
ಮಂಗಳೂರು: ರಾತೋ ರಾತ್ರಿ ರೈಲು, ಖಾಸಗಿ ವಾಹನದಲ್ಲಿ ಬರುವ ಗ್ಯಾಂಗೊಂದು ಯಾವುದೋ ದೂರದ ದೇವಸ್ಥಾನ, ಪ್ರವಾಸಿ ತಾಣದ ಹೆಸರು ಹೇಳಿ ಕಾರನ್ನು ಬಾಡಿಗೆಗೆ ಗೊತ್ತು ಮಾಡಿ ತೆರಳುತ್ತಾರೆ.
ಸ್ವಲ್ಪ ದೂರ ಹೋಗುತ್ತಿದ್ದಂತೆ ಪ್ರವಾಸಿ ತಾಣವನ್ನೇ ಬದಲಾಯಿಸಲು ಹೇಳಿ ಕಾರು ಚಾಲಕನನ್ನೇ ಲೂಟಿ ಮಾಡುತ್ತಾರೆ. ಈ ರೀತಿಯ ಗ್ಯಾಂಗೊಂದು ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ.
ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಈ ತಂಡ ಸಕ್ರಿಯವಾಗಿದ್ದು, ರಾಜ್ಯದ ವಿವಿಧೆಡೆ ತಿಂಗಳಿಗೊಂದರಂತೆ ಪ್ರಕರಣಗಳು ನಡೆಯುತ್ತಿವೆ.
ಇವರಲ್ಲಿ ಮೂವರನ್ನು ಈಗಾಗಲೇ ಬಂಧಿಸಲಾಗಿದ್ದು, ಇವರು ಕಲಬುರ್ಗಿ ಮೂಲದವರೆಂದು ತಿಳಿದು ಬಂದಿದೆ.
2022 ಆ.20ರಂದು ಮೂವರ ತಂಡ ಮಂಗಳೂರಿನ ಕೆಎಸ್ಸಾರ್ಟಿಸಿಯಲ್ಲಿ ಕಾರೊಂದನ್ನು ಬುಕ್ ಮಾಡಿ ಸುಬ್ರಹ್ಮಣ್ಯಕ್ಕೆ ಹೋಗಲು ಬಾಡಿಗೆ ವಿಚಾರಿಸುತ್ತಾರೆ.
ಬಾಡಿಗೆ ಮಾತುಕತೆ ಅಂತಿಮಗೊಂಡು ಸುಬ್ರಹ್ಮಣ್ಯಕ್ಕೆ ತೆರಳುವಾಗ ಪಡೀಲ್ ಬಳಿ ‘ಸುಬ್ರಹ್ಮಣ್ಯ ಬೇಡ ಮುರ್ಡೇಶ್ವರಕ್ಕೆ ಹೋಗೋಣ’ ಎಂದು ರೂಟ್ ಬದಲಾಯಿಸುತ್ತಾರೆ. ಮುರ್ಡೇಶ್ವರಕ್ಕೆ ಹೋಗುವಾಗ ಗಾಂಜಾ ಎಲ್ಲಿ ಸಿಗುತ್ತದೆ ಎಂದು ಕೇಳುತ್ತಾರೆ.
ಇದರಿಂದ ಅನುಮಾನಗೊಂಡ ಕಾರು ಚಾಲಕ ರಹಿಮಾನ್ ಪೆಟ್ರೋಲ್ ಕಡಿಮೆಯಿದೆ, ಹಾಕಲು ದುಡ್ಡು ಕೇಳುತ್ತಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಆರೋಪಿಗಳು ಕಾರಿನ ಕೀಯನ್ನು ಎಳೆದು, ಹಲ್ಲೆ ನಡೆಸುತ್ತಾರೆ.
ಇದರಿಂದ ಚಾಲಕ ರಹಿಮಾನ್ ಕೈಗೆ ಗಾಯವಾಗುತ್ತದೆ. ಈ ಸಂದರ್ಭ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಪೊಲೀಸರು, ಸಾರ್ವಜನಿಕರು ನೆರವಿಗೆ ಬಂದಿದ್ದಾರೆ.
ಟ್ಯಾಕ್ಸಿಯಿಂದ ತಪ್ಪಿಸಿ ಓಡಿಹೋಗಲು ಯತ್ನಿಸಿದ ಮೂವರು ದುಷ್ಕರ್ಮಿಗಳನ್ನು ಹಿಡಿದು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ 2 ಕೆಲದಿನಗಳ ಹಿಂದೆ ಮೈಸೂರಿನಿಂದ ತುಮಕೂರಿಗೆ ತೆರಳಲು ತಂಡವೊಂದು ಕಾರನ್ನು ಬುಕ್ ಮಾಡುತ್ತದೆ.
ಬಾಡಿಗೆ ಗೊತ್ತು ಮಾಡಿದ ಬಳಿಕ ಕಾರಿನಲ್ಲಿ ತುಮಕೂರು ರಸ್ತೆಯಲ್ಲಿ ಸಾಗುತ್ತಿದ್ದಾಗ ಏಕಾಏಕಿ ನಿರ್ಧಾರ ಬದಲಿಸಿ ಸುಬ್ರಹ್ಮಣ್ಯಕ್ಕೆ ತೆರಳುವ ಎಂದು ರೂಟ್ ಬದಲಾಯಿಸುತ್ತಾರೆ.
ಇದರಲ್ಲಿ ಅನುಮಾನಗೊಂಡ ಚಾಲಕ ನಿರಾಕರಿಸಿದಾಗ ಆತನಿಗೆ ಗಂಭೀರ ಹಲ್ಲೆ ನಡೆಸಿ ಕಾರಿನೊಂದಿಗೆ ತಂಡ ಪರಾರಿಯಾಗುತ್ತದೆ.
ವಾಟ್ಸ್ಯಾಪ್‌ನಲ್ಲಿ ಸಂದೇಶ ರವಾನೆ ಕಾರು ಸುಬ್ರಹ್ಮಣ್ಯ ಕಡೆಗೆ ತೆರಳುವುದನ್ನು ಗಮನಿಸಿದ ಟ್ಯಾಕ್ಸಿ ಚಾಲಕರು ದಕ್ಷಿಣ ಕನ್ನಡ ಜಿಲ್ಲೆಯ ಟ್ಯಾಕ್ಸಿ ಚಾಲಕರಿಗೆ ಮಾಹಿತಿ ನೀಡುತ್ತಾರೆ.
ಈ ಮಾಹಿತಿ ಆಧಾರದಲ್ಲಿ ಟ್ಯಾಕ್ಸಿ ಚಾಲಕರು ಶೋಧ ನಡೆಸಿದಾಗ ಕಾರು ಬೆಳ್ತಂಗಡಿ ಬಳಿ ಪತ್ತೆಯಾಗುತ್ತದೆ. ಆದರೆ ಆರೋಪಿಗಳು ಮಾತ್ರ ಪರಾರಿಯಾಗಿರುತ್ತಾರೆ.
ಅಕ್ರಮ ಸಾಗಾಟಕ್ಕೂ ಬಳಕೆ ದೂರದ ಊರಿನಿಂದ ರೈಲಿನ ಮೂಲಕ ಬರುವ ಪ್ರಯಾಣಿಕರು ಕೆಲವೊಮ್ಮೆ ಗಾಂಜಾ, ಆಫೀಮು, ಎಂಡಿಎಂಎ ಸೇರಿದಂತೆ ಅಕ್ರಮವಾಗಿ ಮಾದಕಗಳನ್ನು ಸಾಗಾಟ ಮಾಡಿ, ಕಾರು ಚಾಲಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ.
ಕೆಲವು ಸಮಯದ ಹಿಂದೆ ವ್ಯಕ್ತಿಯೊಬ್ಬ ಮಂಗಳೂರಿನಿಂದ ಕಾರೊಂದನ್ನು ಬುಕ್ ಮಾಡಿ ಬಿ.ಸಿ.ರೋಡ್‌ಗೆ ತೆರಳುತ್ತಾನೆ.
ಖಚಿತ ಮಾಹಿತಿ ಮೇರೆಗೆ ಪಡೀಲ್ ಬಳಿ ಕಾರನ್ನು ಅಡ್ಡಹಾಕಿ ತಪಾಸಣೆ ನಡೆಸಲಾಗುತ್ತದೆ. ಈ ವೇಳೆ ಮಾದಕ ವಸ್ತು ಪತ್ತೆಯಾಗಿದ್ದು, ಕಾರಿನ ಚಾಲಕನನ್ನೇ ಆರೋಪಿ ಮಾಡಲಾಯಿತು.
ಇದರ ಪರಿಣಾಮ ನಿರಪರಾಧಿ ಚಾಲಕ ಜೈಲಿನಲ್ಲೇ ಕೊಳೆಯುವಂತಾಗಿದೆ ಎಂದು ಹೇಳುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಕುಂಪಲ.
ಪೊಲೀಸರ ಮಾನವೀಯತೆಮುರ್ಡೇಶ್ವರಕ್ಕೆ ತೆರಳಿದ ಕಾರು ಚಾಲಕ ಮೊಹಮ್ಮದ್ ರಹಿಮಾನ್ ಅವರಿಗೆ ತಂಡ ಹಲ್ಲೆ ನಡೆಸಿದೆ. ಈ ಸಂದರ್ಭ ಅದೇ ದಾರಿಯಲ್ಲಿ ತೆರಳುತ್ತಿದ್ದ ಹೊನ್ನಾವರ ಮಂಕಿ ಠಾಣೆಯ ಪೊಲೀಸರು ಮಾನವೀಯತೆ ಮೆರೆದು ಕಾರು ಚಾಲಕರಿಗೆ ರಕ್ಷಣೆ ಒದಗಿಸಿದ್ದಾರೆ.
ರಹಿಮಾನ್ ಅವರಿಗೆ ತುರ್ತು ಆರೋಗ್ಯ ಸೇವೆ ನೀಡಿ ಉಪಚರಿಸಿದ್ದಲ್ಲದೆ, ಆರ್ಥಿಕ ಸಹಾಯವನ್ನು ನೀಡಿ ಮಾನವೀಯತೆ ಮೆರೆದಿದ್ದು, ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಪೊಲೀಸರ ಕಾರ್ಯವನ್ನು ಶ್ಲಾಘಿಸಿದೆ.
ಕಾರಿನ ಚಾಲಕರು ಎಚ್ಚರ ವಹಿಸಿರಾತ್ರಿ ಹೊತ್ತು ದೂರದ ಊರಿಗೆ ಬಾಡಿಗೆಗೆ ತೆರಳುವ ವೇಳೆ ಪ್ರಯಾಣಿಕರನ್ನು ಸರಿಯಾಗಿಯೇ ವಿಚಾರಿಸಿಯೇ ತೆರಳಿ .
ಬಾಡಿಗೆಗೆ ತೆರಳುವ ಮುನ್ನ ಪ್ರಯಾಣಿಕರ ಮೊಬೈಲ್‌ನಿಂದ ಮಿಸ್ ಕಾಲ್ ಕೊಡಲು ಹೇಳಿ ನಂಬರ್ ಖಾತರಿಪಡಿಸಿಕೊಳ್ಳಿ ಪ್ರಯಾಣ ರೂಟ್, ಪದೇಪದೆ ರಸ್ತೆ ಬದಲಾಯಿಸುವವರ ಬಗ್ಗೆ ಕೂಡಲೇ ಜಾಗ್ರತೆ ವಹಿಸಿ.
ದೂರದ ಊರಿಗೆ ಪ್ರಯಾಣ ಹೋಗುವಾಗ ಸಾಧ್ಯವಾದರೆ ಪರಿಚಿತರನ್ನು ಕರೆದುಕೊಂಡು ಹೋದರೆ ಸುರಕ್ಷಿತಪ್ರಯಾಣಿಕರ ಮಾಹಿತಿಯನ್ನು ಅವರ ಯಾವುದಾದರೂ ದಾಖಲೆಗಳನ್ನು ನೋಡಿ ಖಚಿತಪಡಿಸಿಕೊಳ್ಳಿ.
ಮಾದಕ ವಸ್ತುಗಳ ಸಾಗಾಟದ ಬಗ್ಗೆಯೂ ಎಚ್ಚರವಹಿಸಿ. ಏನಾದರೂ ಸಂಶಯಾಸ್ಪದ ಸೊತ್ತುಗಳ ಬಗ್ಗೆ ಅನುಮಾನ ಕಂಡು ಬಂದರೆ ಪೊಲೀಸರಿಗೆ ಮಾಹಿತಿ.