ರೈತರ ಹೋರಾಟಕ್ಕೆ ಮಣಿದು ದಿಗ್ಬಂಧನ ವಾಪಸ್

ಶೀಘ್ರ ಭತ್ತ ಖರೀದಿಗೆ ಆಗ್ರಹಿಸಿ ಕಳೆದ ೨೧ ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದ ಹರಿಯಾಣ ರೈತರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಹಿನ್ನೆಲೆಯಲ್ಲಿ ದಿಬ್ಬಂಧನ ಹಿಂಪಡೆದಿದ್ದಾರೆ. ರಸ್ತೆ ದಿಗ್ನಂಧನದಿಂದಾಗಿ ಕುರುಕ್ಷೇತ್ರದ ಸುತ್ತಲಿನ ರಾಷ್ಟ್ರೀಯ ಹೆದ್ದಾರಿ ೪೪ರಲ್ಲಿ ಭಾರಿ ಸಂಚಾರ ಅಸ್ತವ್ಯಸ್ತವಾಗಿತ್ತು.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಭತ್ತ ಖರೀದಿಗೆ ಮುಂದಾಗುವುದಾಗಿ ರೈತರಿಗೆ ಭರವಸೆನೀಡಿದೆ.ಅಕ್ಟೋಬರ್ ೧ ರಿಂದ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸುವ ಜೊತೆಗೆ ಧಾನ್ಯ ಮಾರುಕಟ್ಟೆಗಳಿಂದ ಭತ್ತವನ್ನು ಸಾಗಿಸಲು ಪ್ರಾರಂಭಿಸುವುದಾಗಿ ಗುರ್ನಾಮ್ಸಿಂಗ್ ಚಾರುಣಿ ಅವರ ಸಂಘಟನೆ ಭಾರತೀಯ ಕಿಸಾನ್ಯೂನಿಯನ್-ಚಾರುಣಿ ನೇತೃತ್ವದ ಸಂಘಟನೆಗೆ ಸರ್ಕಾರ ಭರವಸೆ ನೀಡಿದೆ.ಬೆಳೆ ಹೆಚ್ಚು ಇಳುವರಿ ಪಡೆಯುವ ಐದು ಜಿಲ್ಲೆಗಳಲ್ಲಿ ಸಂಗ್ರಹಣೆಯ ಮಿತಿ ರಾಜ್ಯಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ.
ಎಕರೆಗೆ ೨೨ ರಿಂದ ೩೦ ಕ್ವಿಂಟಾಲ್‌ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.ತೊಂದರೆಯಾಗದಂತೆ ಕ್ರಮ: ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ “ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹರಿಯಾಣ ಸರ್ಕಾರ ನ್ಯಾಯಾಲಯಕ್ಕೆ ಈ ವಿಷಯ ತಿಳಿಸಿದೆ.
ಮಧ್ಯರಾತ್ರಿ ನಡೆದ ವಿಚಾರಣೆಯಲ್ಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ. ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹದಗೆಡದಂತೆ ತಡೆಯಲು ರಾಜ್ಯಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯ ಎಚ್ಚರಿಕೆ ಸೂಚಿಸಿದೆ.