ರಾಜ್ಯ
ರಾಜಸ್ಥಾನದ ಪಾಲಿಯಲ್ಲಿ ಹಳಿತಪ್ಪಿದ ಸೂರ್ಯನಾಗ್ರಿ ಎಕ್ಸ್ ಪ್ರೆಸ್ ರೈಲು

ಇಂದು ಮುಂಜಾನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಸೂರ್ಯನಾಗ್ರಿ ಎಕ್ಸ್‍ಪ್ರೆಸ್‍ನ ರೈಲಿನ 11 ಬೋಗಿಗಳು ಹಳಿತಪ್ಪಿದ್ದು ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಾಂದ್ರಾ ಟರ್ಮಿನಸ್-ಜೋಧ್‍ಪುರ ಯಾವುದೇ ಮಧ್ಯ ಸುಮಾರು 3.30 ರ ಸಂದರ್ಭದಲ್ಲಿ ಬೋಗಿಗಳು ಹಳಿತಪ್ಪಿದೆ ಎಂದು ವಾಯುವ್ಯ ರೈಲ್ವೆ ವಕ್ತಾರರು ತಿಳಿಸಿ ದ್ದಾರೆ ರಾಜ್ಕಿಯಾವಾಸ್-ಬಮೋದರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಈ ರೈಲಿನ ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ ಬೋಗಿಗಳು ಹಳಿ ಪಕ್ಕದಲ್ಲೇ ಇದ್ದು ಇದರಿಂದಾಗಿ ಈ ಭಾಗದಲ್ಲಿ ಸಂಚರಿಸಬೇಕಿದ್ದ ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ ಅಥವಾ ಬೇರೆಡೆಗೆ ತಿರುಗಿಸಲಾಗಿದೆ ಎಂದು ಹೇಳಿದರು.ರೈಲ್ವೇ ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡ ಪರಿಸ್ಥಿತಿಯನ್ನು ಪರಿಶೀಲಿಸಿದ್ದು ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ತಿಳಿಸಿದ್ದಾರೆ.