ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ
YOUNG MAN DEAD BODY FOUND WHO MISSING IN RAJAKALUVE

ರಾಜಕಾಲುವೆಯಲ್ಲಿ ಮುಳು ಗುತ್ತಿದ್ದ ತನ್ನ ದ್ವಿಚಕ್ರ ವಾಹನವನ್ನು ಹಿಡಿಯಲು ಮುಂದಾದಾಗ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದ ಯುವಕನ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ. ಮೂಲತಃ ಶಿವಮೊಗ್ಗದ ಸಿವಿಎಲ್ ಇಂಜಿನಿಯರ್ ಮಿಥುನ್ (24) ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವವರು. ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದ ಬಸವನಪುರ ವಾರ್ಡಿನ ಗಾಯಿತ್ರಿ ಬಡಾವಣೆಯಲ್ಲಿ ಮಿಥುನ್ ಮನೆ ಮಾಡಿಕೊಂಡು ವಾಸವಾಗಿದ್ದರು.
ಶುಕ್ರವಾರ ರಾತ್ರಿ ಸುರಿದ ಬಾರಿ ಮಳೆಗೆ ಮನೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದು, ನೀರು ನುಗ್ಗಿ ಇವರ ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿತ್ತು. ಇದನ್ನು ನೋಡಿದ ಮಿಥುನ್ ತನ್ನ ಬೈಕ್ ಹಿಡಿಯಲು ಹೋಗಿ ರಾಜಕಾಲುವೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದಾ ಎಸ್‍ಡಿಆರ್‍ಎಫ್ ತಂಡ, ಅಗ್ನಿಶಾಮಕ ದಳ ಮತ್ತು ಬಿಬಿಎಂಪಿ ಸಿಬ್ಬಂದಿ ಕೊಚ್ಚಿಹೋದ ಮಿಥುನ್‍ಗಾಗಿ ನಿನ್ನೆಯಿಂದಲೇ ಶೋಧ ನಡೆಸುತ್ತಿದ್ದರು. ಇಂದು ಬೆಳಗ್ಗೆ ಯುವಕನ ಮೃತ ದೇಹ ಪತ್ತೆಯಾಗಿದೆ.
ಸತತ 48 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ತಂಡಗಳ 30ಕ್ಕೂ ಹೆಚ್ಚು ಸಿಬ್ಬಂದಿ ಇಂದು ಬೆಳಗ್ಗೆ ಶೋಧ ಆರಂಬಿಸುತ್ತಿದ್ದಂತೆ, ಆತ ಕೊಚ್ಚಿ ಕೊಂಡು ಹೋದ ಸ್ಥಳದಿಂದ 1 ಕಿ.ಮೀ. ದೂರದ ಮೋರಿಯಲ್ಲಿ ಆತನ ಶವ ದೊರೆತಿದೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಗನಿಗಾಗಿ ಕಾಯುತ್ತಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.