ರಾಜಕೀಯ

ರಾಜ್ಯಸಭೆಯ 16 ಸ್ಥಾನಗಳಿಗೆ ಇಂದು ಚುನಾವಣೆ

Rajya Sabha elections: Voting underway to fill 16 seats in four states

ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ಹರ್ಯಾಣ ರಾಜ್ಯಗಳಲ್ಲಿ ರಾಜ್ಯಸಭೆಯ 16 ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದೆ. ರಾಜ್ಯಸಭೆಯ 57 ಸ್ಥಾನಗಳಿಗೆ ಇತ್ತೀಚೆಗೆ ಚುನಾವಣೆ ಘೋಷಣೆಯಾಗಿತ್ತು. ಉತ್ತರ ಪ್ರದೇಶ, ತಮಿಳುನಾಡು, ಬಿಹಾರ, ಆಂಧ್ರಪ್ರದೇಶ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್‍ಢ, ಪಂಜಾಬ್, ತೆಲಂಗಾಣ, ಜಾರ್ಖಂಡ್ ಮತ್ತು ಉತ್ತರಾಖಂಡದಲ್ಲಿ 41 ಮಂದಿ ಸದಸ್ಯರು ಕಳೆದ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದರು.ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಕರ್ನಾಟಕದ ರಾಜ್ಯಗಳ್ಲಲಿ ಅವಿರೋಧ ಆಯ್ಕೆಗಿಂತ ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿ ಇದ್ದರಿಂದ 16 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಚುನಾವಣಾ ಆಯೋಗ ವಿಶೇಷ ವೀಕ್ಷಕರನ್ನು ನೇಮಿಸಿ, ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣ ಚಿತ್ರಿಕರಣ ಮಾಡಿಸಿದೆ. ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.

ಈ ಚುನಾವಣೆ ಬಿಜೆಪಿ ಅಭ್ಯರ್ಥಿಗಳಾದ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಕಾಂಗ್ರೆಸ್ ಅಭ್ಯರ್ಥಿಗಳಾದ ರಣದೀಪ್ ಸುರ್ಜೆವಾಲಾ, ಜೈರಾಮ್ ರಮೇಶ್ ಮತ್ತು ಮುಕುಲ್ ವಾಸ್ನಿಕ್ ಮತ್ತು ಶಿವಸೇನೆಯ ರಾಷ್ಟ್ರೀಯ ವಕ್ತಾರ ಸಂಜಯ್ ರಾವುತ್ ಸೇರಿದಂತೆ ಹಲವು ಪ್ರಮುಖರ ಭವಿಷ್ಯ ನಿರ್ಧರಿಸಲಿದೆ. ಬಹುತೇಕ ಪ್ರಮುಖ ನಾಯಕರ ಗೆಲುವಿಗೆ ಯಾವುದೇ ಅಡ್ಡಿಯಿಲ್ಲ ಎಂದು ಹೇಳಾಲಾಗಿದೆ. ಹೆಚ್ಚುವರಿ ಅಭ್ಯರ್ಥಿಗಳ ಗೆಲುವಿಗೆ ಮಾತ್ರ ಕಸರತ್ತು ನಡೆದಿದೆ. ಎದುರಾಳಿಗಳು ಕುದುರೆ ವ್ಯಾಪಾರ ಮಾಡಬಾರದು ಎಂಬ ಕಾರಣಕ್ಕೆ ಕೆಲವು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಹೋಟೆಲ್, ರೆಸಾರ್ಟ್‍ಗಳಲ್ಲಿ ಅಡಗಿಸಿಟ್ಟು, ರಾಜಾತೀಥ್ಯ ನೀಡಿದ್ದವು.

ಮಹಾರಾಷ್ಟ್ರದಲ್ಲಿನ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಎರಡು ದಶಕಗಳ ನಂತರ ಹೆಚ್ಚುವರಿ ಅಭ್ಯರ್ಥಿಗಳು ಮಹಾರಾಷ್ಟ್ರದಲ್ಲಿ ಕಣದಲ್ಲಿದ್ದರು. ಆರು ಸ್ಥಾನಗಳಿಗೆ ಏಳು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಆಡಳಿತಾರೂಢ ಮಹಾರಾಷ್ಟ್ರ ವಿಕಾಸ ಅಗಡಿ (ಎಂವಿಎ)ಯ ಮಿತ್ರಪಕ್ಷಗಳಾದ ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ಪಕ್ಷಗಳು ತಮ್ಮ ಶಾಸಕರನ್ನು ಮುಂಬೈನ ವಿವಿಧ ಹೋಟೆಲ್ ಮತ್ತು ಮತ್ತು ರೆಸಾರ್ಟ್‍ಗಳಲ್ಲಿ ಇರಿಸಿದ್ದವು. ಬಿಜೆಪಿಯಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಅನಿಲ್ ಬೋಂಡೆ, ಧನಂಜಯ್ ಮಹಾದಿಕ್, ಎನ್‍ಸಿಪಿಯಿಂದ ಪ್ರಫುಲ್ ಪಟೇಲ್, ಶಿವಸೇನೆಯಿಂದ ಸಂಜಯ್ ರಾವುತ್, ಸಂಜಯ್ ಪವಾರ್, ಕಾಂಗ್ರೆಸ್‍ನಿಂದ ಇಮ್ರಾನ್ ಪ್ರತಾಪ್ ಗರ್ಹಿ ಅವರು ಆರು ಸ್ಥಾನಗಳಿಗೆ ಕಣದಲ್ಲಿದ್ದರು. ಆರನೇ ಸ್ಥಾನಕ್ಕಾಗಿ ಬಿಜೆಪಿಯ ಮಹಾದಿಕ್ ಮತ್ತು ಶಿವಸೇನೆಯ ಪವಾರ್ ನಡುವೆ ಸ್ಪರ್ಧೆ.

