ರಾಜ್ಯ

ರಸ್ತೆ, ಆರೋಗ್ಯ, ನೀರು ಪೂರೈಕೆ ಕೇಂದ್ರದ ಆದ್ಯತೆ : ಮೋದಿ

ದೇಶದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ನೀರು ಸರಬರಾಜು ಮತ್ತು ಆರೋಗ್ಯ ಸೌಲಭ್ಯಗಳ ಲಭ್ಯತೆ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿ ಪ್ರಗತಿ ಸದಾ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆನವ ಭಾರತ ಹಿಂದಿನ ಸವಾಲುಗಳನ್ನು ನಿವಾರಿಸಿ ವೇಗವಾಗಿ ಬೆಳೆಯುತ್ತಿದೆ, ಈ ಮೂಲಕ ದೇಶ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ.

ಕಳೆದ ಶತಮಾನದಲ್ಲಿಯೇ ಜನರಿಗೆ ತಲುಪಬೇಕಾದ ಸೌಲಭ್ಯಗಳು ಈಗ ಜನರನ್ನು ತಲುಪುತ್ತಿವೆ” ಎಂದು ಹೇಳಿದ್ದಾರೆ.ಹಿಮಾಚಲ ಪ್ರದೇಶದ ಊನಾ ರೈಲು ನಿಲ್ದಾಣದಿಂದ ನವದೆಹಲಿಗೆ ತರಳುವ ವೇಗದ ರೈಲುಗಳಲ್ಲಿ ಒಂದಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ನಾಲ್ಕನೇ ರೈಲಿಗೆ ಹಸಿರು ನಿಶಾನೆ ತೋರಿದ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

೪೦ ವರ್ಷಗಳ ಹಿಂದೆ ಸಣ್ಣ ರೈಲು ಮಾರ್ಗಕ್ಕೆ ಮುದ್ರೆ ಹಾಕಿ, ಕಡತ ರೂಪಿಸಿ, ದೆಹಲಿಯಲ್ಲಿ ಕೂತು ಸರ್ಕಾರ ಸಹಿ ಮಾಡುತ್ತಿತ್ತು. ಚುನಾವಣೆಗಳು ಬಂದಾಗ, ಜನರನ್ನು ವಂಚಿಸಿ ಮತಪಡೆಯಲು ಮಾತ್ರ ಹವಣಿಸುತ್ತಿದ್ದವು. ಆದರೆ ರಾಜ್ಯದಲ್ಲಿ ಯಾವುದೇ ಕೆಲಸ ಮಾಡಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಹೊಸದಾಗಿ ವಂದೇ ಭಾರತ್ ರೈಲಿನ ಉದ್ಘಾಟನೆಯಿಂದ ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೂ ಪೂರಕವಾಗಲಿದೆ. ದೇಶದಲ್ಲಿ ಆರಂಭವಾದ ನಾಲ್ಕನೇ ವಂದೇ ಭಾರತ್ ರೈಲು ಇದಾಗಿದೆ ಎಂದು ತಿಳಿಸಿದ್ದಾರೆ.ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ಈಗಾಗಲೇ ದೇಶದಲ್ಲಿ ನವದೆಹಲಿ- ವಾರಣಸಿ, ನವದೆಹಲಿ-ಶ್ರೀ ಮಾತಾ ವೈಷ್ಣವೋ ದೇವಿ ಕತ್ರಾ ಮತ್ತು ಗಾಂಧಿನಗರ ಮತ್ತು ಮುಂಬೈ ನಡುವೆ ಮೂರು ವಂದೇ ಭಾರತ್ ರೈಲು ಈಗಾಗಲೇ ಸಂಚಾರ ಮಾಡುತ್ತಿವೆ.

ಇದರಿಂದ ವೇಗವಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ತಲುಪಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರು ಮಾತನಾಡಿ, ಹಿಮಾಚಲಕ್ಕೆ ವಂದೇ ಭಾರತ್ ರೈಲು, ಬಲ್ಕ್ ಡ್ರಗ್ ಪಾರ್ಕ್ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ವಿಶೇಷ ಸ್ಥಾನಮಾನ ವಾಪಸ್ ಕೊಟ್ಟಿದ್ದಾರೆ. ಬಲ್ಕ್ ಡ್ರಗ್ ಪಾರ್ಕ್ ಸುಮಾರು ೧೫-೨೦,೦೦೦ ಕೋಟಿ ಹೂಡಿಕೆ ತರಬಲ್ಲದು ಇದರಿಂದ ೩೦,೦೦೦ ಕ್ಕೂ ಹೆಚ್ಚು ಉದ್ಯೋಗ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.ಮುಖ್ಯಮಂತ್ರಿ ಜೈರಾಮ್ ಠಾಕೂರ್, ಸೇರಿದಂತೆ ಹಲವರು ಈ ಕ್ಷಣಕ್ಕೆ ಸಾಕ್ಷಿಯಾದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button