ರಾಜ್ಯ

ರಾಜಕೀಯ ಸಂತ ವಾಜಪೇಯಿ ಸ್ಮರಿಸಿದ ಗಣ್ಯರು

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರಮೋದಿ ಮತ್ತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಸೇರಿದಂತೆ ಹಲವು ಗಣ್ಯರು ದೆಹಲಿಯ ರಾಜಘಾಟ್‍ನಲ್ಲಿರುವ ಸದೈವ್ ಅಟಲ್ ಸ್ಮಾರಕಕ್ಕೆ ತೆರಳಿ ವಾಜಪೇಯಿ ಅವರಿಗೆ ನಮನ ಸಲ್ಲಿಸಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಕೂಡ ಪುಷ್ಪನಮನ ಸಲ್ಲಿಸಿದರು.ಸ್ಮಾರಕಕ್ಕೆ ತೆರಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ಅಟಲ್ ಜಿ ಅವರ ಜಯಂತಿಯಂದು ಅವರಿಗೆ ನಮನಗಳು.

ಭಾರತಕ್ಕೆ ಅವರ ಕೊಡುಗೆ ಅವಿಸ್ಮರಣೀಯ. ಅವರ ನಾಯಕತ್ವ ಮತ್ತು ದೃಷ್ಟಿ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ.ಭಾರತಕ್ಕೆ ಅವರ ಕೊಡುಗೆ ಅಳಿಸಲಾಗದು. ಅವರ ನಾಯಕತ್ವ ಮತ್ತು ದೃಷ್ಟಿ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ. ತಾನು ವಾಜಪೇಯಿ ಅವರ ಪರಂಪರೆಯನ್ನು ನೆನಪಿಸಿಕೊಳ್ಳುತ್ತೇನೆ ಅವರು ನಿಜವಾದ ದೇಶಭಕ್ತ ಎಂದು ಸ್ಮರಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತಮ್ಮ ಟ್ವೀಟ್‍ನಲ್ಲಿ, ಅಟಲ್ ಜಿ ಅವರ ಜೀವನವು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಮರ್ಪಿತವಾಗಿದೆ. ಅವರು ನವಭಾರತಕ್ಕೆ ಅಡಿಪಾಯ ಹಾಕಿದವರು ಅವರ ಅವಯ್ಲಲಿ ದೇಶವು ಜಾಗತಿಕ ಸ್ಥಾನ ಗಳಿಸಿತು ಎಂದು ಅವರು ಹಿಂದಿಯಲ್ಲಿ ಬರೆದಿದುಕೊಂಡಿದ್ದಾರೆ.ಅಟಲ್ ಜೀ ಅವರು ನಮ್ಮೆಲ್ಲರಿಗೂ ಸೂರ್ತಿಯ ಮೂಲ.

ಅವರಿಗೆ ನಾನು ತಲೆಬಾಗುತ್ತೇನೆ – ಪೂಜ್ಯ ಮಾಜಿ ಪ್ರಧಾನಿ ಅಟಲ್ಜಿ – ಅವರ ಜನ್ಮ ವಾರ್ಷಿಕೋತ್ಸವದಂದು, ಅವರು ಭಾರತದಲ್ಲಿ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಹೊಸ ಅಧ್ಯಾಯವನ್ನು ಬರೆದರು ಮತ್ತು ವಿಶ್ವ ವೇದಿಕೆಯಲ್ಲಿ ದೇಶಕ್ಕೆ ಹೊಸ ಗುರುತನ್ನು ನೀಡಿದರು.ಅವರು ದಾರ್ಶನಿಕ ಮಾತ್ರವಲ್ಲ, ವಿದ್ವಾಂಸರೂ ಆಗಿದ್ದರು.

ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಅವಿಸ್ಮರಣೀಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮೂಲಕ ಸ್ಮರಿಸಿಕೊಂಡಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button