ರುಚಿಕರವಾದ ಅಡುಗೆಯಲ್ಲಿ ಭಾರತಕ್ಕೆ 5ನೇ ಸ್ಥಾನ: ಬೆಂಗಳೂರಿನ ಕರಾವಳಿಗೆ ಗರಿ!

ರುಚಿಕರವಾದ ಅಡುಗೆ ಸಿದ್ಧಪಡಿಸುವ ದೇಶಗಳ ಸಮೀಕ್ಷೆಯಲ್ಲಿ ಭಾರತಕ್ಕೆ ವಿಶ್ವದಲ್ಲೇ 5ನೇ ಸ್ಥಾನ ಪಡೆದಿದೆ. ಬೆಂಗಳೂರಿನ ಕರಾವಳಿ ರೆಸ್ಟೋರೆಂಟ್ ವಿಶ್ವದ ಅತ್ಯುತ್ತಮ ಹೋಟೆಲ್ ಗಳ ಪಟ್ಟಿಯಲ್ಲ ಸ್ಥಾನ ಪಡೆದಿದೆ.
ಟೆಸ್ಟ್ ಅಟ್ಲಾಸ್ ಸಂಸ್ಥೆ ಜಗತ್ತಿನಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಭಾರತಕ್ಕೆ 4.5 ಅಂಕ ಬಂದಿದ್ದು,
ಭಾರತದಲ್ಲಿ ಸಿದ್ಧವಾಗುವ ಗರಂ ಮಸಾಲ, ಮಲೈಯಿ, ತುಪ್ಪ, ಬಟರ್ ಗಾರ್ಲಿಕ್ ನಾನ್, ಕೀಮಾ ಮುಂತಾದ ಹೆಚ್ಚು ಅಂಕ ಪಡೆದಿವೆ.ಜಗತ್ತಿನಾದ್ಯಂತ 460 ತಿನಿಸುಗಳು ಅತ್ಯಂತ ರುಚಿಕರ ಹಾಗೂ ಹೆಚ್ಚು ಬೇಡಿಕೆಗಳ ತಿಂಡಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಭಾರತದ ಅತ್ಯಂತ ಜನಪ್ರಿಯ ಹೋಟೆಲ್ ಗಳ ಪಟ್ಟಿಯಲ್ಲಿ ಬೆಂಗಳೂರಿನ ಕರಾವಳಿ, ಮುಂಬೈನ ಶ್ರೀ ಥಾಕೇರ್ ಭೋಜನಾಲಯ್, ದೆಹಲಿಯ ಬುಕಾರಾ, ಧಮ್ ಬುಕ್ತ್, ಗುರ್ ಗಾಂವ್ ನ ಕೊಮೊರಿಯನ್ ಸ್ಥಾನ ಪಡೆದಿವೆ.ಅತ್ಯಂತ ರುಚಿಕರವಾದ ಅಡುಗೆ ಸಿದ್ಧಪಡಿಸುವಲ್ಲಿ ಇಟಲಿ ನಂ.1 ಸ್ಥಾನದಲ್ಲಿದೆ.
ಗ್ರೀಸ್, ಸ್ಪೇನ್, ಜಪಾನ್, ಭಾರತ ಮತ್ತು ಮೆಕಸ್ಸಿಕೊ ನಂತರ ಸ್ಥಾನಗಳಲ್ಲಿವೆ. ಟರ್ಕಿ, ಅಮೆರಿಕ, ಫ್ರಾನ್ಸ್, ಪೆರು, ಅಗ್ರ 10ರಲ್ಲಿ ಸ್ಥಾನ ಪಡೆದಿದ್ದರೆ, ಚೀನಾ 11 ಸ್ಥಾನದಲ್ಲಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಪಟ್ಟಿಗೆ ವಿಶೇಷ ಆಸಕ್ತಿ ಕಂಡು ಬಂದಿದ್ದು, ವೈರಲ್ ಆಗಿದೆ. ಸುಮಾರು 36 ದಶಲಕ್ಷ ಜನರು ಈ ಪಟ್ಟಿಯನ್ನು ವೀಕ್ಷಿಸಿದ್ದರೆ, 15 ಸಾವಿರಕ್ಕೂ ಅಧಿಕ ಕಮೆಂಟ್ಸ್ ಬಂದಿವೆ.