ರೌಡಿಗಳ ತಾಣವಾಗಿರುವ ಪೊಲೀಸ್ ಠಾಣೆ: ರೇವಣ್ಣ

ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಭೀಕರ ಕೊಲೆ ಪ್ರಕರಣ ವಿಚಾರವಾಗಿ ವೃತ್ತ ನಿರೀಕ್ಷಕ ರೇಣುಕಾ ಪ್ರಸಾದ್‍ರನ್ನು ಕೂಡಲೇ ಸಸ್ಪೆಂಡ್ ಜೊತೆಗೆ ಅವರ ಮೊಬೈಲ್ ಸೀಜ್ ಮಾಡಿ ಪ್ರಾಮಾಣಿಕ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಲ ಆರೋಪಗಳಿಗೆ ದೂರು ಇಲ್ಲದೇ ನಾವುಗಳು ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದು, ಇದೆ ರೇಣುಕಾ ಪ್ರಸಾದ್ ಬರುವಾಗ ಹೇಗೆ ಬಂದಿದರು, ಈಗ ಇವರು ಮೂರು ಕೋಟಿ ಮನೆ ಕಟ್ಟಲು ಎಲ್ಲಿಂದ ಹಣ ಬಂತು.
ಎಲ್ಲಾವುದರ ಬಗ್ಗೆ ನನ್ನ ಬಳಿ ರೆಕಾರ್ಡ್ ಇದೆ ಎಂದರು.ಎರಡು ಪೊಲೀಸ್ ಠಾಣೆಗಳು ರೌಡಿಗಳ ತಾಣವಾಗಿವೆ.
ಈ ಬಗ್ಗೆ ಎಸ್‍ಪಿ ಮತ್ತು ಡಿಸಿಯವರ ಹಾಗೂ ಎಲ್ಲಾ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಐಜಿ, ಡಿಜಿ ಹಾಗೂ ಮುಖ್ಯಮಂತ್ರಿಗಳ ಬಗ್ಗೆಯೂ ಗೌರವವಿದೆ.
ರೇಣುಕಾಪ್ರಸಾದ್ ಅವರ ಮೊಬೈಲ್‍ಗಳನ್ನು ಸೀಜ್ ಮಾಡಬೇಕು. ಈತ ಬಿಜೆಪಿ ಸೇರಬೇಕೆಂದು ಕಳೆದ ನಾಲ್ಕು ತಿಂಗಳಿನಿಂದ ಮುಂದಾಗಿದ್ದು, ಇದೆ ರೇಣುಕಾ ಪ್ರಸಾದ್ ಅವರು ಪ್ರಶಾಂತ್‍ಗೆ ನಾಲ್ಕೆ ೈದು ಬಾರಿ ಸೇರ್ಪಡೆಯಾಗುವಂತೆ ಒತ್ತಾಯ ಮಾಡಿದ್ದರು.
ಇವರ ಮೊಬೈಲ್ ಪರಿಶೀಲಿಸಿದರೆ ಮೂಲಕ ಸತ್ಯಾಂಶ ಹೊರಬರಲಿ ಎಂದು ರೇವಣ್ಣ ಒತ್ತಾಯಿಸಿದರು.ರೂರಲ್ ಸರ್ಕಲ್ ಇನ್ಸ್ ಪೆಕ್ಟರ್, ನಗರ ಸರ್ಕಲ್ ಇನ್ಸ್ ಪೆಕ್ಟರ್ , ಡಿವೈಎಸ್ಪಿ ಈ ಮೂವರ ಪೋನ್‍ಗಳನ್ನು ಸೀಜ್ ಮಾಡಿ ಸೂಕ್ತ ರೀತಿಯಲ್ಲಿ ತನಿಖೆ ಮಾಡಬೇಕೆಮದು ಅವರು ಆಗ್ರಹಿಸಿದರು.
ನಗರದಲ್ಲಿ ನಡೆಯುತ್ತಿರುವ ಮಟ್ಕಾ, ಬ್ರಾಂಡಿ ಶಾಪ್ ಸೇರಿದಂತೆ ಇತರೆ ಎಲ್ಲಾವನ್ನು ಇದೆ ರೇಣುಕಾ ಪ್ರಸಾದ್ ನಡೆಸುತ್ತಿದ್ದಾರೆ. ಒಂದು ದಿನಕ್ಕೆ ಒಂದು ಲಕ್ಷ ಸಂಗ್ರಹವಾಗುತ್ತದೆ.
ಒಂದು ಪಾರ್ಟಿಯ ಪರ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಬೇಕಾದರೇ ಈತ ಯಾವ ಸರ್ಕಲ್ ಇನ್ಸ್ ಪೆಕ್ಟರ್ ಎಂದು ಜರಿದರು.ನಗರದಲ್ಲಿ ಯಾವ ಕಾನೂನು ಇಲ್ಲ. ಸುವ್ಯವಸ್ಥೆನು ಇಲ್ಲ ಎಂದು ರೇವಣ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ತರಾಟೆ ತೆಗೆದುಕೊಂಡರು.