ರೈತರು ಹೊಸ ತಂತ್ರಜ್ಞಾನ ಅಳವಡಿಕೆಗೆ ಕರೆ

ಹಿಂದಿನ ಕಾಲದಿಂದಲೂ ಕೃಷಿ ಮೇಳಗಳು ಆಯೋಜಿಸ ಲಾಗುತ್ತಿದೆ. ಆದರೆ ಈ ಕಾಲಘಟ್ಟದಲ್ಲಿ ನಮ್ಮ ಆಲೋಚನೆಗಳಿಗೆ ತಕ್ಕಂತೆ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿವೆ.
ರೈತರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉತ್ಪಾದನೆ ಹಾಗೂ ಆದಾಯ ದ್ವಿಗುಣಗೊಳಿಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.ಬೆಂಗಳೂರು ಕೃಷಿವಿಶ್ವವಿದ್ಯಾಲಯದ ಆವರಣದಲ್ಲಿ ‘ಕೃಷಿಯಲ್ಲಿ ನವೋದ್ಯಮ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿರುವ ಕೃಷಿಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಕೃಷಿ ಮೇಳ ದೇಶದ ಸ್ಟಾರ್ಟಪ್ ಉದ್ಯಮಗಳಿಗೆ ಒತ್ತು ನೀಡಿದಂತಾಗುತ್ತದೆ.
ಕೃಷಿಯಲ್ಲಿ ಹೈನುಗಾರಿಕೆ, ತೋಟಗಾರಿಕೆ, ಹತ್ತು ಹಲವು ರೈತ ಉಪಯೋಗಿ ವಸ್ತುಗಳ ಪ್ರಯೋಜನಗಳನ್ನು ರೈತರು ಪಡೆದುಕೊಂಡು ಉತ್ತಮ ಆದಾಯದ ನಿರೀಕ್ಷಿತ ಮಟ್ಟಕ್ಕೆ ತಲುಪಲು ಸಹಾಯ ಮಾಡುವುದರ ಜೊತೆಗೆ ಮತ್ತೊಬ್ಬರಿಗೆ ಪ್ರೇರಣೆ ಆಗಲಿದೆ ಎಂದರು.ನನ್ನದು ಕೃಷಿ ಪ್ರಧಾನ ಕುಟುಂಬ:ಭಾರತ ಕೃಷಿ ಪ್ರಾಧಾನ್ಯ ದೇಶ.
ನನ್ನ ತಂದೆ ತಾಯಿ ಕೃಷಿ ಕುಟುಂಬದಿಂದ ಬಂದವರು.ಆದರೆ ಇಂದಿನ ಯುವ ಪಿಳಿಗೆ ಕೃಷಿಯಿಂದ ದುರ ಸರಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ನನ್ನ ಮಗ, ಸೊಸೆ ಕೃಷಿಯಲ್ಲಿ ತೊಡಗಿಕೊಂಡು ಉತ್ತಮ ಕೃಷಿಕ ಕುಟುಂಬದ ಹೆಸರು ಉಳಿಸುತ್ತಿದ್ದಾರೆಂದು ಹೆಮ್ಮೆ ವ್ಯಕ್ತಪಡಿಸಿದರು.ಕೃಷಿಸಚಿವ ಬಿ.ಸಿ.ಪಾಟೀಲ್ ಮಾತನಾಡಿ,ಭಾರತದ ಜನಸಂಖ್ಯೆ ೧೩೮ಕೋಟಿ ಜನಸಂಖ್ಯೆಗೆ ಭೂಮಿಸಂಖ್ಯೆ ಹೆಚ್ಚಿಲ್ಲ.
ಹೊರದೇಶದಿಂದ ೧೯೬೫ಹಸಿರು ಕ್ರಾಂತಿ ಆದ ನಂತರ ಆಹಾರ ಉತ್ಪಾದನೆ ಹೆಚ್ಚಾಗಿದೆ. ರೈತರು ಕೃಷಿಯೊಂದಿಗೆ ಉಪಕಸುಬು ಮಾಡುತ್ತಾ ಆದಾಯವನ್ನು ದ್ವಿಗುಣಗೊಳಿಸಬೇಕು. ಕೃಷಿ ಎಂದರೆ ಎಲ್ಲರೂ ಇಸ್ರೇಲ್ ಮಾದರಿ ಎನ್ನುತ್ತಾರೆ. ನಮ್ಮ ಕೋಲಾರ ಮಾದರಿ ಕೃಷಿಯನ್ನು ರಾಜ್ಯಾದ್ಯಂತ ಅಳವಡಿಸಿಕೊಂಡರೆ ಉತ್ಪಾದನೆ ದ್ವಿಗುಣ ಗೊಳಿಸಬಹುದು. ಸಮಗ್ರಕೃಷಿ ನೀತಿ ಅಳವಡಿಸಿಕೊಂಡಿದ್ದಾರೆ.
