ರಾಜ್ಯದ ಹೆದ್ದಾರಿ ಅಭಿವೃದ್ಧಿ ಗಡ್ಕರಿ ಭರವಸೆ

ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಸಮಗ್ರ ಅಭಿವೃದ್ದಿಗೆ ಅಗತ್ಯ ಸಹಕಾರ ನೀಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.
ಗೊರಗುಂಟೆ ಪಾಳ್ಯದ ಎಲಿವೇಟರ್ ರಸ್ತೆ ಪುನರಾರಂಭಕ್ಕೆ ಕೇಬಲ್ ಅವಳವಡಿಕೆಗೆ ಏಜೆನ್ಸಿಗೆ ಹಲವು ರಸ್ತೆಗಳ ಅಭಿವೃದ್ಧಿ ಕುರಿತಂತೆ ವಹಿಸುವುದು ಸೇರಿದಂತೆ ಕೇಂದ್ರ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು ಈ ಸಂಬಂಧ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಬಿಬಿಎಂಪಿ, ಜಲಮಂಡಳಿ ಮತ್ತು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ರಾಜ್ಯದ ರಾಷ್ಟ್ರೀಯ ಹೆದ್ದಾರಿ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ.
ಕೆಲವು ಯೋಜನೆಗಳಿಗೆ ಸಮ್ಮತಿ ನೀಡಿದ್ದು, ಮತ್ತೆ ಕೆಲವಕ್ಕೆ ಪ್ರಸ್ತಾವನೆ ಸಲ್ಲಿಸಿ,ಶೀಘ್ರ ಅನುಮೋದನೆ ನೀಡುವುದಾಗಿ ಕೇಂದ್ರ ಸಚಿವ ಗಡ್ಕರಿ ಭರವಸೆ ನೀಡಿದ್ದಾರೆ ಎಂದರು.ಹೊರವಲಯದ ಎಸ್‌ಟಿಆರ್‌ಆರ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲವು ರಿಯಾಯಿತಿ ನೀಡಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯ ಬಗ್ಗೆ ರಸ್ತೆ ಆಡಿಟ್ ನಡೆಸಲು ಕೂಡ ಸಚಿವರು ಸಮ್ಮತಿಸಿದ್ದಾರೆ.
ಇದರ ಜೊತೆಗೆ ಒಳಚರಂಡಿ ವ್ಯವಸ್ಥೆಯ ಸುಧಾರಣೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.ಬೆಂಗಳೂರಿಗೆ ಬರುವ ಚೆನ್ನೈ ಎಕ್ಸ್‌ಪ್ರೆಸ್, ಬಾಂಬೆ ಎಕ್ಸ್ ಪ್ರೆಸ್, ಹೈದರಾಬಾದ್ ರಸ್ತೆಗೆ ಅಂತರ್ ಸಂಪರ್ಕ ಮಾಡುವ ಕುರಿತುವ ಚರ್ಚೆ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಹಲವು ಕಡೆ ಮೇಲ್ಸೇತುವೆ, ಅಂಡರ್ ನಿರ್ಮಾಣ ಮಾಡಲಾಗುವುದ.
ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದು ಶೀಘ್ರದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಿದೆ ಎಂದರು.ಅದಿವೇಶನದಲ್ಲಿ ಮಂಡನೆ:ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಮೆಟ್ರೋ, ರೈಲು, ಕೇಬಲ್ ಕಾರು ಸೇರಿದಂತೆ ಸಮಗ್ರ ರಸ್ತೆ ನಿರ್ವಹಣಾ ಪ್ರಾಧಿಕಾರ ರಚನೆ ಸಂಬಂಧ ಮಸೂದೆಯನ್ನು ಬರುವ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜೊತೆಗೆ ಬೇರೆ ಬೇರೆ ಏಜೆನ್ಸಿಯನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ಎಲ್ಲರಲ್ಲಿಯೂ ಸಮನ್ವಯ ಸಾಧಿಸುವುದು ಇದರ ಉದ್ದೇಶ ಎಂದು ಅವರು ಮಾಹಿತಿ ನೀಡಿದರು.
ಸಮನ್ವಯ ಇಲ್ಲದೆ ಅನೇಕ ಯೋಜನೆ ಬಾಕಿ ಉಳಿದಿವೆ. ಈ ಕಾರಣಕ್ಕಾಗಿ ಸಮಗ್ರ ರಸ್ತೆ ನಿರ್ವಹಣಾ ಪ್ರಾಧಿಕಾರ ತರಲಾಗುತ್ತಿದೆ ಎಂದರು.