ರಾಜ್ಯ

ರಾಜ್ಯದಲ್ಲಿ 29 ಹೊಸ ಸರ್ಕಾರಿ ಪಿಯು ಕಾಲೇಜುಗಳು ಆರಂಭ.. ಉತ್ತರ ಕರ್ನಾಟಕ ಭಾಗಕ್ಕೆ 25 ಕಾಲೇಜು ಮಂಜೂರು

ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಹೊಸ ಸರಕಾರಿ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಒಟ್ಟು 29 ಹೊಸ ಪದವಿ ಪೂರ್ವ ಕಾಲೇಜುಗಳನ್ನು ಘೋಷಣೆ ಮಾಡಲಾಗಿದೆ.

ಈ ಪೈಕಿ 25 ಪದವಿ ಪೂರ್ವ ಕಾಲೇಜುಗಳನ್ನು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲೇ ಆರಂಭ ಮಾಡಲಾಗಿದೆ. ಉಳಿದ ಐದು ಕಾಲೇಜುಗಳ ಪೈಕಿ ಪದ್ಮಶ್ರೀ ಪುರಸ್ಕೃತ ಹರಕಳ ಹಾಜಬ್ಬ ಅವರ ಸಂಸ್ಥೆ ಸೇರಿದಂತೆ ಕರಾವಳಿ ಹಾಗೂ ಮಧ್ಯಕರ್ನಾಟಕ ಭಾಗದ ಕೆಲ ಜಿಲ್ಲೆಗಳಿಗೆ ನೀಡಲಾಗಿದೆ.

ರಾಜ್ಯ ಸರ್ಕಾರ, ರಾಜ್ಯದ ಕೆಲ ಪ್ರೌಢ ಶಾಲೆಗಳನ್ನು ಉನ್ನತೀಕರಿಸಿ ಅವುಗಳನ್ನು ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಾಗಿ ಪ್ರಾರಂಭಿಸಲು ಮುಂದಾಗಿತ್ತು. ಈಗ ಇದರ ಭಾಗವಾಗಿ 29 ಹೊಸ ಪಿಯು ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಈ ಎಲ್ಲ ಕಾಲೇಜುಗಳಲ್ಲಿ 2023-24ನೇ ಸಾಲಿನಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿವೆ.

ಹೊಸ ಪದವಿ ಪೂರ್ವ ಕಾಲೇಜುಗಳ ಪಟ್ಟಿ1. ಸರ್ಕಾರಿ ಪದವಿ ಪೂರ್ವ ಕಾಲೇಜು, ದೇವತ್ಕಲ್, ಸುರಪೂರ ತಾಲೂಕು ಯಾದಗಿರಿ ಜಿಲ್ಲೆ2. ಸರ್ಕಾರಿ ಪದವಿ ಪೂರ್ವ ಕಾಲೇಜು, ಹುಣಸಗಿ, ಸುರಪೂರ ತಾಲೂಕು, ಯಾದಗಿರಿ ಜಿಲ್ಲೆ.3. ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಸಲಾಪುರ, ಕನಕಗಿರಿ ತಾಲೂಕು, ಕೊಪ್ಪಳ ಜಿಲ್ಲೆ.4. ಸರ್ಕಾರಿ ಪದವಿ ಪೂರ್ವ ಕಾಲೇಜು, ಚಿಕ್ಕಡಂಕನಕಲ್ಲು, ಕನಕಗಿರಿ, ಕೊಪ್ಪಳ ಜಿಲ್ಲೆ.5.

ಸರ್ಕಾರಿ ಪದವಿ ಪೂರ್ವ ಕಾಲೇಜು, ಕವಲೂರು, ಕೊಪ್ಪಳ ತಾಲೂಕು, ಜಿಲ್ಲೆ.6. ಸರ್ಕಾರಿ ಪದವಿ ಪೂರ್ವ ಕಾಲೇಜು, ಪಗಡದಿನ್ನಿ, ಸಿಂದನೂರು ತಾಲೂಕು, ರಾಯಚೂರು ಜಿಲ್ಲೆ.7. ಸರ್ಕಾರಿ ಪದವಿ ಪೂರ್ವ ಕಾಲೇಜು, ಶಾನವಾಸಪುರ, ಸಿರಗುಪ್ಪ ತಾಲೂಕು, ರಾಯಚೂರು ಜಿಲ್ಲೆ.8.

ಸರ್ಕಾರಿ ಪದವಿ ಪೂರ್ವ ಕಾಲೇಜು, ಪೀರಾಪುರ, ದೇವರಹಿಪ್ಪರಗಿ-ಮುದ್ದೇಬಿಹಾಳ ತಾಲೂಕು, ವಿಜಯಪುರ ಜಿಲ್ಲೆ.9. ಸರ್ಕಾರಿ ಪದವಿ ಪೂರ್ವ ಕಾಲೇಜು, ದೇವರಹಿಪ್ಪರಗಿ, ದೇವರಹಿಪ್ಪರಗಿ ತಾಲೂಕು, ವಿಜಯಪುರ ಜಿಲ್ಲೆ.ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ10.

