ರಾಜ್ಯ

ರಾಮಮಂದಿರದ ಗರ್ಭಗುಡಿ ನಿರ್ಮಾಣದ ಪೋಟೋಗಳ ವೈರಲ್

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಗರ್ಭಗುಡಿಯ ಇತ್ತೀಚಿನ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗಿವೆ.ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಹ ಕಾಲಕಾಲಕ್ಕೆ ರಾಮಲಲ್ಲಾ ದೇವಾಲಯದ ನಿರ್ಮಾಣದ ಪ್ರಗತಿ ಕಾರ್ಯ ಎಲ್ಲಿಗೆ ತಲುಪಿದೆ ಎಂಬ ಮಾಹಿತಿ ಹಂಚಿಕೊಳ್ಳುತ್ತಿದೆ.

ಸದ್ಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ದೇವಾಲಯದ ನಿರ್ಮಾಣದ ಇತ್ತೀಚಿನ ಫೋಟೋ ಮತ್ತು ವೀಡಿಯೊಗಳನ್ನು ಟ್ರಸ್ಟ್ ಅಪ್‌ಲೋಡ್ ಮಾಡಿದೆ. ಭಗವಾನ್ ರಾಮಲಲ್ಲಾ ದೇವಾಲಯದ ಗರ್ಭಗುಡಿಯ ನಿರ್ಮಾಣದ ಇತ್ತೀಚಿನ ಚಿತ್ರಗಳು ರೋಮಾಂಚನಗೊಳಿಸುತ್ತವೆ.

ಭಗವಾನ್ ರಾಮಲಾಲ ದೇವಸ್ಥಾನದ ಪರಿಕ್ರಮದ ನಿರ್ಮಾಣ ಪಶ್ಚಿಮ ಭಾಗದಲ್ಲಿ ನಡೆಯುತ್ತಿದ್ದು, ಶ್ರೀರಾಮನ ದೇವಾಲಯದ ಗರ್ಭಗುಡಿಯಲ್ಲಿ ೧೦೦ ಕ್ಕೂ ಅಧಿಕ ಕಲ್ಲುಗಳನ್ನು ಈವರೆಗೆ ಬಳಸಲಾಗಿದೆ.ಅಯೋಧ್ಯೆಯ ರಾಮಸೇವಕ ಪುರಂನಲ್ಲಿ ರಾಮಲಾಲ ಗರ್ಭಗುಡಿಯ ಛಾವಣಿಗೆ ಬಳಸಲಾಗುವ ಕಲ್ಲುಗಳ ಮೇಲೆ ಕೆತ್ತನೆಗಳನ್ನು ಮಾಡಲಾಗುತ್ತಿದೆ.

೩ ತಿಂಗಳೊಳಗೆ ೧೦೦ಕ್ಕೂ ಹೆಚ್ಚು ಕುಶಲಕರ್ಮಿಗಳು ೩೫೦ಕ್ಕೂ ಹೆಚ್ಚು ರಾಮಲಾಲ ದೇವಸ್ಥಾನಕ್ಕೆ ಬಳಸಲಾಗುವ ಕಲ್ಲುಗಳ ಕೆತ್ತನೆಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.ಭಗವಾನ್ ರಾಮಲಲ್ಲಾನ ಗರ್ಭಗುಡಿಯ ಕಲ್ಲುಗಳ ಕೆತ್ತನೆಯ ನಂತರ, ಛಾವಣಿಯ ಕೆತ್ತನೆಯ ಕೆಲಸವೂ ಪ್ರಾರಂಭವಾಗಲಿದೆ. ಜನವರಿ ೨೦೨೩ ರಲ್ಲಿ, ಗರ್ಭಗುಡಿಯ ಮೇಲಿನ ಛಾವಣಿಯ ಕೆಲಸ ಆರಂಭವಾಗಲಿದೆ ಎಂದು ಟ್ರಸ್ಟ್ ತಿಳಿಸಿದೆ.

ದೇವಸ್ಥಾನ ನಿರ್ಮಾಣ ಸಮಿತಿಯ ಸಭೆ ನಡೆದಿದ್ದು, ಛಾವಣಿ ಮತ್ತು ಕಲ್ಲುಗಳ ಕಾಮಗಾರಿಯನ್ನು ಆದಷ್ಟು ಬೇಗ ಮಾಡಬೇಕು ಎಂದು ತೀರ್ಮಾನಿಸಲಾಗಿದೆ.

ಡಿಸೆಂಬರ್ ೨೦೨೩ ರೊಳಗೆ ರಾಮಲಾಲ ಭವ್ಯ ಮಂದಿರದ ನಿರ್ಮಾಣ ಪೂರ್ಣಗೊಳ್ಳಬೇಕು ಮತ್ತು ೨೦೨೪ ರ ಜನವರಿಯಲ್ಲಿ ಮಕರ ಸಂಕ್ರಾಂತಿಯ ದಿನದಂದು ಭಗವಾನ್ ರಾಮಲಲ್ಲಾ ತನ್ನ ಭವ್ಯವಾದ ದೇವಾಲಯದಲ್ಲಿ ವಿರಾಜಮಾನರಾಗಬೇಕು ಎಂಬುದು ಟ್ರಸ್ಟ್‌ನ ಉದ್ದೇಶವಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button