಮಾಡಿರುವುದು ರಾಜಕೀಯ ವಿರೋಧಿಗಳ ಪ್ರಶಂಸೆಗೂ ಪಾತ್ರವಾಗಿದೆ.

ಕಿಡ್ನಿ ವೈಫಲ್ಯದಿಂದ ಸಿಂಗಾಪುರದ ಆಸ್ಪತ್ರೆಯಲ್ಲಿ ದಾಖಲಾಗಿರುವ 74 ವರ್ಷದ ಲಾಲೂ ಅವರಿಗೆ ಅವರ ಪುತ್ರಿ ರೋಹಿಣಿ ಕಿಡ್ನಿ ದಾನ ಮಾಡಿದ್ದು, ಇಬ್ಬರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದಂತೆ ತಂದೆಗಾಗಿ ಮಗಳು ಮಾಡಿದ ಕಿಡ್ನಿ ದಾನವನ್ನು ಹಲವರು ಪ್ರಶಂಸಿದ್ದಾರೆ.

ಅದರಲ್ಲೂ ಲಾಲು ಅವರ ತೀವ್ರ ಟೀಕಾಕಾರರಲ್ಲಿ ಒಬ್ಬರಾಗಿರುವ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರು ಕೂಡ ರೋಹಿಣಿ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೇವಲ 40ರ ಹರಯದ ರೋಹಿಣಿ ಅವರು ತಮ್ಮ ಜೀವವನ್ನು ಲೆಕ್ಕಿಸದೆ ತಂದೆಗಾಗಿ ಕಿಡ್ನಿ ದಾನ ಮಾಡಿರುವುದು ಹೆಮ್ಮೆಯ ಸಂಗತಿ ಅಂತಹ ಆದರ್ಶ ಮಗಳ ಬಗ್ಗೆ ನಾನು ಹೆಮ್ಮೆಪಡುತ್ತೇನೆ.

ನೀವು ಮುಂದಿನ ಪೀಳಿಗೆಗೆ ಮಾದರಿಯಾಗಿದ್ದೀರಿ ಎಂದು ಗಿರಿರಾಜ್‍ಸಿಂಗ್ ಟ್ವಿಟ್ ಮಾಡಿದ್ದಾರೆ.ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ರೋಹಿಣಿ ಅವರನ್ನು ಹೊಗಳಿದ್ದಾರೆ. ನನಗೆ ಮಗಳಿಲ್ಲ. ಇಂದು, ರೋಹಿಣಿ ಆಚಾರ್ಯರನ್ನು ನೋಡಿದ ನಂತರ, ನನಗೆ ಮಗಳನ್ನು ನೀಡದಿದ್ದಕ್ಕಾಗಿ ನಾನು ದೇವರೊಂದಿಗೆ ಹೋರಾಡಲು ಬಯಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ನಿಮ್ಮೆಲರ ಶುಭ ಹಾರೈಕೆಯಿಂದಾಗಿ ಲಾಲೂ ಹಾಗೂ ರೋಹಿಣಿ ಅವರು ಆರೋಗ್ಯವಾಗಿದ್ದಾರೆ ಎಲ್ಲರಿಗೂ ವಂದನೆಗಳು ಎಂದು ಲಾಲೂ ಕುಟುಂಬ ವರ್ಗದವರು ಧನ್ಯವಾದ ತಿಳಿಸಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button