ರಸ್ತೆಗುಂಡಿ ಮುಚ್ಚುವ ಪ್ರಕ್ರಿಯೆ ಚುರುಕು

ಬೆಂಗಳೂರಿನಲ್ಲಿ ನ. ೨ ರಿಂದ ಎರಡು ದಿನಗಳ ಕಾಲ ’ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ ನಡೆಯಲಿರುವ ಹಿನ್ನೆಲೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ.
ರಸ್ತೆ ಗುಂಡಿ ಪತ್ತೆ ಸಂಖ್ಯೆ ಬರೋಬ್ಬರಿ ೨೫ ಸಾವಿರಕ್ಕೆ ಏರಿಕೆಯಾಗಿರುವ ನಡುವೆ ಕಳೆದ ಹತ್ತುದಿನಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ಬಿಬಿಎಂಪಿ ಚುರುಕುಗೊಳಿಸಿದೆ.ಮೇ ೧ರಿಂದ ಈವರೆಗೆ ನಗರದಲ್ಲಿ ೨೪,೯೬೭ ರಸ್ತೆ ಗುಂಡಿ ಗುರುತಿಸಲಾಗಿದೆ.
ಈ ಪೈಕಿ ೧೭,೩೨೨ ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ ೭,೬೪೫ ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಮುಚ್ಚುವುದು ಬಾಕಿ ಇದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಬಿಬಿಎಂಪಿ ಪೂರ್ವ ವಲಯದಲ್ಲಿ ಅತಿ ಹೆಚ್ಚು ರಸ್ತೆ ಗುಂಡಿಗಳು ಪತ್ತೆಯಾಗಿದ್ದು, ಉಳಿದಂತೆ ಪಶ್ಚಿಮ, ದಕ್ಷಿಣ ಹಾಗೂ ಆರ್‌ಆರ್‌ನಗರ ವಲಯದಲ್ಲಿ ೩ ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳು ಪತ್ತೆಯಾಗಿವೆ. ಉಳಿದಂತೆ ದಾಸರಹಳ್ಳಿಯಲ್ಲಿ ೨ ಸಾವಿರದಷ್ಟುಗುಂಡಿ ಪತ್ತೆಯಾದರೂ ಕೇವಲ ೬೦೦ ರಸ್ತೆ ಗುಂಡಿ ಮುಚ್ಚಿದ್ದಾರೆ.
ಇನ್ನೂ,ದೇಶ ಹಾಗೂ ವಿದೇಶಗಳ ವಿವಿಧ ಕಡೆಗಳಿಂದ ಹೂಡಿಕೆದಾರರು ಬರುತ್ತಿರುವ ಹಿನ್ನೆಲೆಯಲ್ಲಿ ನಗರದ ಸ್ವಚ್ಛತೆ ಹಾಗೂ ಸೌಂದರ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ವಿವಿಧ ಕಾರ್ಯ ನಡೆಸಲಾಗುತ್ತಿದೆ.
ರಸ್ತೆಗಳ ಡಾಂಬರೀಕರಣ, ರಸ್ತೆ ಗುಂಡಿಗಳನ್ನು ಮುಚ್ಚುವುದು, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ತ್ಯಾಜ್ಯ, ಕಟ್ಟಡ ಭಗ್ನಾವಶೇಷಗಳ ತೆರವು, ರಸ್ತೆ ಬದಿಯಿರುವ ಮರಗಳ ಕೊಂಬೆಗಳ ಕಟಾವು, ಫ್ಲೆಕ್ಸ್ ತೆರವು, ಬೀದಿ ದೀಪಗಳನ್ನು ಸರಿಡಿಸುವುದು, ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳಲ್ಲಿ ವಿಭಜಕಗಳ ಅಭಿವೃದ್ಧಿ ಹಾಗೂ ಸುಂದರ ಸಸಿಗಳನ್ನು ಅಭಿಯಾನದಲ್ಲಿ ನಡೆಲಾಗುತ್ತಿದೆ.