ಶಿವಸೇನೆ 55 ಶಾಸಕರು, ಎನ್‍ಸಿಪಿ 53, ಕಾಂಗ್ರೆಸ್ 44, ಬಿಜೆಪಿ 106 ಶಾಸಕರನ್ನು ಹೊಂದಿದ್ದು, ಬಹುಜನ ವಿಕಾಸ್ ಅಘಾಡಿ (ಬಿವಿಎ) ಮೂರು ಶಾಸಕರನ್ನು, ಸಮಾಜವಾದಿ ಪಕ್ಷ, ಎಐಎಂಐಎಂ ಮತ್ತು ಪ್ರಹಾರ್ ಜನಶಕ್ತಿ ಪಕ್ಷ ತಲಾ ಎರಡು, ಎಂಎನ್‍ಎಸ್, ಸಿಪಿಐ(ಎಂ), ಪಿಡಬ್ಲ್ಯೂಪಿ, ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ ಪಕ್ಷ, ಜನಸುರಾಜ್ಯ ಶಕ್ತಿ ಪಕ್ಷ, ಕ್ರಾಂತಿಕಾರಿ ಶೆಟ್ಕರಿ ಪಕ್ಷ ತಲಾ ಒಬ್ಬರು ಸೇರಿ 13 ಸ್ವತಂತ್ರ ಶಾಸಕರಿದ್ದಾರೆ. ಬಿಜೆಪಿ ಮತ್ತು ಎಂವಿಎ ಪಾಲುದಾರರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಣ್ಣ ಪಕ್ಷಗಳು, ಪಕ್ಷೇತರ ಶಾಸಕರ 25 ಹೆಚ್ಚುವರಿ ಮತಗಳನ್ನು ಕ್ರೋಢಿಕರಿಸುವ ಯತ್ನ ನಡೆಸಿದ್ದರು.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆಯ ಶಾಸಕ ರಮೇಶ್ ಲಟ್ಕೆ ಅವರ ನಿಧನದಿಂದ ಒಂದು ಸ್ಥಾನ ಖಾಲಿಯಾಗಿದೆ. ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಎನ್‍ಸಿಪಿಯ ನವಾಬ್ ಮಲಿಕ್, ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಗೃಹ ಸಚಿವ ಅನಿಲ್ ದೇಶ್‍ಮುಖರಿಂದ ಎರಡು ಸೇರಿ ಒಟ್ಟು ಮೂರು ಸ್ಥಾನಗಳು ಖಾಲಿಯಾಗಿವೆ. ಬಂತರಿಬ್ಬರಿಗೆ ಮತದಾನಕ್ಕೆ ತಾತ್ಕಾಲಿಕ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಹಾಗಾಗಿ ಮತದಾನಕ್ಕೆ 285 ಶಾಸಕರು ಅರ್ಹರಾಗಿದ್ದಾರೆ.

ಹರಿಯಾಣದಲ್ಲಿ ಎರಡು ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಜೆಜೆಪಿಯ ಕೆಲವು ಶಾಸಕರನ್ನು ಚಂಡೀಗಢದ ಬಳಿಯ ರೆಸಾರ್ಟ್‍ನಲ್ಲಿ ಇರಿಸಲಾಗಿತ್ತು. ಕಾಂಗ್ರೆಸ್ ಶಾಸಕರು ಕೂಡ ರೆಸಾರ್ಟ್‍ನಲ್ಲಿದ್ದರು. 90 ಶಾಸಕರ ಸಂಖ್ಯಾಬಲದ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 40 ಶಾಸಕರನ್ನು ಹೊಂದಿದೆ. ಬಿಜೆಪಿ ಗೆಲುವಿಗೆ ಅಗತ್ಯವಾದ 31 ಪ್ರಥಮ ಪ್ರಾಶಸ್ತ್ಯಕ್ಕಿಂತ ಒಂಬತ್ತು ಹೆಚ್ಚುವರಿ ಮತಗಳಿವೆ. ಖಾಸಗಿ ಮಾಧ್ಯಮವೊಂದರ ಮಾಲೀಕ ಕಾರ್ತಿಕೇಯ ಶರ್ಮಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ಬಿಜೆಪಿ-ಜೆಜೆಪಿ ಮಿತ್ರಕೂಟ ಪಕ್ಷೇತರರು ಮತ್ತು ಹರಿಯಾಣ ಲೋಕಿತ್ ಪಕ್ಷದ ಏಕೈಕ ಶಾಸಕ ಗೋಪಾಲ್ ಕಾಂಡ ಬೆಂಬಲ ನೀಡಿದ್ದಾರೆ.