ಸರ್ಕಾರಿ ಪದವಿ ಪೂರ್ವ ಕಾಲೇಜು, ಇಲಕಲ್, ಹುನಗುಂದ ತಾಲೂಕು, ಬಾಗಲಕೋಟೆ ಜಿಲ್ಲೆ.11. ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಗಳಖೋಡ, ಮುಧೋಳ ತಾಲೂಕು, ಬಾಗಲಕೋಟೆ ಜಿಲ್ಲೆ.12. ಸರ್ಕಾರಿ ಪದವಿ ಪೂರ್ವ ಕಾಲೇಜು, ಮಿರ್ಜಿ, ಮುಧೋಳ ತಾಲೂಕು, ಬಾಗಲಕೋಟೆ ಜಿಲ್ಲೆ.13. ಸರ್ಕಾರಿ ಪದವಿ ಪೂರ್ವ ಕಾಲೇಜು, ಢವಳೇಶ್ವರ, ರಬಕವಿ-ಬನ್ನಹಟ್ಟಿ ತಾಲೂಕು, ಬಾಗಲಕೋಟೆ ಜಿಲ್ಲೆ.14.

ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಲ್ಲಹಳ್ಳಿ, ರಬಕವಿ-ಬನ್ನಹಟ್ಟಿ ತಾಲೂಕು, ಬಾಗಲಕೋಟೆ ಜಿಲ್ಲೆ.15. ಸರ್ಕಾರಿ ಪದವಿ ಪೂರ್ವ ಕಾಲೇಜು, ಶಿರಗೂರ, ರಾಯಭಾಗ – ಕುಡಚಿ ತಾಲೂಕು, ಬೆಳಗಾವಿ ಜಿಲ್ಲೆ.16.

ಸರ್ಕಾರಿ ಪದವಿ ಪೂರ್ವ ಕಾಲೇಜು, ಅಳಗವಾಡಿ, ರಾಯಭಾಗ – ಕುಡಚಿ ತಾಲೂಕು, ಬೆಳಗಾವಿ ಜಿಲ್ಲೆ.17. ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂವಸುದ್ದಿ, ರಾಯಭಾಗ – ಕುಡಚಿ ತಾಲೂಕು, ಬೆಳಗಾವಿ ಜಿಲ್ಲೆ.18. ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾರೋಗೇರಿ, ರಾಯಭಾಗ – ಕುಡಚಿ ತಾಲೂಕು, ಬೆಳಗಾವಿ ಜಿಲ್ಲೆ.19. ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಗಳಖೋಡ, ರಾಯಭಾಗ – ಕುಡಚಿ ತಾಲೂಕು, ಬೆಳಗಾವಿ ಜಿಲ್ಲೆ.20.

ಸರ್ಕಾರಿ ಪದವಿ ಪೂರ್ವ ಕಾಲೇಜು, ಚುಂಚನೂರು, ರಾಮದುರ್ಗ ತಾಲೂಕು, ಬೆಳಗಾವಿ ಜಿಲ್ಲೆ.21. ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆ,ಚಂದರಗಿ, ರಾಮದುರ್ಗ ತಾಲೂಕು, ಬೆಳಗಾವಿ ಜಿಲ್ಲೆ.22. ಸರ್ಕಾರಿ ಪದವಿ ಪೂರ್ವ ಕಾಲೇಜು, ತುರಕರ ಶೀಗಿಹಳ್ಳಿ, ಕಿತ್ತೂರು ತಾಲೂಕು, ಬೆಳಗಾವಿ ಜಿಲ್ಲೆ.23. ಸರ್ಕಾರಿ ಪದವಿ ಪೂರ್ವ ಕಾಲೇಜು, ಎಂ.ಕೆ. ಹುಬ್ಬಳ್ಳಿ, ಕಿತ್ತೂರು ತಾಲೂಕು, ಬೆಳಗಾವಿ ಜಿಲ್ಲೆ.24. ಸರ್ಕಾರಿ ಪದವಿ ಪೂರ್ವ ಕಾಲೇಜು, ಮರಕಟ್ಟಿ, ಕಿತ್ತೂರು ತಾಲೂಕು, ಬೆಳಗಾವಿ ಜಿಲ್ಲೆ.25. ಸರ್ಕಾರಿ ಪದವಿ ಪೂರ್ವ ಕಾಲೇಜು, ಸಿದ್ದಾಪುರ, ಬೈಂದೂರ ತಾಲೂಕು, ಉಡುಪಿ ಜಿಲ್ಲೆ.26.

ಸರ್ಕಾರಿ ಪದವಿ ಪೂರ್ವ ಕಾಲೇಜು, ವಿಟ್ಲ, ಭಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.27. ಸರ್ಕಾರಿ ಪದವಿ ಪೂರ್ವ ಕಾಲೇಜು, ಅರೆಕಳ(ಅಜ್ಜಬ್ಬ), ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.28. ಸರ್ಕಾರಿ ಪದವಿ ಪೂರ್ವ ಕಾಲೇಜು, ಕುರ್ಕಿ, ದಾವಣಗೆರೆ ಉತ್ತರ (ಮಾಯಕೊಂಡ) ತಾಲೂಕು, ದಾವಣಗೆರೆ ಜಿಲ್ಲೆ.29. ಸರ್ಕಾರಿ ಪದವಿ ಪೂರ್ವ ಕಾಲೇಜು, ದುಂಡಶಿ, ಶಿಗ್ಗಾಂವ್ ತಾಲೂಕು, ಹಾವೇರಿ ಜಿಲ್ಲೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button