ಲಾಟರಿಯಲ್ಲಿ 25 ಕೋಟಿ ರೂ. ಗೆದ್ದರೂ ಮನಶಾಂತಿ ಇಲ್ಲ : ಶತ್ರುಗಳು ಹೆಚ್ಚಾದರು..!

ಕೇರಳ : ದಾರಿಯಲ್ಲಿ ಹೋಗುವಾಗ 10 ರೂ. ಸಿಕ್ಕರೂ ಖುಷಿ ಪಡುತ್ತೇವೆ. ಆದ್ರೆ ಕೇರಳದ ಮೆಗಾ ಓಣಂ ರಾಫೆಲ್‌ನಲ್ಲಿ ರೂ .25 ಕೋಟಿ ಗೆದ್ದ ಆಟೋರಿಕ್ಷಾ ಚಾಲಕ ಅನೂಪ್ ಯಾಕಾದ್ರೂ ಗೆದ್ದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ʼನಾನು ಮನಶಾಂತಿಯನ್ನೇ ಕಳೆದುಕೊಂಡಿದ್ದೇನೆ, ನನ್ನ ಸ್ವಂತ ಮನೆಯಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ, ಅಷ್ಟು ತೊಂದರೆಯ ಸುಳಿಯಲ್ಲಿ ಸಿಲುಕಿದ್ದೇನೆ ಎಂದು ನೋವು ತೋಡಿಕೊಂಡಿದ್ದಾರೆ.
ಹಲವಾರು ಜನರು ನನ್ನ ಬಳಿ ಬಂದು ಅವರ ಸಮಸ್ಯೆಗಳನ್ನು ಹೇಳಿ ಧನ ಸಹಾಯ ಮಾಡುವಂತೆ ಪೀಡಿಸುತ್ತಿದ್ದಾರೆ. ಎಲ್ಲರೂ ನನ್ನವರೇ ಅದ್ರೆ ಯಾರಿಗಂತ ಸಹಾಯ ಮಾಡ್ಬೇಕು.
ನಾನು ಗೆದ್ದರೂ ಮನಶಾಂತಿಯನ್ನು ಕಳೆದುಕೊಂಡಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ. ಇನ್ನು ಅನೂಪ್ ತನ್ನ ಹೆಂಡತಿ, ಮಗು ಮತ್ತು ತಾಯಿಯೊಂದಿಗೆ ಶ್ರೀಕಾರಿಯಂನಲ್ಲಿ ವಾಸಿಸುತ್ತಿದ್ದಾರೆ.
ಅನೂಪ್ ಅವರು ತನ್ನ ಮಗು ಕೂಡಿಟ್ಟಿದ್ದ ಹಣದ ಪೆಟ್ಟಿಗೆಯನ್ನು ಒಡೆದ ಸ್ಥಳೀಯ ಏಜೆಂಟ್‌ನಿಂದ ಟಿಕೆಟ್ ತೆಗೆದುಕೊಂಡಿದ್ದಂತೆ. ಅವರ ಅದೃಷ್ಟ ಖುಲಾಯಿಸಿ ವಿಜೇತರಾಗಿದ್ದಾರೆ.
ಸದ್ಯ ತೆರಿಗೆ ಮತ್ತು ಇತರ ಬಾಕಿಗಳನ್ನು ಕಡಿತಗೊಳಿಸಿದ ನಂತರ, ಅನೂಪ್ ಅವರಿಗೆ ಬಹುಮಾನದ ಮೊತ್ತವಾಗಿ 15 ಕೋಟಿ ರೂ. ಅವರ ಖಾತೆ ಸೇರಲಿದೆ.
ನಾನು ನಿಜವಾಗಿಯೂ ಲಾಟರಿ ಗೆಲ್ಲಬಾರದಿತ್ತು. ಗೆದ್ದಾಗ ಎರಡು ದಿನ ಆನಂದಿಸಿದೆ. ಮನೆಯಿಂದ ಹೊರಗೆ ಹೋಗಲು ಸಹ ಸಾಧ್ಯವಾಗುತ್ತಿಲ್ಲ.
ಜನರು ನನ್ನಿಂದ ಸಹಾಯ ಕೋರಿ ನನ್ನ ಹಿಂದೆ ಬರುತ್ತಿದ್ದಾರೆ ಎಂದು ಅನೂಪ್ ಹೇಳಿದರು. ಅಲ್ಲದೆ, ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಜನರಿಗೆ ಇನ್ನೂ ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಹೇಳಿದ್ದಾರೆ.
ಹಣವನ್ನು ಏನು ಮಾಡಬೇಕೆಂದು ನಾನು ನಿರ್ಧರಿಸಿಲ್ಲ. ಸಂಪೂರ್ಣ ಹಣವನ್ನು ಎರಡು ವರ್ಷಗಳವರೆಗೆ ಬ್ಯಾಂಕಿನಲ್ಲಿ ಇಡುತ್ತೇನೆ. ಈಗ ನನ್ನ ಪರಿಚಿತರೇ ಶತ್ರುಗಳಾಗುವ ಹಂತ ಬಂದಿದೆ.
ನನ್ನನ್ನು ಹುಡುಕಿಕೊಂಡು ಬರುವ ಅನೇಕರು ನೆರೆಹೊರೆಯಲ್ಲಿ ಸುತ್ತಾಡುವುದರಿಂದ ನನ್ನ ಅಕ್ಕಪಕ್ಕದ ಮನೆಯವರು ಕೋಪಗೊಂಡಿದ್ದಾರೆ.
ಮಾಸ್ಕ್ ಧರಿಸಿದಾಗಲೂ, ಜನರು ನನ್ನ ಸುತ್ತಲೂ ಗುಂಪುಗೂಡುತ್ತಾರೆ, ನನ್ನ ಮನಸ್ಸಿನ ಶಾಂತಿಯೆಲ್ಲ ಮಾಯವಾಗಿದೆ ಎಂದು ಅನೂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.