
ತುಮಕೂರು,ಏ.29-ಲಾರಿ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ನೂತನ ವರ ಹಾಗೂ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಚಿಕ್ಕಶೆಟ್ಟಿಕೆರೆ ಬಳಿ ಸಂಭವಿಸಿದೆ. ಅರಸೀಕೆರೆ ತಾಲ್ಲೂಕಿನ ಕಮಲಾಪುರ ವಾಸಿ ಪ್ರಸನ್ನಕುಮಾರ್(30), ಸಂತೋಷ್(29), ಚಾಲಕ ಚಿನ್ನಪ್ಪ(30) ಮೃತ ದುರ್ದೈವಿಗಳು .ವಾರದ ಹಿಂದೆಯಷ್ಟೇ ಅರಸೀಕೆರೆ ತಾಲ್ಲೂಕಿನ ಕಮಲಾಪುರ ಗ್ರಾಮದ ಪ್ರಸನ್ನಕುಮಾರ್ ಅವರಿಗೆ ಮದುವೆ ನಿಶ್ಚಿಯವಾಗಿತ್ತು. ಮದುವೆ ಮನೆಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬೆಂಗಳೂರಿನ ಕಮಲಾಪುರಕ್ಕೆ ಆಗಮಿಸಿದ್ದರು.
ನಸುಕಿನ ಜಾವ ಬೆಂಗಳೂರಿನತ್ತ ಮಾಯಸಂದ್ರ ಮಾರ್ಗವಾಗಿ ಸಂಬಂ ಸಂತೋಷ್ ಹಾಗೂ ಚಾಲಕ ಚಿನ್ನಪ್ಪ ಅವರೊಂದಿಗೆ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದಾಗ ಚಿಕ್ಕಶೆಟ್ಟಿ ಕೆರೆ ಬಳಿ ಮೈಸೂರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ಸಂಬಂಧ ತುರುವೇಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ .