ರಾಜ್ಯ

ರಾಜ್ಯಾದ್ಯಂತ ಆನ್‍ಲೈನ್‍ನಲ್ಲಿ ಮದ್ಯಮಾರಾಟ ನಿಷೇಧ

ರಾಜ್ಯಾದ್ಯಂತ ಆನ್‍ಲೈನ್‍ನಲ್ಲಿ ಮದ್ಯಮಾರಾಟ ನಿಷೇಧ ಮಾಡಲು ಸರ್ಕಾರ ತೀರ್ಮಾನಿಸಿದೆ.ಆನ್‍ಲೈನ್ ಮಾರಾಟ ವ್ಯವಸ್ಥೆಯಿಂದ ಅಬಕಾರಿ ಇಲಾಖೆಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರುವುದಿಲ್ಲ, ಜೊತೆಗೆ ಹಲವು ಮದ್ಯದಂಗಡಿಗಳಲ್ಲಿ ಸಿಬ್ಬಂದಿ ತಮ್ಮ ನೌಕರಿ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.

ಆನ್‍ಲೈನ್‍ನಲ್ಲಿ ಮದ್ಯ ಮಾರಾಟ ಪ್ರಸ್ತಾವನೆಯನ್ನು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮಾಡಿತ್ತು, ಆ ವೇಳೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದವು. ಅದಾದ ನಂತರ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮತ್ತೆ ಪ್ರಸ್ತಾಪ ಮಾಡಲಾಯಿತು.

ಆನ್‍ಲೈನ್ ಮದ್ಯ ಮಾರಾಟದ ಕಾರ್ಯ ಸಾಧ್ಯತೆಯನ್ನು ಅಧ್ಯಯನ ಮಾಡಲು ವಿವಿಧ ರಾಜ್ಯಗಳಿಗೆ ತನ್ನ ಅಕಾರಿಗಳನ್ನು ಕಳುಹಿಸುವಂತೆ ಅಂದಿನ ಸರ್ಕಾರ ಅಬಕಾರಿ ಇಲಾಖೆಗೆ ಸೂಚಿಸಿತ್ತು.ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲೂ ಮದ್ಯದ ಮಳಿಗೆಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಸರ್ಕಾರವು ಆನ್‍ಲೈನ್ ಮಾರಾಟವನ್ನು ಪರಿಚಯಿಸಸಲು ಬಯಸಿತ್ತು.

ರಾಜ್ಯಾದ್ಯಂತ 14,000ಕ್ಕೂ ಹೆಚ್ಚು ಮದ್ಯದಂಗಡಿಗಳ ಪರವಾನಗಿದಾರರು ಇದ್ದಾರೆ. ಸಾವಿರಾರು ಕುಟುಂಬಗಳು ಈ ಮಳಿಗೆಗಳನ್ನು ಅವಲಂಬಿಸಿವೆ.ಆನ್‍ಲೈನ್ ಮದ್ಯ ಮಾರಾಟಕ್ಕೆ ಅನುಮತಿ ನೀಡಿದರೇ ವ್ಯಾಪಾರದ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ. ಏಕೆಂದರೇ ಅನೇಕ ಗ್ರಾಹಕರು ಮನೆ ಬಾಗಿಲಿಗೆ ಮದ್ಯ ಪೂರೈಸಲು ಬಯಸುತ್ತಾರೆ.

ಈ ಕಾರಣಕ್ಕಾಗಿಯೇ ನಾವು ಪ್ರಸ್ತಾವನೆಯನ್ನು ರದ್ಧುಗೊಳಿಸಲು ಇಲಾಖೆ ಮುಂದಾಗಿದೆ.ಕಡಿಮೆ ಆದಾಯವಿರುವ ಜನರು ವಿಶೇಷವಾಗಿ ಕೊಳಗೇರಿಯಲ್ಲಿ ವಾಸಿಸುವವರಿಗೆ ಆನ್‍ಲೈನ್ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್ ಭಾಷಣದಲ್ಲಿ 2022-23ನೇ ಸಾಲಿನಲ್ಲಿ 29,000 ಕೋಟಿ ಅಬಕಾರಿ ಆದಾಯದ ಗುರಿ ಹೊಂದಿರುವುದಾಗಿ ಹೇಳಿದ್ದರು. ಆರು ತಿಂಗಳಲ್ಲಿ ಅಬಕಾರಿ ಇಲಾಖೆ ಈಗಾಗಲೇ 14,400 ಕೋಟಿ ಆದಾಯ ಗಳಿಸಿದೆ.

ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಗುರಿಯನ್ನು ಸಾಸುವ ಗುರಿಯನ್ನು ಇಲಾಖೆ ಹೊಂದಿದೆ.ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ, ಹೀಗಾಗಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ, ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button