ಬಿಜೆಪಿ ಮಾಜಿ ಸಚಿವ ಕ್ರಿಶನ್ ಲಾಲ್ ಪನ್ವಾರ್ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ ಅಜಯ್ ಮಾಕನ್ ಅಭ್ಯರ್ಥಿಯನ್ನಾಗಿಸಲಾಗಿದೆ. ಕಾಂಗ್ರೆಸ್ 31 ಸದಸ್ಯರನ್ನು ಹೊಂದಿದೆ, ತನ್ನ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಈ ಮತಗಳು ಸಾಕಾಗಲಿವೆ. ಒಂದು ವೇಳೆ ಅಡ್ಡ ಮತದಾನವಾದ ಸಂದರ್ಭದಲ್ಲಿ ಮಾತ್ರ ಆತಂಕವಿದೆ. ಹರ್ಯಾಣದ ಮಾಜಿ ಮುಖ್ಯಮಂತ್ರಿ ದಿವಂಗತ ಭಜನ್ ಲಾಲ್ ಅವರ ಕಿರಿಯ ಪುತ್ರ ಕುಲದೀಪ್ ಬಿಷ್ಣೋಯ್ ಅವರು ಏಪ್ರಿಲ್‍ನಲ್ಲಿ ರಾಜ್ಯ ಕಾಂಗ್ರೆಸ್ ಪುನರ್ರಚನೆಯಾಗಾದ ಸೂಕ್ತ ಸ್ಥಾನ ಸಿಗದ ಕಾರಣ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿಯ ಮಿತ್ರಪಕ್ಷವಾದ ಬಿಜೆಪಿ 10 ಶಾಸಕರನ್ನು ಹೊಂದಿದ್ದರೆ, ಭಾರತೀಯ ರಾಷ್ಟ್ರೀಯ ಲೋಕದಳ ಮತ್ತು ಹರಿಯಾಣ ಲೋಕಿತ್ ಪಕ್ಷ ತಲಾ ಒಬ್ಬರನ್ನು ಹೊಂದಿದೆ. ಏಳು ಮಂದಿ ಪಕ್ಷೇತರರಿದ್ದಾರೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸ್ಪರ್ಧೆಯಿಂದ ಕರ್ನಾಟಕದಿಂದ ನಡೆಯುವ ರಾಜ್ಯಸಭೆ ಚುನಾವಣೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಬಿಜೆಪಿ ಕೇಂದ್ರ ಸಚಿವರೊಂದಿಗೆ ನಟ ಜಗ್ಗೇಶ್‍ರನ್ನು ಗೆಲ್ಲಿಸಿಕೊಳ್ಳಲು ಸಾಕಷ್ಟು ಸಂಖ್ಯಾಬಲ ಹೊಂದಿದೆ. ಹೆಚ್ಚುವರಿಯಾಗಿ ಲೆಹರ್‍ಸಿಂಗ್‍ರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‍ನಿಂದ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಕಣದಲ್ಲಿದ್ದಾರೆ.

ಹೆಚ್ಚುವರಿಯಾಗಿ ಮನ್ಸೂರ್ ಆಲಿಖಾನ್ ಸ್ಪರ್ಧೆ ಮಾಡಿದ್ದಾರೆ. ಜೆಡಿಎಸ್‍ನಿಂದ ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ಕುಪೇಂದ್ರ ರೆಡ್ಡಿ, ಮನ್ಸೂರ್ ಆಲಿಖಾನ್, ಲೇಹರ್ ಸಿಂಗ ಅವರ ನಡುವೆ ಪೈಪೋಟಿಯಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸುಲಭವಾಗಲಿದೆ ಎನ್ನಲಾಗಿದೆ. ಕುದುರೆ ವ್ಯಾಪಾರ ಅಡ್ಡ ಮತದಾನವಾಗಬಾರದು ಎಂಬ ಕಾರಣಕ್ಕೆ ಜೆಡಿಎಸ್ ತನ್ನ ಬಹುತೇಕ ಶಾಸಕರನ್ನು ರೆಸಾರ್ಟ್‍ನಲ್ಲಿರಿಸಿತ್ತು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button