ನಮ್ಮ ವಿಜ್ಞಾನಿಗಳು ರೈತರ ಹೊಲದಲ್ಲಿ ಕಾಣಿಸಿಕೊಳ್ಳಬೇಕು.ಆದುನಿಕ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಅಗ್ರಿಕಲ್ಚರ್ ೭ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಬೆಂಗಳೂರಿನಿಂದ ಆರಂಭಿಸಲಾಗುವುದು. ಸರ್ಕಾರ ರೈತರ ಮಕ್ಕಳು ವಂಚಿತರಾಗಬೇಕೆಂಬ ನಿಟ್ಟಿನಲ್ಲಿ ರೈತ ನಿಧಿ ಮೂಲಕ ೨ರಿಂದ ೧೧ ಸಾವಿರ ರೂ ಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ.
ಈಗಾಗಲೇ ಸುಮಾರು ೪೨೧ ಕೋಟಿ ರೂ. ವಿತರಿಸಲಾಗಿದೆ ಎಂದರು.ಕೃಷಿ ಮೇಳ ವೀಕ್ಷಣೆ:ಕೃಷಿ, ಡ್ರೋಣ್‌ಗಳ ಬಳಕೆ, ಸ್ವಯಂಚಾಲಿತ ಯಂತ್ರೋಪಕರಣಗಳು, ವಿವಿಧ ತಳಿಗಳ ನಾಟಿಕೋಳಿ ಪ್ರದರ್ಶನ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ತಾಕುಗಳ ಪ್ರದರ್ಶನ, ಕೃಷಿ,ತೋಟಗಾರಿಕೆ, ಪಶುಸಂಗೋಪನೆಗಳ ಸುಧಾರಿತ ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳ ವೀಕ್ಷಿಸಿ ರೈತರು ಹಾಗೂ ಸಾರ್ವಜನಿಕರು ಮಾಹಿತಿ ಪಡೆದುಕೊಂಡರು.
ಪ್ರಶಸ್ತಿ ಪ್ರದಾನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಗೋಪಾಲಗೌಡ, .ಎಚ್.ಎಂ.ಮರಿಗೌಡ ಪ್ರಶಸ್ತಿಯನ್ನು ನವಿಕ್ರಮ್, ಕೆನರಾ ಬ್ಯಾಂಕ್ ಪ್ರಾಯೋಜಿತ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಸಿ.ಪಿ.ಕೃಷ್ಣ, ಅತ್ಯುತ್ತಮ ರೈತಮಹಿಳೆ ಪ್ರಶಸ್ತಿಯನ್ನು ಎಂ.ಕವಿತಾ, ಡಾ.ಆರ್.ದ್ವಾರಕೀನಾಥ್ ಪ್ರಶಸ್ತಿಯನ್ನು ಎಂ.ಟಿ.ಮುನೇಗೌಡ, ಡಾ.ಆರ್.ದ್ವಾರಕೀನಾಥ್ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಯನ್ನು ರಾಜೇಗೌಡ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರದಾನ ಮಾಡಿದರು.
ಬಿಡುಗಡೆ: ೯ಹೊಸ ತಳಿಗಳು ಸೇರಿದಂತೆ ೩೮ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಲಾಯಿತು.ಸಾಮಾಜಿಕ ಜಾಲತಾಣಗಳಲ್ಲಿ ಕೃಷಿಮೇಳ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ಮೇಳದ ಅಧ್ಯಕ್ಷತೆ ವಹಿಸಿ ಸ್ವಾಗತ ಭಾಷಣ ಮಾಡುವ ಮೂಲಕ ಮೇಳದ ಕೃಷಿತಂತ್ರಜ್ಞಾನ ಹಾಗೂ ವೈಶಿಷ್ಟ್ಯವನ್ನು ವಿವರಿಸಿದರು.