ರಾಜಕಾಲುವೆ ಒತ್ತುವರಿ ಮಾಡಿದ್ದ 30 ಸಂಸ್ಥೆಗಳಿಗೆ ನೋಟಿಸ್

ಬೆಂಗಳೂರು: ಇತ್ತೀಚಿಗೆ ನಗರದ ಬೆಳ್ಳಂದೂರು, ಮಾರತ್ತಹಳ್ಳಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ರಾಜಕಾಲುವೆ ಒತ್ತುವರಿ ಕಾರಣದಿಂದ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು ಎಂಬ ಆರೋಪಕಕ್ಕೆ ಸರ್ಕಾರ 30 ಐಟಿ ಬಿಟಿ ಸಂಸ್ಥೆಗಳಿಗೆ ರಾಜಕಾಲುವೆ ಒತ್ತುವರಿ ಆರೋಪಕ್ಕೆ ನೋಟಿಸ್ ನೀಡಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.
ವಿಧಾನಸಭೆ ಕಲಾಪದ ಬಳಿಕ ಮಾತಾನ್ನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಾರು ರಾಜಕಾಲುವೆ ಒತ್ತುವರಿ ಮಾಡಿದ್ದಾರೆ ಸಹಜ ಕಾಲುವೆಗೆ ಯಾರೇ ಅಡ್ಡಿ ಬಂದರೂ ತೆರವು ಸೂಚನೆ ನೀಡಿದ್ದೇವೆ.ಅದರಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ,ಎಲ್ಲರಿಗೂ ಕೂಡ ಮಳೆಯಿಂದ ತೊಂದರೆ ಆಗಿದೆ. ತೆರವು ಮಾಡುವುದು ಪ್ರಾರಂಭ ಆಗಿದೆ ನಿಲ್ಲೋದಿಲ್ಲ,ಎಂದು ಭರವಸೆ ನೀಡಿದರು.
ಹಲವಾರು ಪ್ರಕರಣ ಕೋರ್ಟ್ ನಲ್ಲಿ ಈಗಾಗಲೇ ಇದೆ.ಕೋರ್ಟ್ ಕೂಡ ಒತ್ತುವರಿ ತೆರವು ಮಾಡಿ ಅಂತಲೇ ಸೂಚನೆ ನೀಡಿದೆ.ಈ ಬಾರಿ ನಾವು ನಿಲ್ಲಿಸೋದಿಲ್ಲ, ತೆರವು ಮಾಡಿಯೇ ಮಾಡ್ತೇವೆ.ಮಳೆಯಿಂದಾಗಿ ಐಟಿಬಿಟಿಯವರಿಗೂ ತೊಂದರೆ ಆಗಿದೆ, ರಸ್ತೆಯಲ್ಲಿ ಓಡಾಡುವವರಿಗೂ ತೊಂದರೆ ಆಗಿದೆ, ಸಾಮಾನ್ಯರಿಗೂ ತೊಂದರೆ ಆಗಿದೆ.
ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಎಂದರು.ಇದೆ ಸಂದರ್ಭದಲ್ಲಿ ಮಾತಾನ್ನಾಡಿದ ಸಿಎಂ,ಬಸವರಾಜ ದಡೆಸಗೂರು ಆಡಿಯೋ ವೀಡಿಯೋ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಆಡಿಯೋ ವೀಡಿಯೋ ಬಗ್ಗೆ ಗೊತ್ತಿಲ್ಲ ಆದರೆ ಆ ಬಗ್ಗೆ ಪರಿಶೀಲನೆ ಮಾಡ್ತೇವೆ.
ಹಂಗೇನಾದ್ರೂ ಇದ್ರೆ ತನಿಖೆ ಮಾಡುತ್ತೇವೆ, ಎಂದು ತಿಳಿಸಿದರು.