ಅಪರಾಧ

ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 12 ಮಂದಿಗೆ ಪಂಗನಾಮ..!

Fraud

ಕರ್ನಾಟಕದಲ್ಲಿ ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಮಹಿಳೆ ಸೇರಿ ಹಲವು ಮಂದಿ ಬಂಧನವಾಗಿರುವ ನಡುವೆ, ಮಹಾರಾಷ್ಟ್ರದಲ್ಲಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ 12 ಜನರಿಂದು 59 ಲಕ್ಷ ರೂಪಾಯಿ ವಸೂಲು ಮಾಡಿ ವಂಚಿಸಿದ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಧುಲೆ ಮತ್ತು ಜಲಗಾಂವ್ ಜಿಲ್ಲೆಗಳ ಅಭ್ಯರ್ಥಿಗಳನ್ನು ನಂಬಿಸಿ ಸುಶೀಲಾ ಡಿಯೋರೆ ಎಂಬ ಮಹಿಳೆ ವಂಚಿಸಿದ್ದಾರೆ ಎನ್ನಲಾಗಿದೆ.ಪರಿಚಯಸ್ಥರ ಮೂಲಕ ಸಂತ್ರಸ್ತರನ್ನು ಸಂಪರ್ಕಿಸಿದ ಮಹಿಳೆ ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ.

ಅದಕ್ಕಾಗಿ ಅಭ್ಯರ್ಥಿ ನಿರ್ದಿಷ್ಟ ಮೊತ್ತವನ್ನು ನೀಡಬೇಕು ಎಂದು ಸೂಚಿಸಲಾಗಿದೆ. ಟಿಕೆಟ್ ಕಲೆಕ್ಟರ್ ಮತ್ತು ರೈಲ್ವೆ ಸಹಾಯಕರಾಗಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ 12 ಮಂದಿಯಿಂದ ಹಣ ವಸೂಲಿ ಮಾಡಲಾಗಿದೆ.

ನಂತರ ಮುಚ್ಚಿದ ಲಕೋಟೆಯಲ್ಲಿ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಅದನ್ನು ಹಿಡಿದು ಕೆಲಸಕ್ಕೆ ಹಾಜರಾಗಲು ಸೆಂಟ್ರಲ್ ರೈಲ್ವೇ ಕಚೇರಿಗೆ ಆಗಮಿಸಿದವರಿಗೆ ನೇಮಕಾತಿ ಪತ್ರಗಳು ನಕಲಿ ತಿಳಿದು ಬಂದಿದೆ. ತಮ್ಮ ಹಣವನ್ನು ಮರುಪಾವತಿಸಲು ಸಂತ್ರಸ್ಥರು ಕೇಳಿದಾಗ, ಮಹಿಳೆ ಚೆಕ್‍ಗಳನ್ನು ನೀಡಿದ್ದಾರೆ.

ಅದು ಬೌನ್ಸ್ ಆಗಿದೆ, ನಂತರ ವಂಚನೆಗೆ ಒಳಗಾದವರು ಶಿವಾಜಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈವರೆಗೆ ಆರೋಪಿಯನ್ನು ಬಂಸಿಲ್ಲ ಎಂದು ಅಕಾರಿ ತಿಳಿಸಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button