Uncategorized

ರೋಹಿತ್, ಕೊಹ್ಲಿ ದಾಖಲೆ ಮುರಿದ ಕನ್ನಡಿಗ ರಾಹುಲ್

ಸೆಲಬ್ರಿಟಿಗಳು ನಿಂತರೂ ಸುದ್ದಿ, ಕೂತರೂ ಸುದ್ದಿ ಎನ್ನುತ್ತಾರೆ, ಅದೇ ರೀತಿ ನಮ್ಮ ಕರುನಾಡಿನ ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರು ಸದಾ ಸುದ್ದಿಯಲ್ಲಿರುತ್ತಾರೆ.

ಕಳೆದ ಕೆಲವು ದಿನಗಳ ಹಿಂದೆ ಜಾಹೀರಾತುವೊಂದರಲ್ಲಿ ತಾವು ಧರಿಸಿದ್ದ ಉಡುಪಿನಿಂದ ಸಾಕಷ್ಟು ಸುದ್ದಿ ಮಾಡಿದ್ದ ಕೆ.ಎಲ್.

ರಾಹುಲ್ ಈಗ ಕ್ರಿಕೆಟ್ ಜೀವನದಲ್ಲೂ ಸುದ್ದಿ ಮಾಡಿದ್ದಾರೆ.ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಕೆ.ಎಲ್.ರಾಹುಲ್ ಅವರು ಭಾರತ ತಂಡದ ವಿರುದ್ಧ ಸತತ 30 ಹಾಗೂ ಅತಿ ಹೆಚ್ಚು ರನ್‍ಗಳನ್ನು ಗಳಿಸಿದ ಆಟಗಾರರ ಪೈಕಿ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ.

2022ರ ಐಪಿಎಲ್‍ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರೂ ರನ್‍ಗಳ ಸುರಿಮಳೆ ಸುರಿಸಿದ ಕೆ.ಎಲ್.

ರಾಹುಲ್ 15 ಪಂದ್ಯಗಳಲ್ಲಿ 2 ಶತಕ ಹಾಗೂ 4 ಅರ್ಧಶತಕಗಳ ನೆರವಿನಿಂದ 616 ರನ್‍ಗಳನ್ನು ಕಲೆ ಹಾಕುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ 2ನೆ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಕೆಲವು ವರ್ಷಗಳಿಂದ ಭಾರತ ತಂಡದ ಖಾಯಂ ಆಟಗಾರರಾಗಿರುವ ಕನ್ನಡಿಗ ಕೆ.ಎಲ್.ರಾಹುಲ್ ಅವರು ಪಂದ್ಯದಿಂದ ಪಂದ್ಯಕ್ಕೆ ತಮ್ಮ ಬ್ಯಾಟಿಂಗ್ ವೈಭವವನ್ನು ಪ್ರದರ್ಶಿಸುತ್ತಿರುವುದರೇ ಟೀಂ ಇಂಡಿಯಾ ಕಂಡ ಶ್ರೇಷ್ಠ ಆಟಗಾರರಾದ ಹಾಲಿ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮೀರಿದ ಆಟಗಾರರೆನಿಸಿಕೊಂಡಿದ್ದಾರೆ.ಕೆ.ಎಲ್.ರಾಹುಲ್ ಅವರು ಸತತ 12 ಇನ್ನಿಂಗ್ಸ್‍ಗಳಲ್ಲಿ 30 ಹಾಗೂ ಅದಕ್ಕಿಂತಲೂ ಹೆಚ್ಚು ರನ್‍ಗಳನ್ನು ಕಲೆ ಹಾಕಿರುವುದೇ ಅಲ್ಲದೆ ಕಳೆದ 14 ಪಂದ್ಯಗಳಲ್ಲಿ 2 ಶತಕ ಹಾಗೂ 1 ಅರ್ಧಶತಕದ ನೆರವಿನಿಂದ 179 ರನ್ ಗಳಿಸಿದ್ದಾರೆ.ಕೆಕೆಆರ್ ತಂಡದ ನಾಯಕರಾಗಿರುವ ಶ್ರೇಯಾಸ್ ಅಯ್ಯರ್ ಹಾಗೂ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸತತ 11 ಪಂದ್ಯಗಳಲ್ಲಿ ಹಾಗೂ ಆರ್‍ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 10 ಪಂದ್ಯಗಳಲ್ಲಿ 30 ಹಾಗೂ ಅದಕ್ಕಿಂತಲೂ ಹೆಚ್ಚು ರನ್‍ಗಳಿಸಿದವರ ಸಾಲಿನಲ್ಲಿದ್ದಾರೆ.

ಆದರೆ ರನ್‍ಗಳ ಸರಾಸರಿ ಆಧಾರದ ಮೇಲೆ ಅವಲೋಕಿಸುವುದಾದರೆ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು 96.16 ಸರಾಸರಿಯಲ್ಲಿ ರನ್ ಗಳಿಸುವ ಮೂಲಕ ನಂಬರ್ 1 ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button